ADVERTISEMENT

ರಾಮಮಂದಿರ ಉದ್ಘಾಟನೆ: ರಾಮೋತ್ಸವ ನಾಳೆಯಿಂದ

ಐದು ದಿನ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2024, 14:27 IST
Last Updated 16 ಜನವರಿ 2024, 14:27 IST

ನವಲಗುಂದ: ಅಯೋಧ್ಯೆಯಲ್ಲಿ ಜ.22 ರಂದು ಉದ್ಘಾಟನೆಗೊಳ್ಳಲಿರುವ ರಾಮಮಂದಿರ ಹಾಗೂ ಶ್ರೀ ರಾಮ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಪಟ್ಟಣದ ಆರ್ಯ ವೈಶ್ಯ ಸಮಾಜದಿಂದ ಜ.18 ರಿಂದ 22 ರವರೆಗೆ 5 ದಿನಗಳವರೆಗೆ ರಾಮೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಆರ್ಯ ವೈಶ್ಯ ಸಮಾಜದ ಅಧ್ಯಕ್ಷ ಲೋಕನಾಥ ಹೆಬಸೂರ ಹೇಳಿದರು.

ಅವರು ಮಂಗಳವಾರ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಈ ಕುರಿತು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಜ.18 ರಿಂದ 22ರವರೆಗೆ ವಿವಿಧ ಪೂಜಾ ಹಾಗೂ ಭವ್ಯ ಮೂರ್ತಿಗಳ ಮೆರವಣಿಗೆ ಜರುಗಲಿದೆ. 18ರಂದು ಪ್ರಭು ಶ್ರೀ ರಾಮ, ಲಕ್ಷ್ಮಣ, ಸೀತಾ ಹಾಗೂ ಆಂಜನೇಯ ಮೂರ್ತಿಗಳ ಭವ್ಯ ಮೆರವಣಿಗೆ ಹಾಗೂ ಸಂಜೆ ಗಣಪತಿ ದೇವಸ್ಥಾನದಿಂದ ಶ್ರೀರಾಮ ದೇವರ ದೇವಸ್ಥಾನದವರೆಗೆ ವಸ್ತ್ರ ಸಂಹಿತೆಯೊಂದಿಗೆ ಶ್ರೀರಾಮ ಜಪ ಹಾಗೂ ಮಹಾಮಂಗಳಾರತಿ ನಡೆಯಲಿದೆ.

ಜ.19 ರಂದು ಸಂಜೆ ಅಮ್ಮನವರ ಪಲ್ಲಕ್ಕಿ ಸೇವೆ, ಶ್ರೀರಾಮ ಜಪ, ಶ್ರೀ ಸೀತಾರಾಮ ಕಲ್ಯಾಣ ಹಾಗೂ ಮಹಾಮಂಗಳಾರತಿ, ಜ.20ರಂದು ಸಂಜೆ ರಾಮಗೀತೆ ಗಾಯನ, ಜಪ, ಹನುಮಾನ ಚಾಲೀಸಾ ಪಠಣ ನಡೆಯಲಿದೆ.

ADVERTISEMENT

ಜ 20 ರಂದು ಸಂಜೆ ಮಕ್ಕಳಿಗೆ ರಾಮಾಯಣ ಕಥೆಯ ಚಿತ್ರಣ ಹಾಗೂ ಕಥೆಯ ವಿವರಣೆ ಸ್ಪರ್ಧೆ, ಮಹಾ ಮಂಗಳಾರತಿ, ಜ 21ರಂದು ಸಂಜೆ ಪ್ರಭು ಶ್ರೀರಾಮನ ರಥೋತ್ಸವ, ಉಯ್ಯಾಲೆ ಉತ್ಸವ, ಶ್ರೀರಾಮ ಜಪ, ಮಹಾ ಮಂಗಳಾರತಿ.

ಜ.22 ರಂದು ಬೆಳಿಗ್ಗೆ ಶ್ರೀರಾಮನಾಮ ಜಪ, ಸಂಕಲ್ಪ, ಪೂಣ್ಯಾಹವಾಚನ, ನವಗ್ರಹ ಪೂಜಾ, ಶ್ರೀನೇಮ ತಾರಕ ಹೋಮ, ಪೂರ್ಣಾಹುತಿ, ಮಹಾ ಮಂಗಳಾರತಿ. ಪ್ರತಿ ದಿನ ಕಾರ್ಯಕ್ರಮದ ನಂತರ ಮಹಾಪ್ರಸಾದ ಜರುಗಲಿದೆ ಎಂದರು.

ಅಜಿತ್ ಆನೇಗುಂದಿ, ಶಂಕರ ಧಾರವಾಡ, ಎಸ್.ಎನ್.ಡಂಬಳ, ಮುರಳೀಧರ ಹೆಬಸೂರ, ಉಷಾರಾಣಿ ಧಾರವಾಡ, ಶ್ರೀದೇವಿ ಆನೇಗುಂದಿ, ಸರಸ್ವತಿ ಹರಿಹರ, ಡಿ.ಜಿ.ಹೆಬಸೂರ, ಮನೋಹರ ಇಂಗಳಹಳ್ಳಿ, ಈಶ್ವರ ಹೆಬಸೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.