ಧಾರವಾಡ: ‘ಚಿತ್ರಕಲೆಗೆ ಬಹುದೊಡ್ಡ ಅವಕಾಶವಿದೆ. ಶ್ರದ್ಧೆ ಮತ್ತು ನಿರಂತರ ಶ್ರಮ ಇದ್ದಾಗ ಮಾತ್ರ ಚಿತ್ರಕಲೆ ಒಲಿಯುತ್ತದೆ’ ಎಂದು ಕಲಾವಿದ ಬಿ. ಮಾರುತಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಭಾನುವಾರ ಏರ್ಪಡಿಸಿದ್ದ ಎಂ.ಬಿ.ಬಿ.ಎಸ್. ವಿದ್ಯಾರ್ಥಿ ನಿಶಾಂತ ಬಳಿಗಾರ ಅವರ ಚಿತ್ರಕಲೆ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
‘ಚಿತ್ರಕಲೆಗೆ ವಿಶೇಷ ಗೌರವ ಇದೆ. ಕಲೆ ಎನ್ನುವುದು ಧ್ಯಾನ ಇದ್ದಂತೆ. ಧ್ಯಾನ ಸ್ಥಿತಿಗೆ ಹೋದಾಗ ಮಾತ್ರ ಉತ್ಕೃಷ್ಟ ಕಲೆ ರೂಪ ತಾಳಲು ಸಾಧ್ಯ. ನಿಶಾಂತ ಬಳಿಗಾರ ಅವರಿಗೆ ಕಲೆ ಒಲಿದಿದೆ’ ಎಂದರು.
ಚಿತ್ರ ಕಲಾವಿದ ಎಫ್.ವಿ. ಚಿಕ್ಕಮಠ ಮಾತನಾಡಿ, ‘ಚಿತ್ರ ಕಲಾವಿದರು ತನ್ನದೇ ಆದ ಶೈಲಿಯನ್ನು ರೂಪಿಸಿಕೊಳ್ಳಬೇಕು. ಚಿತ್ರಕಲೆ ಪ್ರದರ್ಶನ ಮಾಡುವುದೆಂದರೆ ತನ್ನ ಅಭಿವ್ಯಕ್ತಿಯನ್ನು ವ್ಯಕ್ತಪಡಿಸುವುದಾಗಿದೆ. ಕಲಾವಿದನಲ್ಲಿ ಸೃಜನಶೀಲತೆ ಮತ್ತು ಸೌಜನ್ಯ ಇರಬೇಕು’ ಎಂದು ಹೇಳಿದರು.
ಕಲಘಟಗಿ ಗುಡ್‍ನ್ಯೂಸ್ ಕಾಲೇಜಿನ ಪ್ರಾಚಾರ್ಯ ಮಹೇಶ ಧ.ಹೊರಕೇರಿ ಅಧ್ಯಕ್ಷತೆ ವಹಿಸಿದ್ದರು. ಕಲಾವಿದ ನಿಶಾಂತ ಬಳಿಗಾರ, ಉಮಾ ಬಳಿಗಾರ, ವಿಜಯಕುಮಾರ ಬಳಿಗಾರ, ಸುರೇಶ ಮನಗುತ್ತಿ, ರಾಘವೇಂದ್ರ, ಚಂದ್ರು ಬಳಿಗಾರ, ದೀಪಕ ಬಾಣದ, ಶ್ರೀಶೈಲಗೌಡ ಕಮತರ, ಮೀನಾಕ್ಷಿ ಬಿ. ಹುರಕಡ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.