ADVERTISEMENT

ನವಲಗುಂದ: ಸೋಲಾರ ಅಳವಡಿಕೆ ಕಾಮಗಾರಿ ಆರಂಭಕ್ಕೆ ಕೋನರಡ್ಡಿ ಸೂಚನೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 13:51 IST
Last Updated 16 ನವೆಂಬರ್ 2024, 13:51 IST
ನವಲಗುಂದ ಪಟ್ಟಣದ ನ್ಯಾಯಾಲಯ ಆವರಣದಲ್ಲಿರುವ ವಕೀಲರ ಸಂಘದ ಕಟ್ಟಡವನ್ನು ಅಧಿಕಾರಿಗಳು, ವಕೀಲರೊಂದಿಗೆ ಶಾಸಕ ಎನ್.ಎಚ್.ಕೋನರಡ್ಡಿ ವೀಕ್ಷಿಸಿದರು
ನವಲಗುಂದ ಪಟ್ಟಣದ ನ್ಯಾಯಾಲಯ ಆವರಣದಲ್ಲಿರುವ ವಕೀಲರ ಸಂಘದ ಕಟ್ಟಡವನ್ನು ಅಧಿಕಾರಿಗಳು, ವಕೀಲರೊಂದಿಗೆ ಶಾಸಕ ಎನ್.ಎಚ್.ಕೋನರಡ್ಡಿ ವೀಕ್ಷಿಸಿದರು   

ನವಲಗುಂದ: ವಕೀಲರ ಬಹುದಿನದ ಬೇಡಿಕೆಯಾದ ನವಲಗುಂದ ವಕೀಲರ ಸಂಘದ ಕಟ್ಟಡಕ್ಕೆ ಸೋಲಾರ ಹಾಗೂ ನಿರ್ವಹಣೆ ಸಲುವಾಗಿ ₹ 15 ಲಕ್ಷ ಅನುದಾನ ಬಿಡುಗಡೆ ಮಾಡಿ ಕೂಡಲೇ ಟೆಂಡರ್‌ ಕರೆದು ಕಾಮಗಾರಿ ಪ್ರಾರಂಭಿಸುವಂತೆ ಶಾಸಕ ಎನ್.ಎಚ್.‌ ಕೋನರಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣದ ನ್ಯಾಯಾಲಯ ಆವರಣದಲ್ಲಿರುವ ವಕೀಲರ ಸಂಘದ ಕಟ್ಟಡವನ್ನು ಪರಿವೀಕ್ಷಣೆ ಮಾಡಿ ಮಾತನಾಡಿದರು.

ವಕೀಲರಾದ ಎಂ.ಟಿ.ಹೆಬಸೂರ, ಸಿ.ಎಂ.ಪಾಟೀಲ, ಶ್ಯಾಮಸುಂದರ ಡಂಬಳ, ಎಸ್.ಎಂ. ಹಿರೇಮಠ, ಎನ್.‌ವೈ.‌ ಹೊಂಗಲ ಮಾತನಾಡಿ, ‘ಶಾಸಕರಿಗೆ ಮನವಿ ಸಲ್ಲಿಸಿದಾಗ ತಕ್ಷಣ ಅನುದಾನ ಬಿಡುಗಡೆ ಮಾಡಿ ವಕೀಲರ ಸಂಘಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ’ ಎಂದು ಶಾಸಕರನ್ನು ಅಭಿನಂದಿಸಿದರು.

ADVERTISEMENT

ಹಿರಿಯ ವಕೀಲರಾದ ಬಿ.ಜಿ.ಕೋನರಡ್ಡಿ, ಆರ್.‌ಎಂ. ರಮಜಾನಿ, ಶಾಂತವ್ವ ಚಿಕ್ಕನರಗುಂದ, ಕೌಶಲ್ಯ ಪಾಟೀಲ, ಎಸ್.‌ಎಸ್.‌ ಸೋಮನಕಟ್ಟಿ, ವೈ.‌ಬಿ. ಕುರಹಟ್ಟಿ, ಸಿ.ಸಿ.ಅಕ್ಕಿ, ಎ.ಎಲ್.‌ ಜಾಂಬೋಟಿ, ಎ.ಎಸ್.‌ ಹೊಳೆಣ್ಣವರ, ಸಿ.ಎಂ. ಪಾಟೀಲ, ಸಿ.ಸಿ. ಹಿರೇಮಠ, ಎಸ್.ಎ. ಪಟ್ನಿ, ಎನ್.ಬಿ. ಸವದಿ, ಪಿಡಬ್ಲುಡಿ ಎಇ ನಿಖೀಲ ಭರಡಿಶೇಟ್ಟರ ಹಾಗೂ ಇತರೇ ವಕೀಲರು ಉಪಸ್ಥಿತರಿದ್ದರು.

ನವಲಗುಂದ ಪಟ್ಟಣದ ನ್ಯಾಯಾಲಯ ಆವರಣದಲ್ಲಿರುವ ವಕೀಲರ ಸಂಘದ ಕಟ್ಟಡದ ಎದುರು ಅಧಿಕಾರಿಗಳು ವಕೀಲರೊಂದಿಗೆ ಶಾಸಕ ಎನ್.ಎಚ್.ಕೋನರಡ್ಡಿ ಇದ್ದಾರೆ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.