ADVERTISEMENT

ಸಂವಿಧಾನ ಬದಲಿಸುವವರನ್ನು ಜನರೇ ಬದಲಾಯಿಸುತ್ತಾರೆ: ದಿಂಗಾಲೇಶ್ವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2024, 6:33 IST
Last Updated 14 ಏಪ್ರಿಲ್ 2024, 6:33 IST
   

ಹುಬ್ಬಳ್ಳಿ: 'ಕೆಲವರು ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವನ್ನು ಬದಲಿಸುವ ಹುಚ್ಚು ಸಾಹಸಕ್ಕೆ ಮುಂದಾಗಿ, ಹೇಳಿಕೆ ನೀಡುತ್ತಿದ್ದಾರೆ. ಆದರೆ, ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಅವರೇ ಬದಲಾಗಲಿದ್ದಾರೆ' ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಇರುವ ಅಂಬೇಡ್ಕರ್ ಮೂರ್ತಿಗೆ ಭಾನುವಾರ ಮಾಲಾರ್ಪಣೆ ಮಾಡಿ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.

'ಡಾ.ಬಿ‌.ಆರ್. ಅಂಬೇಡ್ಕರ್ ಅವರ ಆದರ್ಶಗಳು ಸೂರ್ಯ-ಚಂದ್ರ ಇರುವವರೆಗೂ ಇರುತ್ತವೆ. ಆದರೆ ಕೆಲವರು ಅವರ ತತ್ವಸಿದ್ದಾಂತಗಳನ್ನು ತೆಗೆದುಹಾಕುವ, ಸಂವಿಧಾನವನ್ನೇ ಬದಲಿಸುವ ಮಾತುಗಳನ್ನು ಆಡುತ್ತಿದ್ದಾರೆ. ಇದೇ ವೇದಿಕೆಯಲ್ಲಿ ಕೆಲವರು ಅಂಬೇಡ್ಕರ್ ಅವರನ್ನು ಹೊಗಳಿ ಮಾತನಾಡಿದ್ದಾರೆ. ಅವರ ಮನಸ್ಸಿನಲ್ಲಿ ಇರುವುದೇ ಬೇರೆ, ಬಾಯಲ್ಲಿ ಬರುವ ಮಾತುಗಳೇ ಬೇರೆ. ಮುಂದಿನ ದಿನಗಳಲ್ಲಿ ಮತದಾರರೇ ಇಲ್ಲಿನ ಅಗ್ರಗಣ್ಯ ನಾಯಕರನ್ನು ಮನೆಗೆ ಕಳುಹಿಸಲಿದ್ದಾರೆ' ಎಂದು ಹೇಳಿದರು.

ADVERTISEMENT

'ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ, ಸ್ಪರ್ಧಾಳುವಾಗಿ ಈಗಾಗಲೇ ಮತದಾರರ ಜಾಗೃತಿ ಸಭೆಗಳನ್ನು ಅಲ್ಲಲ್ಲಿ ಆಯೋಜಿಸುತ್ತಿದ್ದೇನೆ. ಇಂದು(ಭಾನುವಾರ) ಸವಣೂರು, ಶಿಗ್ಗಾವಿಯಲ್ಲಿ ಮತದಾರರ ಸಭೆ ನಡೆಸುತ್ತಿದ್ದೇನೆ' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.