ಹುಬ್ಬಳ್ಳಿ: ಹಿರಿಯ ಸಾಹಿತಿ, ನಾಡೋಜ ಪಾಟೀಲ ಪುಟ್ಟಪ್ಪ (100) ಸೋಮವಾರ ರಾತ್ರಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು.
70ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಪಾಟೀಲ ಪುಟ್ಟಪ್ಪ ಬದುಕು ಸಾಗಿಬಂದ ಹಾದಿ
ಜನನ: ಜನವರಿ 14,1921. ಧಾರವಾಡ ಜಿಲ್ಲೆಯ ಹಾವೇರಿ ತಾಲ್ಲೂಕುಕುರಬಗೊಂಡ
ಶಿಕ್ಷಣ: ಕಾನೂನು ಪದವಿ, ಕ್ಯಾಲಿಫೋರ್ನಿಯಾದಲ್ಲಿ ಪತ್ರಿಕೋದ್ಯಮ
ಹಸ್ತ ಪತ್ರಿಕೆ ಪ್ರಕಟಣೆ: 1935ರಲ್ಲಿ ಹಾವೇರಿ ಹೈಸ್ಕೂಲಿನಲ್ಲಿದ್ದಾಗ ‘ನನ್ನ ನಾಡು’
ಸ್ವಾತಂತ್ರ್ಯ ಹೋರಾಟ: ಚಲೇಜಾವ್ ಚಳವಳಿಯಲ್ಲಿ ಭಾಗಿ. ಒಂದು ವರ್ಷ ಭೂಗತ ಕಾರ್ಯಕರ್ತನಾಗಿ ಸೇವೆ
ಕಾನೂನು ಅಭ್ಯಾಸ: 1943ರಲ್ಲಿ ಬೆಳಗಾವಿ ಕಾನೂನು ಕಾಲೇಜಿಗೆ ಪ್ರವೇಶ. 1945ರಲ್ಲಿ ಕಾನೂನು ಪದವಿ
ಪತ್ರಿಕೋದ್ಯಮ:1946ರ ಕೊನೆಯಲ್ಲಿ ಹುಬ್ಬಳ್ಳಿಯಿಂದ ಪ್ರಾರಂಭವಾದ ‘ವಿಶಾಲ ಕರ್ನಾಟಕ’ ವಾರಪತ್ರಿಕೆ ಸಂಪಾದಕ. 1947ರಿಂದ ‘ವಿಶಾಲ ಕರ್ನಾಟಕ’ ದಿನಪತ್ರಿಕೆಯಾಗಿ ಪ್ರಾರಂಭವಾದಾಗ ಅದರ ಸಂಪಾದಕ. 1949ರಲ್ಲಿ ಕ್ಯಾಲಿಫೋರ್ನಿಯಾದಲ್ಲಿಪತ್ರಿಕೋದ್ಯಮ ಪದವಿ. 1953ರಲ್ಲಿ ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿದ್ದ ‘ನವಯುಗ’ ದೈನಿಕದ ಸಂಪಾದಕ.
‘ಪ್ರಪಂಚ’ ಸಾಪ್ತಾಹಿಕ:1954ರ ಮಾರ್ಚ್ 10ರಂದುಪ್ರಾರಂಭ
ಕನ್ನಡದ ಪ್ರಪ್ರಥಮ ಡೈಜೆಸ್ಟ್: ‘ಸಂಗಮ’ ಡೈಜೆಸ್ಟ್ 1956ರಿಂದ ಪ್ರಾರಂಭ
‘ವಿಶ್ವವಾಣಿ’ ದೈನಿಕ: 1956ರ ಆಗಸ್ಟ್ 31ರಿಂದ ಪ್ರಾರಂಭ
‘ಮನೋರಮಾ’ ಪಾಕ್ಷಿಕ: ಸಿನಿಮಾ ಪಾಕ್ಷಿಕ 1960ರಲ್ಲಿ ಪ್ರಾರಂಭ
‘ಸ್ತ್ರೀ’ ಪಾಕ್ಷಿಕ: 1961ರಲ್ಲಿ ಪ್ರಾರಂಭ
ಶಿಕ್ಷಣ ಕ್ಷೇತ್ರದಲ್ಲಿ ಸೇವೆ: ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಹಾಗೂ ಸಿಂಡಿಕೇಟ್ ಸದಸ್ಯರಾಗಿ 1961ರಿಂದ 1971ರವರೆಗೆ; ಪತ್ರಿಕೋದ್ಯಮ ವಿಭಾಗ ಪ್ರಾರಂಭಿಸಲು ಪ್ರೋತ್ಸಾಹ
ಸಂಸದ: 1962ರಿಂದ 1974ರವರೆಗೆ ರಾಜ್ಯಸಭಾ ಸದಸ್ಯ
