ADVERTISEMENT

ಉದ್ಯೋಗ ನೀಡುವ ನೆಪದಲ್ಲಿ ₹6 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2024, 15:54 IST
Last Updated 30 ಜನವರಿ 2024, 15:54 IST
ವಂಚನೆ
ವಂಚನೆ   

ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ: ಬಿಡುವಿನ ವೇಳೆಯಲ್ಲಿ ಕೆಲಸ ಮಾಡಿ ಹೆಚ್ಚಿನ ಲಾಭ ಗಳಿಸಬಹುದು ಎಂದು ಧಾರವಾಡದ ಶಿಲ್ಪಾ ನಿಲಗುಂದ ಅವರ ವಾಟ್ಸ್‌ಆ್ಯಪ್‌ ನಂಬರ್‌ಗೆ ಸಂದೇಶ ಕಳುಹಿಸಿದ ವ್ಯಕ್ತಿ, ಅವರಿಂದ ₹6.02 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.

ಹೋಟೆಲ್‌ಗಳಿಗೆ ರೇಟಿಂಗ್ಸ್‌ ನೀಡಿದರೆ ಹೆಚ್ಚಿನ ಲಾಭ ಪಡೆಯಬಹುದು ಎಂದು ವಂಚಕ ಶಿಲ್ಪಾ ಅವರಿಗೆ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಕಳುಹಿಸಿದ್ದ. ನಂತರ ಟೆಲಿಗ್ರಾಮ್‌ ಗ್ರುಪ್‌ಗೆ ಅವರ ನಂಬರ್‌ ಸೇರಿಸಿ, ಟಾಸ್ಕ್‌ಗಳನ್ನು ನೀಡಿದ್ದ. ಅವುಗಳಿಗೆ ಪ್ರತಿಯಾಗಿ ಆರಂಭದಲ್ಲಿ ಹಣ ವರ್ಗಾಯಿಸಿ ನಂಬಿಕೆ ಗಳಿಸಿದ್ದ. ಅದನ್ನು ನಂಬಿದ ಶಿಲ್ಪಾ ಹಂತಹಂತವಾಗಿ ಹಣ ವರ್ಗಾಯಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ADVERTISEMENT

ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉದ್ಯಮಿಗೆ ₹4.37 ಲಕ್ಷ ವಂಚನೆ: ಕ್ರಿಫ್ಟೋ ಕರೆನ್ಸಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ನಗರದ ಉದ್ಯಮಿಯೊಬ್ಬರಿಗೆ ಕರೆ ಮಾಡಿದ ವಂಚಕ, ಅವರಿಂದ ₹4.37 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.

ರುದ್ರಗಂಗಾ ಬಡಾವಣೆಯ ಉದ್ಯಮಿ ದಾವಲ್‌ ಬೇಳೂಕರ ಅವರು ಹುಬ್ಬಳ್ಳಿ ಸೈಬರ್‌ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಉದ್ಯಮಿಗೆ ಕರೆ ಮಾಡಿ ನಂಬಿಸಿದ ವಂಚಕ, ಅವರ ನಂಬರ್‌ ಅನ್ನು ಟೆಲಿಗ್ರಾಮ್‌ ಗ್ರುಪ್‌ಗೆ ಸೇರಿಸಿ ಹೆಚ್ಚಿನ ಲಾಭದ ಆಸೆ ತೋರಿಸಿದ್ದಾನೆ. ಅದನ್ನು ನಂಬಿದ ಅವರು ಹಂತ ಹಂತವಾಗಿ ಹಣ ವರ್ಗಾಯಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.