ADVERTISEMENT

ಕೆಲಸ ನಡೆದೇ ಇಲ್ಲ..ನಾಮಫಲಕ ಹಾಕುವುದು ಮರೆತಿಲ್ಲ..!

ಉದ್ಯೋಗ ಖಾತ್ರಿ ಯೋಜನೆ ಅಡಿ ಅರೆಬರೆ ಕಾಮಗಾರಿಗೆ ಗ್ರಾಮಸ್ಥರ ಬೇಸರ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2024, 7:15 IST
Last Updated 30 ಮಾರ್ಚ್ 2024, 7:15 IST
‘ಮುಳ್ಳೊಳ್ಳಿ ಗ್ರಾಮದ ಚನ್ನಪ್ಪ ಕುರಿ ಇವರ ಮನೆಯಿಂದ ಚನ್ನಬಸಯ್ಯ ಹಿರೇಮಠ ಇವರ ಮನೆವರೆಗೆ ರಸ್ತೆ ನಿರ್ಮಾಣ’ವೆಂದು ಬೋರ್ಡನಲ್ಲಿ ಉಲ್ಲೇಖವಿದೆ. ಆದರೆ ಆ ಜಾಗದಲ್ಲಿ ರಸ್ತೆ ನಿರ್ಮಾಣವಾಗಿಲ್ಲ
‘ಮುಳ್ಳೊಳ್ಳಿ ಗ್ರಾಮದ ಚನ್ನಪ್ಪ ಕುರಿ ಇವರ ಮನೆಯಿಂದ ಚನ್ನಬಸಯ್ಯ ಹಿರೇಮಠ ಇವರ ಮನೆವರೆಗೆ ರಸ್ತೆ ನಿರ್ಮಾಣ’ವೆಂದು ಬೋರ್ಡನಲ್ಲಿ ಉಲ್ಲೇಖವಿದೆ. ಆದರೆ ಆ ಜಾಗದಲ್ಲಿ ರಸ್ತೆ ನಿರ್ಮಾಣವಾಗಿಲ್ಲ   

ಕುಂದಗೋಳ: ಚುನಾವಣೆ ಹೊತ್ತಿಲಲ್ಲಿ ರಾತ್ರೋರಾತ್ರಿ ಮನರೇಗಾ ಕಾಮಗಾರಿ ನಾಮಫಲಕಗಳು ತಲೆ ಎತ್ತಿ ನಿಂತಿವೆ. ಆದರೆ ಬಹುತೇಕ ನಾಮಫಲಕಗಳಲ್ಲಿ ಕಾಮಗಾರಿ ಬಗ್ಗೆ ಸಂಪೂರ್ಣ ಮಾಹಿತಿಯಿಲ್ಲ. ಅಲ್ಲದೆ ಕೆಲವು ಕಡೆ ಕಾಮಗಾರಿಗಳು ನಡೆದಿಲ್ಲ. ಇದು ಅಕ್ರಮ ವ್ಯವಹಾರದ ಶಂಕೆ ಮೂಡಿಸಿದೆ.

ತಾಲ್ಲೂಕಿನ ಮುಳ್ಳೊಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಕಂಡು ಬರುವ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗಳಲ್ಲಿನ ಗೊಂದಲ ಜನರನ್ನು ಚಿಂತೆಗೆ ಹಚ್ಚುವಂತೆ ಮಾಡಿದೆ.

ಕುಂದಗೋಳ ತಾಲ್ಲೂಕಿನ ಪುಟ್ಟ ಗ್ರಾಮ ಮುಳ್ಳೊಳ್ಳಿ. ಈ ಗ್ರಾಮ ಯರಗುಪ್ಪಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುತ್ತದೆ. 2009 ಸುಮಾರಿಗೆ ಬೆಣ್ಣೆ ಹಳ್ಳದ ಪ್ರವಾಹದಲ್ಲಿ ಮುಳುಗಿದ್ದ ಕಾರಣ ಸರ್ಕಾರ ಇಲ್ಲಿನ ಜನರಿಗೆ ಊರ ಹೊರಗಡೆ ‘ನವ ಗ್ರಾಮ’(ಹೊಸ ಮುಳ್ಳೊಳ್ಳಿ)ವನ್ನು ನಿರ್ಮಿಸಿ ಕೊಟ್ಟಿದೆ.

