ADVERTISEMENT

'ಇಂಡಿಯಾ ಬುಕ್ ಆಫ್ ರೆಕಾರ್ಡ್‌' ಸಾಧನಗೈದ 6 ವರ್ಷದ ಬಾಲಕಿ ವಿಶ್ವಕೀರ್ತಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2023, 23:30 IST
Last Updated 9 ಜುಲೈ 2023, 23:30 IST
ವಿಶ್ವಕೀರ್ತಿ ಕಾಂಬಳೆ
ವಿಶ್ವಕೀರ್ತಿ ಕಾಂಬಳೆ   

ಹುಬ್ಬಳ್ಳಿ: ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ 300 ಪ್ರಶ್ನೆಗಳಿಗೆ ಉತ್ತರಿಸುವ ಸಾಮರ್ಥ್ಯ ಹೊಂದಿರುವ ಹುಬ್ಬಳ್ಳಿಯ ವಿದ್ಯಾನಗರದ ನೇಕಾರ ಕಾಲೊನಿಯ ಆರು ವರ್ಷದ ಬಾಲಕಿ ವಿಶ್ವಕೀರ್ತಿ ಗಣೇಶ ಕಾಂಬಳೆ 3 ನಿಮಿಷ 41 ಸೆಕೆಂಡ್‌ನಲ್ಲಿ ನೂರು ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ತನ್ನ ಹೆಸರು ದಾಖಲಿಸಿದ್ದಾಳೆ.

ಗಣೇಶ ಹಾಗೂ ಶಿಲ್ಪಾ ಕಾಂಬಳೆ ಅವರ ಪುತ್ರಿಯಾದ ವಿಶ್ವಕೀರ್ತಿ, 30 ಶ್ಲೋಕಗಳನ್ನು ನಿರರ್ಗಳವಾಗಿ ಹೇಳುತ್ತಾಳೆ. ವಿಶ್ವಕ್ಕೆ ಸಂಬಂಧಪಟ್ಟ, ಸಮಾಜಶಾಸ್ತ್ರ, ವಿಜ್ಞಾನ ಸಂಕೇತ, ಕನ್ನಡ ವ್ಯಾಕರಣದಲ್ಲಿಯೂ ಕೂಡ ಪರಿಣತಿ ಹೊಂದಿರುವುದು ವಯಸ್ಸಿಗೆ ಮೀರಿದ ಸಾಧನೆಯಾಗಿದೆ. ಮಗಳ ಸಾಧನೆಯು ಹೆತ್ತವರ ಖುಷಿಯನ್ನು ಇಮ್ಮಡಿಗೊಳಿಸಿದೆ.

ಒಂದು ವರ್ಷದವಳಿದ್ದಾಗಲೇ ಓದುವ ಆಸಕ್ತಿ ಗಮನಿಸಿದ ಪೋಷಕರು ಸೂಕ್ತ ತರಬೇತಿ ನೀಡಿ ಬಾಲಕಿಯ ಪ್ರತಿಭೆ ಅನಾವರಣಕ್ಕೆ ಮುಂದಾಗಿದ್ದಾರೆ. ವಿಶ್ವಕೀರ್ತಿಯ ಸಾಧನೆಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಜೂನ್‌ 26ರಂದು ಪ್ರಶಸ್ತಿ ಪತ್ರ ಪಡೆದಿದ್ದಾಳೆ.

ADVERTISEMENT

‘ತೊದಲು ನುಡಿಯಲ್ಲಿಯೇ ಐಎಎಸ್ ಕನಸು ಕಂಡಿರುವ ನಮ್ಮ ಮಗಳು ಈಗಾಗಲೇ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದಾಳೆ. ಯಾವುದೇ ವಿಷಯವಿದ್ದರೂ ಓದಬೇಕು. ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬ ಹೆಬ್ಬಯಕೆ ಹೊಂದಿದ್ದಾಳೆ’ ಎಂದು ಪೋಷಕರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.