ADVERTISEMENT

ನೇಹಾ ಕೊಲೆ ಪ್ರಕರಣ: ಗೃಹ ಸಚಿವರ ಕ್ಷಮೆಗೆ ಆಗ್ರಹ- ಶವ ಇಟ್ಟು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2024, 8:15 IST
Last Updated 19 ಏಪ್ರಿಲ್ 2024, 8:15 IST
   

ಹುಬ್ಬಳ್ಳಿ: 'ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಆಕಸ್ಮಿಕ ಎಂದು ಹೇಳಿಕೆ ನೀಡಿರುವ ಗೃಹ ಸಚಿವ ಜಿ. ಪರಮೇಶ್ವರ ಅವರು, ಕೂಡಲೇ ಕ್ಷಮೆಯಾಚಿಸಬೇಕು' ಎಂದು ಬಿನೆಪಿ ಹಾಗೂ ವಿವಿಧ ಹಿಂದೂ ಸಂಘಟನೆಗಳು ಆಗ್ರಹಿಸಿವೆ.

ನಗರದ ಎರಡೆತ್ತಿನಮಠದ ಎದುರು ನೇಹಾ ಅವರ ಪಾರ್ಥಿವ ಶವ ಇಟ್ಟು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, 'ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರು, ಬೇಜವಾಬ್ದಾರಿ ಹೇಳಿಕೆ ನೀಡಿದ್ದು ಖಂಡನೀಯ. ವಿದ್ಯಾರ್ಥಿನಿ ಸಾವಿನಲ್ಲೂ ರಾಜಕೀಯ ಮಾಡುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, 'ಲವ್ ಜಿಹಾದ್ ಮತ್ತು ಭಯೋತ್ಪಾದಕರನ್ನು ನೀವು ಬ್ರದರ್ಸ್ ಎನ್ನುತ್ತೀರಿ. ಆಕಸ್ಮಿಕ ಎನ್ನಲು ಇದು ಅಪಘಾತವೇ? ಪ್ರೀತಿ ಮಾಡುವುದಿಲ್ಲ ಎಂದರೆ ಕೊಲೆ ಮಾಡಬೇಕೆ? ಗೃಹ ಸಚಿವರು ತಮ್ಮ ಹೇಳಿಕೆಗೆ ತಕ್ಷಣ ಕ್ಷಮೆ ಯಾಚಿಸಬೇಕು' ಎಂದು ಒತ್ತಾಯಿಸಿದರು.

ADVERTISEMENT

ಬಿಜೆಪಿ ಮುಖಂಡರಾದ ಪ್ರಭು ನವಲಗುಂದಮಠ, ಅನೂಫ್ ಬಿಜವಾಡ,‌ ಚಂದ್ರಶೇಖರ ಗೋಕಾಕ, ಅಮೃತ ಹಿರೇಮಠ, ಚನ್ನಯ್ಯ ಚೌಕಿಮಠ, ಶಿವಯ್ಯ ಹಿತೇಮಠ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು ಸ್ಥಳೀಯರು ನೇಹಾ ಅಂತ್ಯಕ್ರಿಯೆ ಮೆರವಣಿಗೆಯಲ್ಲಿ‌‌ ಪಾಲ್ಗೊಂಡಿದ್ದಾರೆ. ಮಂಟೂರು ರಸ್ತೆಯ ಕಲಬುರ್ಗಿ ಮಠದ ಬಳಿಯಿರುವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.