ADVERTISEMENT

ನವಲಗುಂದ: ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2023, 15:44 IST
Last Updated 31 ಡಿಸೆಂಬರ್ 2023, 15:44 IST
ನವಲಗುಂದ ತಾಲ್ಲೂಕಿನ ಜಾವೂರ ಗ್ರಾಮದಲ್ಲಿ ಜಾವೂರನಿಂದ ಹಂಚಿನಾಳ ತಾಲ್ಲೂಕು ಹದ್ದಿನವರೆಗೆ ಮರುಡಾಂಬರೀಕರಣ ಕಾಮಗಾರಿಗೆ ಶಾಸಕ ಎನ್.ಎಚ್.ಕೋನರಡ್ಡಿ ಭೂಮಿಪೂಜೆ ನೆರವೇರಿಸಿದರು
ನವಲಗುಂದ ತಾಲ್ಲೂಕಿನ ಜಾವೂರ ಗ್ರಾಮದಲ್ಲಿ ಜಾವೂರನಿಂದ ಹಂಚಿನಾಳ ತಾಲ್ಲೂಕು ಹದ್ದಿನವರೆಗೆ ಮರುಡಾಂಬರೀಕರಣ ಕಾಮಗಾರಿಗೆ ಶಾಸಕ ಎನ್.ಎಚ್.ಕೋನರಡ್ಡಿ ಭೂಮಿಪೂಜೆ ನೆರವೇರಿಸಿದರು   

ನವಲಗುಂದ: ತಾಲ್ಲೂಕಿನ ಮೊರಬ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎನ್.ಎಚ್.ಕೋನರಡ್ಡಿ ಶನಿವಾರ ಭೂಮಿಪೂಜೆ ನೆರವೇರಿಸಿದರು.

ಶಿರಕೋಳ ಗ್ರಾಮದಲ್ಲಿ 15ನೇ ಹಣಕಾಸು ಯೋಜನೆಯಡಿ ₹5.50 ಲಕ್ಷ ವೆಚ್ಚದಲ್ಲಿ ಎಸ್.ಟಿ ಕಾಲೊನಿಯ ಸಿದ್ಧಾರೂಢ ಮಠದಿಂದ ಮೊರಬದ ರಸ್ತೆವರೆಗೆ ಸಿ.ಸಿ ರಸ್ತೆ ನಿರ್ಮಾಣ, ಜಾವೂರ ಗ್ರಾಮದಲ್ಲಿ ಜಾವೂರನಿಂದ ಹಂಚಿನಾಳದ ತಾಲ್ಲೂಕು ಹದ್ದಿನವರೆಗೆ ₹34.08 ಲಕ್ಷ ವೆಚ್ಚದಲ್ಲಿ ಮರುಡಾಂಬರೀಕರಣ, ಹನಸಿ ಗ್ರಾಮದಲ್ಲಿ ಹನಸಿಯಿಂದ ದಡೇರಕೊಪ್ಪ‌ದವರೆಗೆ 3.00 ಕಿ.ಮೀ ರಸ್ತೆಯನ್ನು ₹16.86 ಲಕ್ಷ ವೆಚ್ಚದಲ್ಲಿ ಮರುಡಾಂಬರೀಕರಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು.

ಮಾಜಿ ಶಾಸಕರಾದ ಬಿ.ಆರ್.ಯಾವಗಲ್, ಜಿಲ್ಲಾ ಪಂಚಾಯಿತಿ  ಮಾಜಿ ಅಧ್ಯಕ್ಷೆ ಶಾಂತವ್ವ ಗುಜ್ಜಳ, ಮಲ್ಲಿಕಾರ್ಜುನ ರೋಣದ, ಸಂತೋಷ ಗುಜ್ಜಳ, ಮಲ್ಲಪ್ಪ ಕುರಿ, ಈರಪ್ಪ ಮಾಳವಾಡ, ಮೌಲಾ ಮರ್ಥೋಜಿ, ಭೀಮ್ಶಿ ಜಕಾತಿ, ಸುರೇಶ ಕೇಸರಿ, ಪರಮೇಶ್ವರ್ ಹೊಸವಾಳ, ಶಿವಲೀಲಾ ಬೋರಶಟ್ಟಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.