ವಿದೇಶ ಪ್ರವಾಸ: 1965ರಲ್ಲಿ ಪತ್ರಿಕೋದ್ಯಮಿಯಾಗಿ ಜರ್ಮನಿ, ಬ್ರಿಟನ್, 1988ರಲ್ಲಿ ಸೋವಿಯತ್ ರಷ್ಯಾ ಸರ್ಕಾರಗಳಿಂದ ಆಹ್ವಾನಿತ
ಅಖಂಡ ಕರ್ನಾಟಕ ನಿರ್ಮಾಣ: 1944ರಿಂದ 1956ರವರೆಗೆ ಹೋರಾಟ
ಕರ್ನಾಟಕ ವಿದ್ಯಾವರ್ಧಕ ಸಂಘ: ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ 1966ರಿಂದ ಇಲ್ಲಿಯವರೆಗೆ ಸೇವೆ
ಪತ್ರಿಕಾ ಸಮ್ಮೇಳನದ ಅಧ್ಯಕ್ಷ: 1976ರಲ್ಲಿ ಶಿವಮೊಗ್ಗದಲ್ಲಿ ನಡೆದ ಕರ್ನಾಟಕ ಪತ್ರಿಕೋದ್ಯಮ ಸಮ್ಮೇಳನದ ಅಧ್ಯಕ್ಷ
ಕನ್ನಡ ಭಾಷೆಗಾಗಿ ಹೋರಾಟ: 1982ರಲ್ಲಿ ಕನ್ನಡವನ್ನು ಪ್ರಥಮ ಭಾಷೆಯನ್ನಾಗಿ ಮಾಡಲು ಗೋಕಾಕ ವರದಿ ಜಾರಿಗಾಗಿ ನಡೆದ ಹೋರಾಟದ ಮುಂದಾಳತ್ವ
ಕನ್ನಡ ಕಾವಲು ಸಮಿತಿ ಅಧ್ಯಕ್ಷ: ಕರ್ನಾಟಕ ಸರ್ಕಾರ ನಾಡು-ನುಡಿ ಬೆಳವಣಿಗೆಗಾಗಿ ಪ್ರಾರಂಭಿಸಿದ ಕನ್ನಡ ಕಾವಲು ಮತ್ತು ಗಡಿ ಸಲಹಾ ಸಮಿತಿ ಅಧ್ಯಕ್ಷರಾಗಿ 1984ರಿಂದ 1989ರವರೆಗೆ ಸೇವೆ
ಸಾಹಿತ್ಯ ಸಮ್ಮೇಳನದ ಅಧ್ಯಕ್ಷ: ಬೆಳಗಾವಿಯಲ್ಲಿ 2003ರಲ್ಲಿ ನಡೆದ ಅಖಿಲ ಭಾರತ 70ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ
ಪ್ರಶಸ್ತಿ-ಪುರಸ್ಕಾರಗಳು:
1976ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 1993ರಲ್ಲಿ ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ, 1994ರಲ್ಲಿ ಕರ್ನಾಟಕ ಸರ್ಕಾರ ಸ್ಥಾಪಿಸಿದ ಪ್ರಪ್ರಥಮ ಪ್ರತಿಷ್ಠಿತ ಟಿಎಸ್‌ಆರ್ ಪತ್ರಿಕಾ ಪ್ರಶಸ್ತಿ, 1994ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಿ.ಲಿಟ್ ಪದವಿ, 1996ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ‘ನಾಡೋಜ’ ಪ್ರಶಸ್ತಿ, 1998ರಲ್ಲಿ ಟಿಳಕ ಮೊಹರೆ ಪ್ರಶಸ್ತಿ, 2005ರಲ್ಲಿ ಬಸವಶ್ರೀ ಪ್ರಶಸ್ತಿ, 2006ರಲ್ಲಿ ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ, 2008ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಹೋನ್ನತ ನೃಪತುಂಗ ಪ್ರಶಸ್ತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.