ADVERTISEMENT

ಹುಬ್ಬಳ್ಳಿ: ಕಿಮ್ಸ್ ವಸತಿ ಗೃಹದಲ್ಲಿ ಸರಣಿ ಮನೆಗಳ್ಳತನ

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 7:24 IST
Last Updated 13 ಜೂನ್ 2022, 7:24 IST
   

ಹುಬ್ಬಳ್ಳಿ: ನಗರದ ಕಿಮ್ಸ್ ಆಸ್ಪತ್ರೆಯ ವಸತಿ ಗೃಹದಲ್ಲಿ ಮನೆ ಕಳವು ಪ್ರಕರಣ ಮುಂದುವರಿದಿದೆ.

ಸೋಮವಾರ ಬೆಳಿಗ್ಗೆ 3.45ರ ವೇಳೆ ವಸತಿ ಗೃಹದಲ್ಲಿನ ಮೂರು ಮನೆಗಳ ಬಾಗಿಲು ಮುರಿದು ಕಳವು ಮಾಡಲಾಗಿದೆ. ಒಂದು ತಿಂಗಳ ಹಿಂದೆಯಷ್ಟೇ ಮೂರು ಮನೆ ಕಳವು ಪ್ರಕರಣ ನಡೆದಿತ್ತು.

ಬಾಗಿಲು ಮುರಿದು ತಿಜೋರಿಯಲ್ಲಿದ್ದ ₹ 6 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಹಾಗೂ ಅಂದಾಜು ₹1 ಲಕ್ಷ ನಗದು ಕಳವು ಮಾಡಲಾಗಿದೆ. ವಸತಿ ಗೃಹದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳರ ಚಲನವಲನಗಳ ದೃಶ್ಯಾವಳಿ ಸೆರೆಯಾಗಿವೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

'ಬೀಗ ಹಾಕಿರುವ ಮನೆಗಳನ್ನು ಗುರಿಯಾಗಿಸಿಕೊಂಡು ಕಳವು ಮಾಡಲಾಗುತ್ತಿದೆ. ಈ ಹಿಂದೆ ಡಾಕ್ಟರ್‌ಗಳ ಮನೆ ಬಾಗಿಲು ಮುರಿದು ಚಿನ್ನಾಭರಣ ದೋಚಿದ್ದರು. ಸಿಸಿಟಿವಿ ಅಳವಡಿಕೆ ಮಾಡಿದ್ದರೂ ಕಳವು ಪ್ರಕರಣ ಮಾತ್ರ ನಿಲ್ಲುತ್ತಿಲ್ಲ' ಎಂದು ಕಿಮ್ಸ್ ನರ್ಸಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಸುಮಿತ್ರಾ ಅವತ್ತನವರ ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಇಸ್‌ಸ್ಪೆಕ್ಟರ್ ಮಹಾಂತೇಶ ಎಚ್., 'ಸಿಸಿಟಿವಿ ಕ್ಯಾಮೆರಾದಲ್ಲಿ ನಾಲ್ವರ ಚಲನವಲನಗಳು ಸೆರೆಯಾಗಿದೆ. ಅವರ ಮುಖವು ಸಹ ಸೆರೆಯಾಗಿದ್ದು, ಪತ್ತೆ ಕಾರ್ಯ ನಡೆಯುತ್ತಿದೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.