ADVERTISEMENT

ಈ ನವ ಗ್ರಾಮದಲ್ಲಿ 320 ಕುಟುಂಬಗಳಿದ್ದು ರಸ್ತೆ, ಸಾರ್ವಜನಿಕ ಶೌಚಾಲಯ, ಚರಂಡಿ, ಶುದ್ಧ ಕುಡಿಯುವ ನೀರಿನ ಘಟಕ, ವಿದ್ಯುತ್ ದೀಪಗಳ ವ್ಯವಸ್ಥೆ ಮರೀಚಿಕೆಯಾಗಿದೆ. ಇದೀಗ ಗ್ರಾಮದಲ್ಲಿ ಚರ್ಚೆಯಾಗುತ್ತಿರುವ ವಿಷಯವೆಂದರೇ ರಾತ್ರೋ ರಾತ್ರಿ ಎದ್ದು ನಿಂತಿರುವ ಮನರೇಗಾ ಕಾಮಗಾರಿ ನಾಮಫಲಕಗಳು.

ಈ ಬೋರ್ಡಗಳಲ್ಲಿ ಉಲ್ಲೇಖಿಸಿದ ಕಾಮಗಾರಿ ಪೂರ್ಣಗೊಂಡಿಲ್ಲ. ಕೆಲವು ಕಡೆ ಆರಂಭವೇ ಆಗಿಲ್ಲ. ಕಾಮಗಾರಿ ಆರಂಭ, ಮುಕ್ತಾಯದ ದಿನ ನಮೂದಾಗಿಲ್ಲ. ಇಲ್ಲವೇ ಅವುಗಳು ಕಾಣಿಸುತ್ತಿಲ್ಲ. ಕಾಮಗಾರಿಯ ಅಂದಾಜು ಮೊತ್ತ, ಕೂಲಿ ಮೊತ್ತ, ಸಾಮಾಗ್ರಿ ಮೊತ್ತ ಮಾತ್ರ ರಾರಾಜಿಸುತ್ತಿದ್ದು ಒಂದು ಬೋರ್ಡ್‌ನಲ್ಲಿ ಯಾವ ಮಾಹಿತಿ ಇಲ್ಲ.

ಅಂದಾಜು ₹ 1.31 ಲಕ್ಷ ಮತ್ತು ₹ 1.52 ಲಕ್ಷ ಮೊತ್ತದ ರಸ್ತೆ ನಿರ್ಮಾಣ ಕಾರ್ಯ ಆರಂಭವಾಗಿಲ್ಲ, ₹ 1.64 ಲಕ್ಷ ಮೊತ್ತದ ಸದೃಢವಲ್ಲದ ಸಿ.ಡಿ ನಿರ್ಮಾಣವಾಗಿದೆ. ₹ 3 ಲಕ್ಷ ಮೊತ್ತದ ಶಾಲಾ ಕಂಪೌಂಡ್ ನಿರ್ಮಾಣವಾಗಿಲ್ಲ. ₹ 3.35 ಲಕ್ಷದ ಕುಡಿಯುವ ನೀರಿನ ಕೆರೆಯ ಕಾಲುವೆ ಹೂಳೆತ್ತುವಿಕೆ ಕಾಮಗಾರಿಯಾಗಿಲ್ಲ.

₹ 12 ಲಕ್ಷ ಮೊತ್ತದ ಘನ ತಾಜ್ಯ ನಿರ್ವಹಣಾ ಘಟಕ ನಿರ್ಮಾಣವಾಗುತ್ತಿರುವುದು ಮುಳ್ಳೊಳ್ಳಿ ಗ್ರಾಮದಲ್ಲಿ ಆದರೇ ಬೋರ್ಡನಲ್ಲಿ ಯರಗುಪ್ಪಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿದೆ ಎಂದು ಬರೆಯಲಾಗಿದೆ. ಈ ಘಟಕದ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತು ವರ್ಷವೇ ಕಳೆದಿದ್ದು ಗ್ರಾಮಗಳಿಂದ ಸಂಗ್ರಹಿಸಿದ ಕಸವನ್ನು ಹಳ್ಳದ ದಡದ ಮೇಲೆ ಸುಡಲಾಗುತ್ತಿದೆ.

