ADVERTISEMENT

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಶಂಕಿತನ ಪತ್ತೆಗೆ ಅವಳಿನಗರದಲ್ಲೂ ಶೋಧ

ಸಿಸಿಟಿವಿ ಕ್ಯಾಮರಾ ವಿಡಿಯೊ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2024, 16:04 IST
Last Updated 12 ಮಾರ್ಚ್ 2024, 16:04 IST
<div class="paragraphs"><p>ರಾಮೇಶ್ವರಂ ಕೆಫೆ ಸ್ಫೋಟ: ಶಂಕಿತ ವ್ಯಕ್ತಿ</p></div>

ರಾಮೇಶ್ವರಂ ಕೆಫೆ ಸ್ಫೋಟ: ಶಂಕಿತ ವ್ಯಕ್ತಿ

   

ಹುಬ್ಬಳ್ಳಿ: ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಶಂಕಿತ ಆರೋಪಿಗಾಗಿ ರಾಷ್ಟ್ರೀಯ ತನಿಖಾ ದಳದ (ಐಎನ್‌ಐ) ಸಿಬ್ಬಂದಿ  ಹುಬ್ಬಳ್ಳಿ–ಧಾರವಾಡದಲ್ಲೂ ಶೋಧ ಕಾರ್ಯ ಕೈಗೊಂಡಿದೆ.

ಶಂಕಿತ ಆರೋಪಿ ಬಳ್ಳಾರಿ, ಕಲಬುರಗಿ, ಹೊಸಪೇಟೆ ಸುತ್ತಾಡಿದ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಐಎನ್‌ಐ ಸಿಬ್ಬಂದಿ ಅಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದು ಶಂಕಿತ ಓಡಾಡಿದ ಸ್ಥಳಗಳನ್ನು ಗುರುತಿಸಿ, ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಆದರೆ, ಬಾಂಬ್‌ ಇಟ್ಟ ಆರೋಪಿ ಪತ್ತೆಯಾಗದ ಕಾರಣ ಐಎನ್‌ಐ ರಾಜ್ಯದಾದ್ಯಂತ ಸಿಸಿಟಿವಿ ಕ್ಯಾಮೆರಾ ಪರಿಶೀಲನೆಗೆ ಸೂಚಿಸಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

ಫೆಬ್ರುವರಿ 27ರಿಂದ ಮಾರ್ಚ್‌ 7 ರವರೆಗೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾದ ವಿಡಿಯೊ ದೃಶ್ಯಾವಳಿ ಪರಿಶೀಲನೆಯನ್ನು ಒಂದು ತಂಡ ಮಾಡಿದರೆ, ಲೈವ್‌ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆಯನ್ನು ಮತ್ತೊಂದು ತಂಡ ಮಾಡುತ್ತಿದೆ. 100ಕ್ಕೂ ಹೆಚ್ಚು ವಿಡಿಯೊ ದೃಶ್ಯಾವಳಿಗಳ ಪರಿಶೀಲನೆ ನಡೆಸಲಾಗಿದೆ.

‘ನಗರಕ್ಕೆ ಪ್ರವೇಶಿಸುವ ಸ್ಥಳಗಳಲ್ಲಿ ಹಾಗೂ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ, ಪ್ರಮುಖ ವೃತ್ತಗಳು ಹಾಗೂ ಜನದಟ್ಟಣೆ ಪ್ರದೇಶಗಳಲ್ಲಿ ಪೊಲೀಸ್‌ ಇಲಾಖೆ, ಮಹಾನಗರ ಪಾಲಿಕೆ ವತಿಯಿಂದ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ವಿಡಿಯೊ ದೃಶ್ಯಾವಳಿ ಪರಿಶೀಲನೆ ನಡೆದಿದೆ. ಪ್ರಮುಖ ಬಡಾವಣೆಗಳ ಮನೆಗಳಲ್ಲಿ ಅಳವಡಿಸಿದ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಗಳ ಪರಿಶೀಲನೆ ಸಹ ನಡೆದಿದೆ' ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.