ADVERTISEMENT

ಸದಾಶಿವ ಆಯೋಗದ ವರದಿ ಅವೈಜ್ಞಾನಿಕ: ಅರವಿಂದ ಲಿಂಬಾವಳಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2023, 15:52 IST
Last Updated 27 ನವೆಂಬರ್ 2023, 15:52 IST
ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ವಿರೋಧಿಸಿ ಹುಬ್ಬಳ್ಳಿಯ ಬಂಜಾರ ಭವನದಲ್ಲಿ ಸೋಮವಾರ ನಡೆದ ವಿಭಾಗ ಮಟ್ಟದ ಸಭೆಯಲ್ಲಿ ಮುಖಂಡರಾದ ಅರವಿಂದ ಲಿಂಬಾವಳಿ, ಅನಂತ ನಾಯ್ಕ್ ಮತ್ತಿತರರು ಪಾಲ್ಗೊಂಡಿದ್ದರು
ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ವಿರೋಧಿಸಿ ಹುಬ್ಬಳ್ಳಿಯ ಬಂಜಾರ ಭವನದಲ್ಲಿ ಸೋಮವಾರ ನಡೆದ ವಿಭಾಗ ಮಟ್ಟದ ಸಭೆಯಲ್ಲಿ ಮುಖಂಡರಾದ ಅರವಿಂದ ಲಿಂಬಾವಳಿ, ಅನಂತ ನಾಯ್ಕ್ ಮತ್ತಿತರರು ಪಾಲ್ಗೊಂಡಿದ್ದರು   

ಹುಬ್ಬಳ್ಳಿ: ‘ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಅವೈಜ್ಞಾನಿಕವಾಗಿದ್ದು, ಇದನ್ನು ಸಂಪೂರ್ಣವಾಗಿ ವಿರೋಧಿಸುತ್ತೇವೆ. ಇದರ ಬಗ್ಗೆ ಭೋವಿ,ವಡ್ಡರ, ಕೊರಚ, ಕೊರಮ, ಭಜಂತ್ರಿ ಲಂಬಾಣಿಯವರು 2012 ರಿಂದ ಹೋರಾಟ ನಡೆಸಿದ್ದಾರೆ’ ಎಂದು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಗೌರವಾಧ್ಯಕ್ಷ ಅರವಿಂದ ಲಿಂಬಾವಳಿ ತಿಳಿಸಿದರು.

ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ವಿರೋಧಿಸಿ ಇಲ್ಲಿನ ಬಂಜಾರ ಭವನದಲ್ಲಿ ಸೋಮವಾರ ನಡೆದ ವಿಭಾಗ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ‘ಆಂಧ್ರಪ್ರದೇಶ ಸರ್ಕಾರವು ಒಳಮೀಸಲಾತಿ ಕಲ್ಪಿಸಲು ಯತ್ನಿಸಿ ಎಡವಿದೆ. ಹೀಗಿದ್ದರೂ ರಾಜ್ಯದ ಕೆಲ ಸಚಿವರು ವರದಿ ಜಾರಿಗಾಗಿ ಒತ್ತಾಯಿಸುತ್ತಿರುವುದು ಖಂಡನೀಯ. ಸಚಿವರ ಒತ್ತಾಯವನ್ನು ಜನರು ಒಪ್ಪಲ್ಲ’ ಎಂದರು.

ವರದಿಯನ್ನು ವಿರೋಧಿಸುವ ಹೋರಾಟಕ್ಕೆ ರಾಜ್ಯದ ಲಂಬಾಣಿ, ಭೋವಿ, ಕೊರಚ, ಕೊರಮ, ಭಜಂತ್ರಿ ಸೇರಿ ಇತರೆ ಸಮುದಾಯದವರು ಕೈ ಜೋಡಿಸಬೇಕು. ನವೆಂಬರ್ 30ರಂದು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ, ನಮ್ಮ ಬೇಡಿಕೆಯನ್ನು ಮುಂದಿಡೋಣ’ ಎಂದರು.

ADVERTISEMENT

ಒಕ್ಕೂಟದ ಕಾರ್ಯಾಧ್ಯಕ್ಷ ಎನ್. ಅನಂತನಾಯ್ಕ, ಮುಖಂಡರಾದ ಆದರ್ಶ ಯಲ್ಲಪ್ಪ
ಪಾಂಡುರಂಗ ಪಮ್ಮಾರ್, ಶಿವಾನಂದ ಭಜಂತ್ರಿ,  ಬಲರಾಮನಾಯ್ಕ, ಡಾ ರಾಜನಾಯ್ಕ, ರವಿ ಪೂಜಾರ್ ಕೃಷ್ಣಾಜಿ ಚವಾನ, ವೆಂಕಟೇಶ್ ಮೇಸ್ತ್ರಿ , ದಾನಪ್ಪ ಕಬ್ಬೆರ,ಶಶಿ ಬೀಜವಾಡ, ಮಂಜುನಾಥ ಭೋವಿ, ಮಂಗಲಪ್ಪ ಲಮಾಣಿ, ಹರಿಲಾಲ ಪವಾರ, ಯಮನುರ ಗುಡಿಹಾಳ, ಸುಭಾಸ ಮಲ್ನಾಡ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.