ಧಾರವಾಡ: ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ ಕುಂದಗೋಳದ ಯರಿಗುಪ್ಪಿ ಗ್ರಾಮದ ವಿಜಯಕುಮಾರ ತಮ್ಮಪ್ಪ ಬೆಂತೂರಗೆ 3.7 ವರ್ಷ ಜೈಲು, ₹ 12 ಸಾವಿರ ದಂಡವನ್ನು ಪೊಕ್ಸೊ ವಿಶೇಷ ಸೆಷನ್ಸ್ ಕೋರ್ಟ್ ವಿಧಿಸಿದೆ.
ನ್ಯಾಯಾಧೀಶ ರಾಜಕುಮಾರ ಸಿ. ಆದೇಶ ನೀಡಿದ್ಧಾರೆ. ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯಡಿ 3 ವರ್ಷ ಜೈಲು, ₹ 10 ಸಾವಿರ ದಂಡ, ಐಪಿಸಿ 506 ನಡಿ(ಕ್ರಿಮಿನಲ್ ಬೆದರಿಕೆ 6 ತಿಂಗಳು ಜೈಲು, ₹ 2 ಸಾವಿರ ದಂಡ ಹಾಗೂ ಐಪಿಸಿ 341 ನಡಿ (ಅಕ್ರಮ ಬಂಧನ) ಒಂದು ತಿಂಗಳು ಜೈಲು ಶಿಕ್ಷೆ ಘೋಷಿಸಿದ್ದಾರೆ.
ದಂಡದಲ್ಲಿ ₹ 8 ಸಾವಿರ ಹಾಗೂ ಸಂತ್ರಸ್ತ ಪರಿಹಾರ ಯೋಜನೆಯಡಿ ₹ 25 ಸಾವಿರವನ್ನು ಸಂತ್ರಸ್ತ ಬಾಲಕಿಗೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದ್ಧಾರೆ.
ಏನಿದು ಪ್ರಕರಣ: 2021ರ ಆಗಸ್ಟ್ 10 ರಾತ್ರಿ ಪ್ರಕರಣ ನಡೆದಿತ್ತು. ನೀರು ಒಯ್ಯಲು ನಳದ ಬಳಿಗೆ ಬಂದಿದ್ದ ಬಾಲಕಿಯನ್ನು ವಿಜಯಕುಮಾರ ಹೊತ್ತೊಯ್ದು ಅತ್ಯಾಚಾರ ಎಸಗಿದ್ದ. ಈ ವಿಷಯ ಬಾಯಿಬಿಟ್ಟರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಬಾಲಕಿಯ ತಂದೆ ಧಾರವಾಡ ಮಹಿಳಾ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣದ ತನಿಖೆ ನಡೆಸಿ ಕೋರ್ಟ್‌ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಶೈಲಾ ಅಂಗಡಿ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.