ಇನ್ನೂ ₹ 9.99 ಲಕ್ಷ ಮೊತ್ತದ ಕಾಲುವೆ ಹೂಳೆತ್ತುವಿಕೆ ಕಾಮಗಾರಿಯನ್ನು ಜೆಸಿಬಿ ಬಳಸಿ ವರ್ಷದ ಹಿಂದೆ ಮಾಡಲಾಗಿದ್ದು, ಕಾಮಗಾರಿ ಮಾಹಿತಿಯ ಬೋರ್ಡನಲ್ಲಿ 2024ರ ಫೆಬ್ರವರಿ 18ರಿಂದ ಆರಂಭವಾಗಿದೆ ಎಂದು ಉಲ್ಲೇಖವಿದೆ ಎಂಬುದು ಗ್ರಾಮಸ್ಥರ ಆರೋಪ.

‘ಮುಳ್ಳೊಳ್ಳಿ ಗ್ರಾಮದ ಚನ್ನಪ್ಪ ಕುರಿ ಇವರ ಮನೆಯಿಂದ ಚನ್ನಬಸಯ್ಯ ಹಿರೇಮಠ ಇವರ ಮನೆವರೆಗೆ ರಸ್ತೆ ನಿರ್ಮಾಣ’ವೆಂದು ಬೋರ್ಡನಲ್ಲಿ ಉಲ್ಲೇಖವಿದೆ. ಆದರೆ ಆ ಜಾಗದಲ್ಲಿ ರಸ್ತೆ ನಿರ್ಮಾಣವಾಗಿಲ್ಲ
ಮುಳ್ಳೊಳ್ಳಿ ಗ್ರಾಮದ ಶಾಲೆಗೆ ಕಂಪೌಂಡ ನಿರ್ಮಾಣ ಎಂದು ಬೋರ್ಡನಲ್ಲಿ ಬರೆಯಲಾಗಿದ್ದು ಕಂಪೌಂಡ್ ನಿರ್ಮಾಣ ಆರಂಭವಾಗಿಲ್ಲ.
ಮುಳ್ಳೊಳ್ಳಿ ಗ್ರಾಮದ ಶಾಲೆಗೆ ಕಂಪೌಂಡ ನಿರ್ಮಾಣ ಎಂದು ಬೋರ್ಡನಲ್ಲಿ ಬರೆಯಲಾಗಿದ್ದು ಕಂಪೌಂಡ್ ನಿರ್ಮಾಣ ಆರಂಭವಾಗಿಲ್ಲ.
ಮುಳ್ಳೊಳ್ಳಿ ಗ್ರಾಮದಲ್ಲಿ ವರ್ಷದಿಂದ ನಿರ್ಮಾಣದ ಹಂತದಲ್ಲಿರುವ ಘನ ತಾಜ್ಯ ವಿಲೇವಾರಿ ಘಟಕ. ಆದರೇ ಬೋರ್ಡನಲ್ಲಿ ಯರಗುಪ್ಪಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿದೆ ಎಂದು ಬರೆಯಲಾಗಿದೆ.
ಮುಳ್ಳೊಳ್ಳಿ ಗ್ರಾಮದಲ್ಲಿ ವರ್ಷದಿಂದ ನಿರ್ಮಾಣದ ಹಂತದಲ್ಲಿರುವ ಘನ ತಾಜ್ಯ ವಿಲೇವಾರಿ ಘಟಕ. ಆದರೇ ಬೋರ್ಡನಲ್ಲಿ ಯರಗುಪ್ಪಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿದೆ ಎಂದು ಬರೆಯಲಾಗಿದೆ.

ಕಾಮಗಾರಿಯ ಬಿಲ್ ಬಾಕಿಯಿದ್ದು ಬಿಲ್ ಬಂದ ತಕ್ಷಣ ಘನ ತಾಜ್ಯ ವಿಲೇವಾರಿ ಘಟಕ ಕೆಲಸ ಪೂರ್ಣಗೊಳಿಸಲಾಗುವುದು

–ಉಮೆಶಗೌಡ್ರ ತುಪ್ಪದಗೌಡ್ರ ಪಿಡಿಒ

–ಕಾಮಗಾರಿ ಮೊದಲು ಆರಂಭ ಮಾಡಿ ನಂತರ ನಾಮಫಲಕ ಹಾಕಲಿ. ನಾಮಫಲಕ ಹಾಕಿ ಕೆಲಸ ಮಾಡುವುದನ್ನೇ ಮರತಿದ್ದಾರೆ ಈರಪ್ಪ ಹಾಗಲವಾಡಿ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.