ADVERTISEMENT

ಸಂಕ್ರಾಂತಿ: ಎಳ್ಳು–ಬೆಲ್ಲ ಹಂಚಿ ಸಂಭ್ರಮಾಚರಣೆ

ರಂಗಾಯಣ ಆವರಣದಲ್ಲಿ ಸಂಕ್ರಾಂತಿ ಸಡಗರ

​ಪ್ರಜಾವಾಣಿ ವಾರ್ತೆ
Published 14 ಜನವರಿ 2024, 16:28 IST
Last Updated 14 ಜನವರಿ 2024, 16:28 IST
ಧಾರವಾಡದ ರಂಗಾಯಣ ಆವರಣದಲ್ಲಿ ಮಕರ ಸಂಕ್ರಮಣದ ಸಂಭ್ರಮ ಆಚರಿಸುವುದಕ್ಕಾಗಿ ಮಹಿಳೆಯರು ತರಹೇವಾರಿ ಪಲ್ಯೆ, ರೊಟ್ಟಿ ಹಾಗೂ ವಿವಿಧ ಖಾದ್ಯಗಳೊಂದಿಗೆ ಭಾಗವಹಿಸಿ ಸವಿಯೂಟ ಮಾಡಿದರು
ಧಾರವಾಡದ ರಂಗಾಯಣ ಆವರಣದಲ್ಲಿ ಮಕರ ಸಂಕ್ರಮಣದ ಸಂಭ್ರಮ ಆಚರಿಸುವುದಕ್ಕಾಗಿ ಮಹಿಳೆಯರು ತರಹೇವಾರಿ ಪಲ್ಯೆ, ರೊಟ್ಟಿ ಹಾಗೂ ವಿವಿಧ ಖಾದ್ಯಗಳೊಂದಿಗೆ ಭಾಗವಹಿಸಿ ಸವಿಯೂಟ ಮಾಡಿದರು   

ಧಾರವಾಡ: ನಗರದ ರಂಗಾಯಣ ಅವರಣದಲ್ಲಿ ಜಾನಪದ ಸಂಶೋಧನಾ ಕೇಂದ್ರದಿಂದ ಭಾನುವಾರ ಸಂಕ್ರಾಂತಿ ಆಚರಿಸಲಾಯಿತು. ಮಹಿಳೆಯರು ಎಳ್ಳು, ಬೆಲ್ಲ ಹಂಚಿದರು, ಹಾಡುಗಳನ್ನು ಹಾಡಿದರು.

ಆವರಣದಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಹಬ್ಬದ ಅಡುಗೆಯ ಘಮಲು ಮೇಳೈಸಿತ್ತು. ಎಲ್ಲರ ಪರಸ್ಪರ ಸಂಕ್ರಮಣದ ಶುಭಾಶಯ ಕೋರಿದರು.

ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಚಪಾತಿ, ಮಾದ್ಲಿ, ಎಳ್ಳು ಹಚ್ಚಿದ ರೊಟ್ಟಿ, ಶೇಂಗಾ ಹೋಳಿಗೆ, ಎಳ್ಳಿನ ಹೋಳಿಗೆ, ಎಣ್ಣೆಗಾಯಿ ಪಲ್ಲೆ, ಜುಣಕ, ಅವರೆಕಾಳು ಪಲ್ಯ, ಹೆಸರು ಕಾಳು ಪಲ್ಯ, ಬದನೆಕಾಯಿ ಬರ್ತಾ, ಮಡಕಿ ಕಾಳು, ಅಗಸಿ ಚಟ್ನಿ, ಶೇಂಗಾ ಚಟ್ನಿ, ಗುರೆಳ್ಳು ಚಟ್ನಿ, ಕರಿಂಡಿ, ಚಿತ್ರಾನ್ನ, ಪುಳಿಯೋಗರೆ, ಮೊಸರನ್ನ, ಬುತ್ತಿ ಮೊದಲಾದವನ್ನು ಮನೆಗಳಿಂದ ತಂದಿದ್ದರು. ಮಕ್ಕಳು, ಮಹಿಳೆಯರು ಎಲ್ಲರೂ ಒಟ್ಟಾಗಿ ಹಬ್ಬದ ಭೋಜನ ಸವಿದರು.

ADVERTISEMENT
ಧಾರವಾಡದ ರಂಗಾಯಣ ಆವರಣದಲ್ಲಿ ಭಾನುವಾರ ಸಂಕ್ರಾಂತಿ ಆಚರಣೆಯಲ್ಲಿ ಚಿಣ್ಣರ ಸಡಗರ ಗಮನ ಸೆಳೆಯಿತು

ಕೇಂದ್ರದ ಕಾರ್ಯದರ್ಶಿ ನಾಗಭೂಷಣ ಹಿರೇಮಠ, ಸದಸ್ಯರಾದ ಪ್ರಭಾ ನೀರಲಗಿ, ಮಹಾದೇವಿ ಕೊಪ್ಪದ, ಆಶಾ, ವೀಣಾ, ಪೂಜಾ, ಭಾರತಿ, ಇಂದಿರಾ, ಖೈರುಣಿಸ ಗಿರಿಜಾ ಶೆಕ್ಕಿ, ರಾಜೇಶ್ವರಿ, ಬಸಮ್ಮ, ಪ್ರಭಾ, ಅನಸೂಯಾ, ಸುಜಾತ, ನಂದಾ, ಶಾರದಾ, ಕಲ್ಪನಾ ಗಿರಿಜಾ, ಗುರು ಕಲ್ಮಠ, ಅರುಣ ನಂದಿಬೇವೂರ್, ಮಹಾಂತೇಶ್, ಜಿನದತ್ತ ಹಡಗಲಿ, ಲಿಂಗರಾಜ್ ಅಂಗಡಿ, ವಿದ್ಯಾ, ಕಲಾವತಿ, ರತ್ನ, ಜಯಶ್ರೀ, ನಂದಾ, ಸುಮಿತ್ರ ವಿಜಯ ಗಂಗಾ ಇದ್ದರು.

ಹಳ್ಳಿಗಳಲ್ಲಿ ಹಬ್ಬಗಳನ್ನು ವಿಶೇಷವಾಗಿ ಆಚರಿಸುತ್ತಾರೆ. ನಗರ ಪಟ್ಟಣಗಳಲ್ಲೂ ಹಬ್ಬಗಳ ಸೊಬಗನ್ನು ಉಳಿಸಿ ಬೆಳೆಸುವುದು ವಿಶೇಷವಾಗಿ ಆಚರಿಸುವುದು ಜಾನಪದ ಸಂಶೋಧನಾ ಕೇಂದ್ರದ ಉದ್ದೇಶವಾಗಿದೆ
ವಿಶ್ವೇಶ್ವರಿ ಹಿರೇಮಠ ಅಧ್ಯಕ್ಷೆ ಜಾನಪದ ಸಂಶೋಧನಾ ಕೇಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.