ADVERTISEMENT

PU Result: ಧಾರವಾಡ ಜಿಲ್ಲೆಗೆ 23ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2024, 14:30 IST
Last Updated 10 ಏಪ್ರಿಲ್ 2024, 14:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಧಾರವಾಡ: ದ್ವಿತೀಯ ಪಿಯು ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಜಿಲ್ಲೆಯಲ್ಲಿ ಪರೀಕ್ಷೆ ಎದುರಿಸಿದ್ದ 27,428 ವಿದ್ಯಾರ್ಥಿಗಳ ಪೈಕಿ 21,562 ಮಂದಿ ತೇರ್ಗಡೆಯಾಗಿದ್ದಾರೆ. ರಾಜ್ಯದಲ್ಲಿ ಜಿಲ್ಲೆಯು 23ನೇ ಸ್ಥಾನ ದಾಖಲಿಸಿದೆ.

ಹುಬ್ಬಳ್ಳಿಯ ವಿದ್ಯಾನಿಕೇತನ ಪಿಯು ಕಾಲೇಜಿನ ವಿದ್ಯಾರ್ಥಿನಿ ಎ.ವಿದ್ಯಾಲಕ್ಷ್ಮಿ 600ಕ್ಕೆ 598 (ವಿಜ್ಞಾನ ವಿಭಾಗ) ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಹಾಗೂ ಧಾರವಾಡದ ಮಾಳಮಡ್ಡಿಯ ಕೆಇಬಿ ಸಂಯುಕ್ತ ಪದವಿಪೂರ್ವ ಕಾಲೇಜಿನ ರವಿನಾ ಲಮಾಣಿ 595 ಅಂಕ (ಕಲಾ ವಿಭಾಗ) ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ADVERTISEMENT

2023ರಲ್ಲಿ ಜಿಲ್ಲೆಯು ಶೇ 73.54ರಷ್ಟು ಫಲಿತಾಂಶ ದಾಖಲಿಸಿ 27ನೇ ಸ್ಥಾನ ಪಡೆದಿತ್ತು. ಈ ಬಾರಿ ಶೇ 80.70ರಷ್ಟು ಫಲಿತಾಂಶ ಪಡೆದು 23ನೇ ಸ್ಥಾನಕ್ಕೆ ಏರಿದೆ. ಕಳೆದ ಬಾರಿಗಿಂತ ನಾಲ್ಕು ಸ್ಥಾನ ಮೇಲಕ್ಕೆ ಜಿಗಿದಿದೆ.

13,381 ಬಾಲಕರ ಪೈಕಿ 9,921 ಮಂದಿ (ಶೇ 74.14) ಹಾಗೂ 14,047 ವಿದ್ಯಾರ್ಥಿನಿಯರ ಪೈಕಿ 11,641 ವಿದ್ಯಾರ್ಥಿನಿಯರು (ಶೇ 82.87) ಪಾಸಾಗಿದ್ದಾರೆ. ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ಧಾರೆ.

ಪರೀಕ್ಷೆ ಎದುರಿಸಿದ್ದ 25,791 ಹೊಸಬರ ಪೈಕಿ 20,813 ಮಂದಿ (ಶೇ 80.70) ಉತ್ತೀರ್ಣರಾಗಿದ್ದಾರೆ. 518 ಖಾಸಗಿ ಅಭ್ಯರ್ಥಿಗಳ ಪೈಕಿ 253 ಹಾಗೂ 1,119 ಪುನರಾರ್ವತಿತರ ಪೈಕಿ 496 ಮಂದಿ ಉತ್ತೀರ್ಣರಾಗಿದ್ಧಾರೆ.

ಇಂಗ್ಲಿಷ್‌ ಮಾಧ್ಯಮದ 17,529 ವಿದ್ಯಾರ್ಥಿಗಳಲ್ಲಿ 14,780 (ಶೇ 84.32), ಕನ್ನಡ ಮಾಧ್ಯಮದ 9,899 ವಿದ್ಯಾರ್ಥಿಗಳಲ್ಲಿ 6,782 (ಶೇ 68.51) ಮಂದಿ, ನಗರ ಪ್ರದೇಶದ 24,147ವಿದ್ಯಾರ್ಥಿಗಳಲ್ಲಿ 19,321 (ಶೇ 80.01), ಗ್ರಾಮೀಣ ಪ್ರದೇಶದ 3,281 ವಿದ್ಯಾರ್ಥಿಗಳ ಪೈಕಿ 2,241 (ಶೇ 68.3) ಮಂದಿ ಪಾಸಾಗಿದ್ದಾರೆ.

ಕಲಾ ವಿಭಾಗ: ಒಟ್ಟು 7,125 ವಿದ್ಯಾರ್ಥಿಗಳಲ್ಲಿ 4,887 (ಶೇ 68.59) ಮಂದಿ, ಹೊಸಬರಲ್ಲಿ 6,327 ಮಂದಿ ಪೈಕಿ 4,491 (ಶೇ 70.98) ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ವಾಣಿಜ್ಯ ವಿಭಾಗ: ಒಟ್ಟು 7,143ವಿದ್ಯಾರ್ಥಿಗಳ ಪೈಕಿ 5,038 (ಶೇ 70.53), ಹೊಸಬರಲ್ಲಿ 6,715 ವಿದ್ಯಾರ್ಥಿಗಳ ಪೈಕಿ 4,880 (ಶೇ 72.67) ತೇರ್ಗಡೆಯಾಗಿದ್ದಾರೆ.

ವಿಜ್ಞಾನ ವಿಭಾಗ: ಒಟ್ಟು 13,160 ಮಂದಿ ಪೈಕಿ 11,637 ಮಂದಿ (ಶೇ 88.43), ಹೊಸಬರಲ್ಲಿ 12,749 ವಿದ್ಯಾರ್ಥಿಗಳ ಪೈಕಿ 11,442 ಮಂದಿ (ಶೇ 89.75) ಉತ್ತೀರ್ಣರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.