ADVERTISEMENT

ನರಗುಂದ ಬಾಬಾಸಾಹೇಬರ ಬದುಕಿನ ಸಂಶೋಧನೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 15:40 IST
Last Updated 21 ನವೆಂಬರ್ 2024, 15:40 IST

ಧಾರವಾಡ: ‘ಬ್ರಿಟಿಷರ ವಿರುದ್ಧ ಹೋರಾಡಿದ ನರಗುಂದದ ಬಾಬಾಸಾಹೇಬರಿಗೆ ಗಲ್ಲು ಶಿಕ್ಷೆ ಆಗಿಲ್ಲ. ಈ ಕುರಿತು ಸಂಶೋಧನೆ ನಡೆಸಬೇಕು’ ಎಂದು ಲೇಖಕ ಮನೋಜ ಪಾಟೀಲ ಒತ್ತಾಯಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘1858ರ ಜೂನ್ 12ರಂದು ಬಾಬಾಸಾಹೇಬರನ್ನು ಗಲ್ಲಿಗೆ ಏರಿಸಲಾಗಿತ್ತು ಎಂದು  ಇತಿಹಾಸ ಹೇಳುತ್ತದೆ. ಆದರೆ, ವಾಸ್ತವದಲ್ಲಿ ಬಾಬಾಸಾಬೇಹರಿಗೆ ಗಲ್ಲು ಶಿಕ್ಷೆಯಾಗಿಲ್ಲ. ಅವರು ಬ್ರಿಟಿಷರಿಂದ  ತಪ್ಪಿಸಿಕೊಂಡು ನೇಪಾಳಕ್ಕೆ ತೆರಳಿ,  ನಂತರ ಕಾಶಿಯಲ್ಲಿ ನೆಲೆಸಿದ್ದರು. ಅವರು ಜೀವನ ಚರಿತ್ರೆಯ ಪುಸ್ತಕ ಬರೆ‌ಯುತ್ತಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT