ADVERTISEMENT

ಜಮೀರ್‌ ವಿರುದ್ಧ ನ್ಯಾಯಾಂಗ ಹೋರಾಟ: ಬಸನಗೌಡ ಪಾಟೀಲ ಯತ್ನಾಳ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2024, 16:25 IST
Last Updated 27 ಸೆಪ್ಟೆಂಬರ್ 2024, 16:25 IST
<div class="paragraphs"><p>ಬಸನಗೌಡ ಪಾಟೀಲ ಯತ್ನಾಳ</p></div>

ಬಸನಗೌಡ ಪಾಟೀಲ ಯತ್ನಾಳ

   

ಹುಬ್ಬಳ್ಳಿ: ‘ನ್ಯಾಯಾಂಗ ವ್ಯವಸ್ಥೆ ವಿರುದ್ಧ ಸಚಿವ ಜಮ್ಮೀರ್‌ ಅಹ್ಮದ್‌  ನೀಡಿದ ಹೇಳಿಕೆಯನ್ನು ಸುಮ್ಮನೆ ಬಿಡುವ ಮಾತಿಲ್ಲ. ಈಗಾಗಲೇ ನಮ್ಮ ವಕೀಲರ ಸಲಹೆ ಪಡೆದುಕೊಳ್ಳುತ್ತಿದ್ದೇನೆ. ನ್ಯಾಯಾಂಗ ನಿಂದನೆ ಕೇಸ್‌ ದಾಖಲಿಸುವ ಬಗ್ಗೆ ಚಿಂತನೆ ನಡೆಸಿದ್ದೇನೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರ  ಜೊತೆ ಮಾತನಾಡಿದ ಅವರು, ‘ದೇಶದ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅವರು ಎಷ್ಟೊಂದು ವಿಷ ತುಂಬಿಕೊಂಡಿದ್ದಾರೆ ಎನ್ನುವುದು ಇದರಿಂದ ಗೊತ್ತಾಗುತ್ತದೆ. ಅವರ ತಲೆಯಲ್ಲಿ  ಸಗಣಿ ತುಂಬಿಕೊಂಡಿದೆಯೋ ಗೊತ್ತಿಲ್ಲ’ ಎಂದು ಟೀಕಿಸಿದರು.

ADVERTISEMENT

ಸಿ.ಎಂ‌. ರಾಜೀನಾಮೆ ವಿಚಾರ ಮಾತನಾಡಿದ ಅವರು, ‘ಈ ಹಿಂದೆ ದೆಹಲಿ‌ ಮುಖ್ಯಮಂತ್ರಿ‌ ಕೇಜ್ರಿವಾಲ್‌ ಸಿಎಂ‌ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಅಂತಿದ್ರೂ ಈಗ‌ ಅವರೇ ರಾಜೀನಾಮೆ ನೀಡಿದ್ದಾರೆ. ಒಂದು‌ ಕಾಲ‌ ಬರುತ್ತೆ ಆಗ‌ ಸಿದ್ದರಾಮಯ್ಯನವರೇ ರಾಜೀನಾಮೆ ನೀಡುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಸಿದ್ದರಾಮಯ್ಯ ವಿರುದ್ಧ ಮುಡಾ ದಾಖಲೆಗಳನ್ನು ಅವರ  ಪಕ್ಷದವರೇ  ನೀಡಿದ್ದಾರೆ. ಅವರಲ್ಲಿರುವ ಒಳಜಗಳ ಇಂದು ರಾಜೀನಾಮೆ ಪಡೆಯುವ  ಹಂತಕ್ಕೆ ಬಂದಿದೆ. ಮುಖ್ಯಮಂತ್ರಿಯಾಗಲು ಕಾಂಗ್ರೆಸ್‌ನಲ್ಲಿ ಹಪಾಹಪಿ ಜೋರಾಗಿದೆ. ಇಂದು ಸಿದ್ದರಾಮಯ್ಯ ಅವರೊಂದಿಗೆ ಯಾರೂ ಇಲ್ಲ. ಇಷ್ಟು ದಿನ ಅವರ ಹಿಂದೆ ಇದ್ದವರೆಲ್ಲ ಈಗ ಸಿ.ಎಂ ಕುರ್ಚಿಗಾಗಿ  ಓಡಾಟ ನಡೆಸಿದ್ದಾರೆ. ಸಿದ್ದರಾಮಯ್ಯವರನ್ನು‌ ಮುಗಿಸುವ  ಷಡ್ಯಂತ್ರ ಕಾಂಗ್ರೆಸನಲ್ಲೇ ನಡೆದಿದೆ, ವಿರೋಧ ಪಕ್ಷದಲ್ಲಿ ಅಲ್ಲ’ ಎಂದು ಹೇಳಿದರು.

‘ಅವರು ರಾಜೀನಾಮೆ ನೀಡುವುದಿಲ್ಲ ಎನ್ನುವುದು ಸರಿಯಲ್ಲ. ಅವರು ರಾಜೀನಾಮೆ ನೀಡದಿದ್ದರೆ ನಿಷ್ಪಕ್ಷಪಾತ ತನಿಖೆ ನಡೆಯಲು ಹೇಗೆ ಸಾಧ್ಯ. ಮುಡಾ ಹಗರಣದಲ್ಲಿ ಅವರು ರಾಜೀನಾಮೆ ನೀಡಲೇಬೇಕು. ಅವರು ಪ್ರಾಮಾಣಿಕರಾಗಿದ್ದರೆ  ಏಕೆ ಭಯ ಪಡಬೇಕು. ರಾಜೀನಾಮೆ ನೀಡಿ ತನಿಖೆ ಎದುರಿಸಲಿ. ನಿರ್ದೋಷಿಯಾಗಿ ಹೊರಬರಲಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.