ಧಾರವಾಡ: ನಗರದ ಹೈಕೋರ್ಟ್ ಪೀಠದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ 434 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಯಿತು. ₹ 9.55 ಕೋಟ ಪರಿಹಾರವಾಗಿ ಪಾವತಿಸಲು ಆದೇಶಿಸಲಾಯಿತು
ಹಿರಿಯ ನ್ಯಾಯಮೂರ್ತಿ ಎಸ್. ಜಿ. ಪಂಡಿತ ಮಾರ್ಗದರ್ಶನದಲ್ಲಿ ಅದಾಲತ್ ನಡೆಯಿತು.ನ್ಯಾಯಮೂರ್ತಿಗಳಾದ ಸಿ.ಎಂ. ಪೂಣಚ್ಚ, ಜಿ.ಬಸವರಾಜ, ಟಿ.ಜಿ.ಶಿವಶಂಕರೆಗೌಡ ಮತ್ತು ನ್ಯಾಯಿಕ ಸಂಧಾನಕಾರರಾಗಿ ವೆಂಕಟೇಶ ನಾಯ್ಕ, ಟಿ ಹಾಗೂ ನ್ಯಾಯಕೇತರ ಸಂಧಾನಕಾರರಾಗಿ ಹರ್ಷ ದೇಸಾಯಿ, ಆರ್. ಎಚ್. ಅಂಗಡಿ, ವಿ.ಜಿ. ದಳವಾಯಿ, ಗಿರಿಜಾ ಹಿರೇಮಠ, ಎಂ .ಟಿ. ಬಾಂಗಿ ವಕೀಲರಿಂದ ಐದು ಪೀಠಗಳಿದ್ದವು. ರಾಜಿ ಸಂಧಾನಕ್ಕೆ ಗುರುತಿಸಲಾಗಿದ್ದ 1101 ಪ್ರಕರಣಗಳ ಪೈಕಿ 434 ಪ್ರಕರಣಸಲಾಯಿತು
ಧಾರವಾಡ ನಗರದ ದಾಸನಕೊಪ್ಪ ಮತ್ತು ಕಿಲ್ಲೇದಾರ ಕುಟುಂಬಗಳ ನಡುವೆ ಸುಮಾರು 23 ವರ್ಷಗಳಿಂದ ಇದ್ದದ ಪಾಲು ಹಿಸ್ಸೆಯ ವ್ಯಾಜ್ಯವನ್ನು ಪರಿಹರಿಸಲಾಯಿತು.
ನ್ಯಾಯಮೂರ್ತಿ ಎಸ್.ಜಿ.ಪಂಡಿತ ಮತ್ತು ಸಂಧಾನಕಾರ ಹರ್ಷ ದೇಸಾಯಿ ಅವರು ದಾವೆಯನ್ನು ಇತ್ಯರ್ಥಗೊಳಿಸಿದರು.
ಅಪಘಾತ ಪರಿಹಾರ ಪ್ರಕರಣಗಳ ಮತ್ತು ಚೆಕ್ ಅಮಾನ್ಯ ಪ್ರಕರಣಗಳ ಮೇಲ್ಮನವಿಗಳು ಮತ್ತು ರಿಟ್ ಅರ್ಜಿಗಳನ್ನು ಇತ್ಯರ್ಥಗೊಳಿಸಲಾಯಿತು. 10 ರಿಂದ 15 ವರ್ಷಗಳ ಹಳೆಯ ಚೆಕ್ ಅಮಾನ್ಯ ಪ್ರಕರಣಗಳು ಇತ್ಯರ್ಥವಾಗಿವೆ ಎಂದು ಹೈಕೋರ್ಟ್ ಧಾರವಾಡ ಪೀಠದ ವಿಲೇಖನಾಧಿಕಾರಿ ಜೆರಾಲ್ ರುಡಾಲ್ಫ್ ಮೆಂಡೋನಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.