ADVERTISEMENT

ಚನ್ನಬಸವಣ್ಣ, ರಾಮಕೃಷ್ಣ ಗುಂದಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 15:40 IST
Last Updated 21 ನವೆಂಬರ್ 2024, 15:40 IST
ಧಾರವಾಡದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಏರ್ಪಡಿಸಿದ್ದ ‘ಧರೆಗೆ ದೊಡ್ಡವರು’ ಕಾರ್ಯಕ್ರಮದಲ್ಲಿ ಸಿ.ಚನ್ನಬಸವಣ್ಣ ಮತ್ತು ರಾಮಕೃಷ್ಣ ಗುಂದಿ ಅವರನ್ನು ಸನ್ಮಾನಿಸಲಾಯಿತು
ಧಾರವಾಡದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಏರ್ಪಡಿಸಿದ್ದ ‘ಧರೆಗೆ ದೊಡ್ಡವರು’ ಕಾರ್ಯಕ್ರಮದಲ್ಲಿ ಸಿ.ಚನ್ನಬಸವಣ್ಣ ಮತ್ತು ರಾಮಕೃಷ್ಣ ಗುಂದಿ ಅವರನ್ನು ಸನ್ಮಾನಿಸಲಾಯಿತು   

ಧಾರವಾಡ: ‘ಪ್ರಕಾಶಕ ಸಿ.ಚನ್ನಬಸವಣ್ಣ ಅವರು ಸಮಾಜವಾದಿ ಚಿಂತನೆ ಹೊಂದಿದವರು. ಸಮಾಜವಾದಿ ಚಿಂತನೆಗಳ ಮೂಲಕವೇ ಲೋಹಿಯಾ ಪ್ರಕಾಶನ ಸ್ಥಾಪಿಸಿದ್ದಾರೆ’ ಎಂದು ಕಾರಟಗಿಯ ಬಿ.ಪೀರಭಾಷಾ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯೋತ್ಸವ, ಕರ್ನಾಟಕ ನಾಮಕರಣ 50ರ ಸಂಭ್ರಮ ಅಂಗವಾಗಿ ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಗುರುವಾರ ಆಯೋಜಿಸಿದ್ದ ‘ಧರೆಗೆ ದೊಡ್ಡವರು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಿ.ಚನ್ನಬಸವಣ್ಣ ಅವರು ಜೆ.ಎಚ್.ಪಟೇಲ್ ಹಾಗೂ ಕೋಣಂದೂರು ಲಿಂಗಪ್ಪ ಅವರ ಸಮಾಜವಾದಿ ಚಿಂತನೆಗಳಿಂದ ಪ್ರಭಾವಿತರಾಗಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲಿಯೇ ಅನೇಕ ಕನ್ನಡ ಹೋರಾಟಗಳಲ್ಲಿ ಭಾಗವಹಿಸಿದ್ದಾರೆ. ಅವರು ಗೋಕಾಕ ಚಳವಳಿಯಲ್ಲಿ ಪಾಲ್ಗೊಂಡಿದ್ದರು’ ಎಂದರು.

ADVERTISEMENT

ಬಿ.ಎನ್. ವಾಸರೆ ಮಾತನಾಡಿ, ‘ರಾಮಕೃಷ್ಣ ಗುಂದಿ ಅವರು ಕಥೆಗಾರರಾಗಿ, ಯಕ್ಷಗಾನ ಕಲಾವಿದರಾಗಿ, ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅವರು ಬಹುಮುಖ ಪ್ರತಿಭೆ. ಅವರ ಅಸ್ಪೃಶ್ಯತೆ ನಿವಾರಣೆ ಹಾಗೂ ಮೌಢ್ಯ ನಿವಾರಣೆ ನಿಟ್ಟಿನ ಬೀದಿ ನಾಟಕಗಳು ಸಾಮಾಜಿಕ ಮನ್ನಣೆ ಪಡೆದಿವೆ’ ಎಂದು ಹೇಳಿದರು.

ಸತೀಶ ತುರಮರಿ ಹಿರೇಮಠ, ವೀರಣ್ಣಒಡ್ಡೀನ, ಜಿನದತ್ತ ಹಡಗಲಿ, ಶೈಲಜಾ ಅಮರಶೆಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.