ಛಬ್ಬಿ (ಹುಬ್ಬಳ್ಳಿ): ಗ್ರಾಮದಲ್ಲಿ ಬೆಳಿಗ್ಗೆಯಿಂದ ಅಧಿಕಾರಿಗಳ ದಂಡು ಕಟ್ಟಿಕೊಂಡು ಜನರ ಅಹವಾಲುಗಳನ್ನು ಸ್ವೀಕರಿಸಿದ್ದ ಕಂದಾಯ ಸಚಿವ ಆರ್.ಅಶೋಕ್ ರಾತ್ರಿ ಮೊಸರನ್ನ ಊಟ ಮಾಡಿ ನಿದ್ದೆಗೆ ಜಾರಿದರು.
ಗ್ರಾಮದ ಸರ್ಕಾರಿ ಶಾಲೆ ಕೊಠಡಿಯಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.
ಮಧ್ಯಾಹ್ನ ಉತ್ತರ ಕರ್ನಾಟಕದ ರೊಟ್ಟಿ ಊಟ ಸಚಿವರಿಗೆ ತುಸು ಖಾರ ಎನಿಸಿತು. ಆದ್ದರಿಂದ ರಾತ್ರಿ ಮೊಸರನ್ನ ಸೇವಿಸಿದರು.
ಸಚಿವರಿಗಾಗಿ ಕೊಠಡಿಯಲ್ಲಿ ಚಾಪೆ, ದಿಂಬು, ಏರ್ ಕೂಲರ್, ಪ್ಯಾನ್ ವ್ಯವಸ್ಥೆ ಮಾಡಲಾಗಿತ್ತು. ಮಲಗುವ ಮುನ್ನ ಗ್ರಾಮದ ಬೀದಿಯಲ್ಲಿ ವಾಕಿಂಗ್ ಮಾಡಿದರು. ಈ ವೇಳೆಯೂ ಜನ ಅಹವಾಲು ಸಲ್ಲಿಸಲು ಮುಗಿ ಬಿದ್ದರು.
ಸಚಿವರೊಂದಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ತಹಶೀಲ್ದಾರ್‌ಗಳು ವಾಸ್ತವ್ಯ ಹೂಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.