ADVERTISEMENT

ಹುಬ್ಬಳ್ಳಿ | ಸಹಾಯಧನ ಕೊರತೆ: PhD ಅಧ್ಯಯನಕ್ಕೆ ಕುತ್ತು

ಅಡಕತ್ತರಿಯಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಭವಿಷ್ಯ

ಮಹಮ್ಮದ್ ಶರೀಫ್
Published 23 ಜುಲೈ 2024, 4:17 IST
Last Updated 23 ಜುಲೈ 2024, 4:17 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಹುಬ್ಬಳ್ಳಿ: ಅಲ್ಪಸಂಖ್ಯಾತ ಸಮುದಾಯದ ಪಿಎಚ್.ಡಿ ಸಂಶೋಧನಾರ್ಥಿಗಳಿಗೆ ಜೆಆರ್‌ಎಫ್ ಮಾದರಿ ನೀಡಲಾಗುತ್ತಿದ್ದ ತಿಂಗಳ ₹25 ಸಾವಿರ ಸಹಾಯಧನವನ್ನು ಸರ್ಕಾರ ₹10 ಸಾವಿರಕ್ಕೆ ಇಳಿಸಿದ್ದು, ಅಧ್ಯಯನಕ್ಕೆ ಸಮಸ್ಯೆಯಾಗಿದೆ.

‘2017ರಲ್ಲಿ ಕಾಂಗ್ರೆಸ್‌ ಸರ್ಕಾರವಿದ್ದಾಗ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಈ ಯೋಜನೆ ಜಾರಿಗೊಳಿಸಿ, ₹25 ಸಾವಿರ ಸಹಾಯಧನ ನೀಡಲಾಗುತಿತ್ತು. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ, ಅದನ್ನು  ₹10 ಸಾವಿರಕ್ಕೆ ಇಳಿಸಿತು. ಇದಕ್ಕೆ ವಿರೋಧ ವ್ಯಕ್ತವಾದ ಬಳಿಕ ಅದೇ ಅವಧಿಯಲ್ಲಿ ₹25 ಸಾವಿರ ಸಹಾಯಧನ ನೀಡುವುದು ಮುಂದುವರೆಯಿತು. ಆದರೆ, ಒಂದು ವರ್ಷದಿಂದ ಕಾಂಗ್ರೆಸ್ ಸರ್ಕಾರ ಯಾವುದೇ ಸುತ್ತೋಲೆ, ಆದೇಶ ಹೊರಡಿಸದೆ  ₹ 10ಸಾವಿರ ಸಹಾಯಧನ ಮಾತ್ರ ನಮ್ಮ ಖಾತೆಗೆ ಜಮಾ ಮಾಡುತ್ತಿದೆ’ ಎಂದು ಸಂಶೋಧನಾರ್ಥಿಗಳು ತಿಳಿಸಿದರು.

ADVERTISEMENT

‘ಸಹಾಯಧನ ಕಡಿತದ ಬಗ್ಗೆ ಸುತ್ತೋಲೆ ಅಥವಾ ಮಾಹಿತಿ ಇಲ್ಲ. ₹25 ಸಾವಿರ ಇದೆಯೆಂದು ಪಿಎಚ್‌.ಡಿ ಅಧ್ಯಯನಕ್ಕೆ ಮುಂದಾದೆವು. ಆದರೆ, ಈಗ ಪೂರ್ಣಪ್ರಮಾಣದ ಅಧ್ಯಯನ ಮಾಡಲು ಸಮಸ್ಯೆಯಾಗಿದೆ. ಸಹಾಯಧನ ಕಡಿತ ಮಾಡದಂತೆ ಕೋರಿ ಹಲವು ಬಾರಿ ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ’ ಎಂದು ಅವರು ತಿಳಿಸಿದರು.

‘ವಿಜ್ಞಾನ ವಿಷಯದಲ್ಲಿ ಸಂಶೋಧನೆ ನಡೆಸುವವರಿಗೆ ಹೆಚ್ಚು ಖರ್ಚು ಇರುತ್ತದೆ. ಪ್ರಯೋಗಾಲಯಕ್ಕೆ ಸಂಬಂಧಿಸಿದ ಉಪಕರಣಗಳ ಖರೀದಿ, ಪ್ರಯೋಗದ ಫಲಿತಾಂಶಗಳ ಶೇಖರಣೆಗೆ ಹೆಚ್ಚು ಖರ್ಚು ಮಾಡಬೇಕಾಗುತ್ತದೆ’ ಎಂದು ದಾವಣಗೆರೆ ವಿಶ್ವವಿದ್ಯಾಲಯದ ರಸಾಯನ ವಿಜ್ಞಾನ ವಿಭಾಗದ ಸಂಶೋಧನಾರ್ಥಿ ಮಲ್ಲಿಕಾ ರಹೀಂ ತಿಳಿಸಿದರು.

ಸಂಶೋಧನಾರ್ಥಿಗಳ ಬೇಡಿಕೆ ಈಡೇರಿಸಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಒಕ್ಕೂಟ (ಎಸ್‌ಎಫ್‌ಐ) ಮಂಗಳವಾರ (ಜುಲೈ 23) ರಾಜ್ಯವ್ಯಾಪಿ ಪ್ರತಿಭಟನೆ ಹಮ್ಮಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.