ಹುಬ್ಬಳ್ಳಿ: ಕಾಮಗಾರಿ ಕೈಗೊಳ್ಳಲು ನೈರುತ್ಯ ರೈಲ್ವೆಯು ಈ ಕೆಳಗಿನ ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಿದೆ.
ವಿಜಯಪುರ–ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್, ಸೊಲ್ಲಾಪುರ– ಹುಬ್ಬಳ್ಳಿ–ಸೊಲ್ಲಾಪುರ ಡೈಲಿ ಪ್ಯಾಸೆಂಜರ್, ಸೊಲ್ಲಾಪುರ–ಗದಗ ಡೈಲಿ ಎಕ್ಸ್‌ಪ್ರೆಸ್ ಹಾಗೂ ಹುಬ್ಬಳ್ಳಿ–ವಿಜಯಪುರ ಡೈಲಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲನ್ನು ಫೆ. 7ರಿಂದ 15ರವರೆಗೆ ರದ್ದುಪಡಿಸಲಾಗಿದೆ.
ಹುಬ್ಬಳ್ಳಿ–ವಿಜಯಪುರ ಡೈಲಿ ವಿಶೇಷ ಪ್ಯಾಸೆಂಜರ್ ಅನ್ನು ಫೆ. 8ರಿಂದ 15ರವರೆಗೆ, ವಿಜಯಪುರ–ಹುಬ್ಬಳ್ಳಿ ಡೈಲಿ ವಿಶೇಷ ಎಕ್ಸ್‌ಪ್ರೆಸ್ ಹಾಗೂ ಗದಗ–ಸೊಲ್ಲಾಪುರ ಡೈಲಿ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಫೆ. 8ರಿಂದ 16ರವರೆಗೆ ರದ್ದುಪಡಿಸಲಾಗಿದೆ.
ಭಾಗಶಃ ರದ್ದು: ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್– ಗದಗ ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಬಾಗಲಕೋಟೆ– ಗದಗ ಮಾರ್ಗದ ಸಂಚಾರವನ್ನು ಫೆ. 7ರಿಂದ 15ರವರೆಗೆ ರದ್ದುಪಡಿಸಲಾಗಿದೆ. ಗದಗದಿಂದ ಹೊರಡಬೇಕಿದ್ದ ಇದೇ ರೈಲು ಫೆ. 8ರಿಂದ 16ರವರೆಗೆ ಬಾಗಲಕೋಟೆಯಿಂದ ಸಂಚಾರ ಆರಂಭಿಸಲಿದೆ.
ಮಂಗಳೂರು ಜಂಕ್ಷನ್–ವಿಜಯಪುರ ಡೈಲಿ ವಿಶೇಷ ಎಕ್ಸ್‌ಪ್ರೆಸ್ ರೈಲಿನ ಹುಬ್ಬಳ್ಳಿ–ವಿಜಯಪುರ ಮಾರ್ಗದ ಸಂಚಾರವನ್ನು ಫೆ. 7ರಿಂದ 14ರವರೆಗೆ ರದ್ದುಪಡಿಸಲಾಗಿದೆ. ವಿಜಯಪುರದಿಂದ ಹೊರಡುವ ಇದೇ ರೈಲಿನ ವಿಜಯಪುರ– ಹುಬ್ಬಳ್ಳಿವರೆಗಿನ ಸಂಚಾರವನ್ನು ಫೆ. 8ರಿಂದ 15ರವರೆಗೆ ರದ್ದುಪಡಿಸಲಾಗಿದೆ. ವಿಜಯಪುರ ಬದಲು ಹುಬ್ಬಳ್ಳಿಯಿಂದ ಮಂಗಳೂರಿಗೆ ಹೊರಡಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.