ADVERTISEMENT

ಕುಂದಗೋಳ ಉಪ ಚುನಾವಣೆ 19ರಂದು; ಮತದಾನಕ್ಕೆ ಸಕಲ ಸಿದ್ಧತೆ

ಬಿಗಿ ಪೊಲೀಸ್ ಬಂದೋಬಸ್ತ್

​ಪ್ರಜಾವಾಣಿ ವಾರ್ತೆ
Published 18 ಮೇ 2019, 14:05 IST
Last Updated 18 ಮೇ 2019, 14:05 IST
ಕುಂದಗೋಳ ಪಟ್ಟಣದ ಹರಭಟ್ಟ ಮಹಾವಿದ್ಯಾಲಯದ ಮಸ್ಟರಿಂಗ್ ಕೇಂದ್ರದಿಂದ ನಿಯೋಜಿತ ಮತಗಟ್ಟೆಗಳಿಗೆ ಚುನಾವಣಾ ಸಿಬ್ಬಂದಿ ಮತ ಯಂತ್ರಗಳೊಂದಿಗೆ ಶನಿವಾರ ತೆರಳಿದರು– ಪ್ರಜಾವಾಣಿ ಚಿತ್ರ
ಕುಂದಗೋಳ ಪಟ್ಟಣದ ಹರಭಟ್ಟ ಮಹಾವಿದ್ಯಾಲಯದ ಮಸ್ಟರಿಂಗ್ ಕೇಂದ್ರದಿಂದ ನಿಯೋಜಿತ ಮತಗಟ್ಟೆಗಳಿಗೆ ಚುನಾವಣಾ ಸಿಬ್ಬಂದಿ ಮತ ಯಂತ್ರಗಳೊಂದಿಗೆ ಶನಿವಾರ ತೆರಳಿದರು– ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಆಡಳಿತ ಮತ್ತು ವಿರೋಧ ಪಕ್ಷಕ್ಕೆ ಪ್ರತಿಷ್ಠೆಯಾಗಿರುವ, ರಾಜ್ಯದ ಗಮನ ಸೆಳೆದಿರುವ ಕುಂದಗೋಳ ಉಪ ಚುನಾವಣೆಯ ಮತದಾನ 19ರಂದು ನಡೆಯಲಿದೆ.

ಮತದಾನಕ್ಕೆ ಜಿಲ್ಲಾಡಳಿತ ಸಲಕ ಸಿದ್ಧತೆ ಮಾಡಿಕೊಂಡಿದ್ದು, 214 ಮತಗಟ್ಟೆಗಳನ್ನು ತೆರೆಯಲಾಗಿದೆ. ಮತದಾನ ಪ್ರಕ್ರಿಯೆ ಶಾಂತಿಯಿಂದ ನಡೆಯಲು ಹಾಗೂ ಜನರು ಧೈರ್ಯವಾಗಿ ಬಂದು ಮತದಾನ ಮಾಡಲು ಅನುಕೂಲವಾಗುವಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪಟ್ಟಣದ ಹರಭಟ್ಟ ಮಹಾವಿದ್ಯಾಲಯದ ಮಸ್ಟರಿಂಗ್ ಕೇಂದ್ರದಿಂದ ನಿಯೋಜಿತ ಮತಗಟ್ಟೆಗಳಿಗೆ ಸಿಬ್ಬಂದಿ ಶನಿವಾರ ಮಧ್ಯಾಹ್ನವೇ ತೆರಳಿದರು.

33 ಸೂಕ್ಷ್ಮ ಹಾಗೂ 38 ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಅರೆಸೇನಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಂಗವಿಕಲರು ತಮ್ಮ ಹಕ್ಕು ಚಲಾಯಿಸಲು ಗಾಲಿ ಕುರ್ಚಿ ಹಾಗೂ ಸಹಾಯಕರನ್ನು ನೇಮಕ ಮಾಡಲಾಗಿದೆ. 26 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಯನ್ನು ನೇರವಾಗಿ ವೀಕ್ಷಿಸಲು ಅನುಕೂಲವಾಗುವಂತೆ ವೆಬ್‌ಕಾಸ್ಟ್‌ ಮಾಡಲಾಗುತ್ತದೆ.

ADVERTISEMENT

‘ಮತದಾರರು ಯಾವುದೇ ಪ್ರಲೋಭನೆಗೆ ಒಳಗಾಗದೆ ಆತ್ಮಸಾಕ್ಷಿಗೆ ಅನುಗುಣವಾಗಿ ತಪ್ಪದೆ ಮತ ಚಲಾಯಿಸಬೇಕು’ ಎಂದು ಚುನಾವಣಾಧಿಕಾರಿ ವಿ. ‍ಪ್ರಸನ್ನ ‘ಪ್ರಜಾವಾಣಿ’ಗೆ ತಿಳಿಸಿದರು.

ಪೌರಾಡಳಿತ ಸಚಿವರಾಗಿದ್ದ ಸಿ.ಎಸ್. ಶಿವಳ್ಳಿ ಅವರ ಹಠಾತ್ ನಿಧನದಿಂದಾಗಿ ಕುಂದಗೋಳ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಶಿವಳ್ಳಿ ಅವರ ಪತ್ನಿ ಕುಸುಮಾವತಿ ಶಿವಳ್ಳಿ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಹಿಂದಿನ ಚುನಾವಣೆಯಲ್ಲಿ ಶಿವಳ್ಳಿ ಅವರ ವಿರುದ್ಧ ಪರಾಭವಗೊಂದಿದ್ದ ಎಸ್‌.ಐ ಚಿಕ್ಕನಗೌಡ್ರ ಬಿಜೆಪಿ ಅಭ್ಯರ್ಥಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.