ADVERTISEMENT

ಧಾರವಾಡ | ಕೃಷಿ ಮೇಳದಲ್ಲಿ ಆಕರ್ಷಿಸಿದ ಜಲಚರ ಕೀಟಗಳ ಅಕ್ವೇರಿಯಂ

ನೀರ್ಚೇಳು, ಉಲ್ಟಾ ಈಜುವ ನೀರು ತಿಗಣಿ, ಮುಳುಗುವ ದುಂಬಿಗಳ ಈಜಾಟ

ಕೃಷ್ಣಿ ಶಿರೂರ
Published 24 ಸೆಪ್ಟೆಂಬರ್ 2024, 6:05 IST
Last Updated 24 ಸೆಪ್ಟೆಂಬರ್ 2024, 6:05 IST
ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ನಡೆಯುತ್ತಿರುವ ಕೃಷಿ ಮೇಳದಲ್ಲಿ ಆಕರ್ಷಿಸುತ್ತಿರುವ ಜಲಚರ ಕೀಟಗಳ ಅಕ್ವೇರಿಯಂ
ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ನಡೆಯುತ್ತಿರುವ ಕೃಷಿ ಮೇಳದಲ್ಲಿ ಆಕರ್ಷಿಸುತ್ತಿರುವ ಜಲಚರ ಕೀಟಗಳ ಅಕ್ವೇರಿಯಂ   

ಧಾರವಾಡ: ಮೀನಿನ ಅಕ್ವೇರಿಯಂ ಎಲ್ಲರಿಗೂ ಗೊತ್ತು. ಅದರಲ್ಲೂ ವಾಸ್ತು ಮೀನಿನ ಅಕ್ವೇರಿಯಂಗೆ ವಿಶೇಷ ಸ್ಥಾನಮಾನ, ಮೌಲ್ಯ ಇದೆ. ಆದರೆ, ಜಲಚರ ಕೀಟಗಳ ಅಕ್ವೇರಿಯಂ ಬಗ್ಗೆ ಕೇಳಿದ್ದೀರಾ?

ಜಲಚರ ಕೀಟಗಳ ಅಕ್ವೇರಿಯಂ ಈ ಬಾರಿಯ ಕೃಷಿ ಮೇಳದ ಫಲ–ಪುಷ್ಪ ಪ್ರದರ್ಶನ ವಿಭಾಗದ ಕೀಟಪ್ರಪಂಚದಲ್ಲಿ ನೋಡುಗರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.

ನೀರ್ಚೇಳು, ಉಲ್ಟಾ ಈಜುವ ನೀರು ತಿಗಣಿ, ನೀರಿನ ಜಿರಲೆ, ಹಳದಿ ಚುಕ್ಕೆಯುಳ್ಳ ಮುಳುಗುವ ದುಂಬಿ, ವಾಟರ್‌ ಬೋಟ್‌ಮ್ಯಾನ್‌, ಮಳೆ ಹುಳುಗಳು ಅಕ್ವೇರಿಯಂನಲ್ಲಿ ಈಜಾಡಿ ನೋಡುಗರ ಹುಬ್ಬೇರಿಸುತ್ತಿವೆ.

ADVERTISEMENT

ರೈತರಿಗೆ ಈ ಜಲಚರ ಕೀಟಗಳು ಪರಿಚಿತ. ಆದರೆ ಹೆಚ್ಚಿನವರಿಗೆ ಅಪರಿಚಿತವೆನಿಸುವ ಈ ಜಲಚರಕೀಟಗಳನ್ನು ಅಕ್ವೇರಿಯಂನಲ್ಲಿಟ್ಟು ನೋಡುಗರನ್ನು ಆಕರ್ಷಿಸುವಂತೆ ಮಾಡಿದವರು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೀಟಶಾಸ್ತ್ರ ವಿಭಾಗದ ಶಿವಕುಮಾರ ಕೆ.ಟಿ.

ಕಳೆದ ವರ್ಷ, ಭವಿಷ್ಯದ ಆಹಾರವಾಗಲಿರುವ ಕೀಟಗಳ ಆಹಾರದ ಪ್ರಾತ್ಯಕ್ಷಿಕೆ ಸಿದ್ಧಪಡಿಸಲಾಗಿತ್ತು.  ಮುಂದುವರಿದ ಭಾಗವಾಗಿ ಈ ವರ್ಷ ಜಲಚರ ಕೀಟಗಳ ಅಕ್ವೇರಿಯಂ ಅನ್ನು ಸಿದ್ಧಪಡಿಸಲಾಗಿದೆ ಎಂದು ಶಿವಕುಮಾರ ಕೆ.ಟಿ. ‘ಪ್ರಜಾವಾಣಿ’ಗೆ ವಿವರಿಸಿದರು.

ಅಕ್ವೇರಿಯಂನಲ್ಲಿ ಇರುವ ಜಲಚರ ಕೀಟಗಳನ್ನು ಕುತೂಹಲದಿಂದ ನೋಡಿ ಕೆಲವರು ಅಚ್ಚರಿ ಪಟ್ಟರೆ, ಕೆಲವು ಮಕ್ಕಳು ಕೈಯಲ್ಲಿ ಹಿಡಿದು ಪುಳಕಗೊಂಡರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳದ ಕೀಟಪ್ರಪಂಚ ಪ್ರದರ್ಶನದಲ್ಲಿ ಆಕರ್ಷಿಸುತ್ತಿರುವ ಜಲಚರ ಕೀಟಗಳ ಅಕ್ವೇರಿಯಂ
ಮನೆಗಳಲ್ಲಿ ಮೀನುಗಳ ಅಕ್ವೇರಿಯಂ ಅನ್ನು ಹೇಗೆ ನಿರ್ವಹಿಸುತ್ತೆವೆಯೋ ಹಾಗೆ ಜಲಚರ ಕೀಟಗಳ ಅಕ್ವೇರಿಯಂ ಅನ್ನು ನಿರ್ವಹಿಸಬಹುದು
ಶಿವಕುಮಾರ ಕೆ.ಟಿ ಸಂಶೋಧನಾ ವಿದ್ಯಾರ್ಥಿ‌ ಕೀಟಶಾಸ್ತ್ರ ವಿಭಾಗ ಧಾರವಾಡ ಕೃಷಿ ವಿ.ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.