ADVERTISEMENT

‘ಪೋಲಿಯೊ ನಿರ್ಮೂಲನೆಗೆ ಕೈಜೋಡಿಸಿ’

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 13:37 IST
Last Updated 29 ಫೆಬ್ರುವರಿ 2024, 13:37 IST
ಕುಂದಗೋಳ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ನಡೆದ ಪಲ್ಸ್ ಪೋಲಿಯೊ ಪೂರ್ವಭಾವಿ ಸಭೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿದ್ಯಾವತಿ ಪಾಟೀಲ ಮಾತನಾಡಿದರು
ಕುಂದಗೋಳ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ನಡೆದ ಪಲ್ಸ್ ಪೋಲಿಯೊ ಪೂರ್ವಭಾವಿ ಸಭೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿದ್ಯಾವತಿ ಪಾಟೀಲ ಮಾತನಾಡಿದರು   

ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಗುರುವಾರ ಮಾರ್ಚ್‌ 3 ರಂದು ನಡೆಯುವ ಪಲ್ಸ್ ಪೋಲಿಯೊ ಕಾರ್ಯಕ್ರಮದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದ ಅವರು,  ‘0-5 ವರ್ಷದ ಒಟ್ಟು 14,498 ಮಕ್ಕಳಿಗೆ ಈ ಬಾರಿ ಪೋಲಿಯೊ ಹನಿ ಹಾಕಲಿದ್ದೇವೆ. ಒಟ್ಟು 99 ಬೂತ್‍ಗಳಲ್ಲಿ 396 ಸದಸ್ಯರು, 104 ಗುಂಪುಗಳು, 19 ಮೇಲ್ವಿಚಾರಕರು ಇತರೆ ಸಹಾಯಕರು ಕಾರ್ಯ ನಿರ್ವಹಿಸಲಿದ್ದಾರೆ’ ಎಂದರು. 

‘6 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಲಸಿಕಾ ಕಾರ್ಯಕ್ರಮ ನಡೆಯಲಿದ್ದು ಈಗಾಗಲೇ ಪೋಲಿಯೊ ಲಸಿಕೆಗಳು ಅಲ್ಲಿಗೆ ತಲುಪಿವೆ. ಭಿತ್ತಿ ಪತ್ರದ ಮೂಲಕ, ಧ್ವನಿ ವರ್ಧಕಗಳ ಮೂಲಕ, ಜಾಥಾ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಪೋಲಿಯೊ ಕಾರ್ಯಕ್ರಮದಂದು ಹೊರಗುಳಿದ ಮಕ್ಕಳನ್ನು ಗುರುತಿಸಿ ಪೋಲಿಯೊ ಹನಿ ಹಾಕಲಾಗುವುದು‘ ಎಂದು ಮಾಹಿತಿ ನೀಡಿದರು. 

ಹೆಸ್ಕಾಂ ಎಂಜಿನಿಯರ್‌ ವಿರೇಶ್ ಮಠದ, ಸಿಡಿಪಿಒ ಶಂಶಾದ ಕಂದಗಲ್, ರವೀಂದ್ರ ಬೋವಿಯಾರ್, ಜೆ.ಜೆ ಕಟಾಪುರಿಮಠ, ಮಹೇಶ ಶಾನಬಾಳ, ವಿರೇಶ ಅಂಗಡಿ, ಮಾಲಾ ಕರಡಿಗುದ್ದು, ಡಾ. ಸಂಜನಾ ಪಾಟೀಲ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.