ADVERTISEMENT

‘ಪರಿಸರ ಉಳಿದರೆ ಆರೋಗ್ಯವಂತ ಸಮಾಜ ನಿರ್ಮಾಣ’

​ಪ್ರಜಾವಾಣಿ ವಾರ್ತೆ
Published 5 ಜೂನ್ 2024, 16:27 IST
Last Updated 5 ಜೂನ್ 2024, 16:27 IST
ತಾಲ್ಲೂಕಿನ ಗಳಗಿ ಹುಲಕೊಪ್ಪ ಗ್ರಾಮದ ಎಂಸಿಎಸ್ ಶಾಲೆ ಆವರಣದಲ್ಲಿ ಸಸಿ ನೆಟ್ಟು ವಿಶ್ವ ಪರಿಸರ ದಿನ ಆಚರಣೆ ಮಾಡಿದರು.
ತಾಲ್ಲೂಕಿನ ಗಳಗಿ ಹುಲಕೊಪ್ಪ ಗ್ರಾಮದ ಎಂಸಿಎಸ್ ಶಾಲೆ ಆವರಣದಲ್ಲಿ ಸಸಿ ನೆಟ್ಟು ವಿಶ್ವ ಪರಿಸರ ದಿನ ಆಚರಣೆ ಮಾಡಿದರು.   

ಕಲಘಟಗಿ: ಪರಿಸರ ಉಳಿಸಿ ಬೆಳೆಸುವುದರಿಂದ ಪ್ರಾಣಿ ಪಕ್ಷಿ ಜೀವ ಸಂಕುಲದೊಂದಿಗೆ ಮನುಷ್ಯ ಕೂಡಾ ಆರೋಗ್ಯವಂತನಾಗಿ ಬದುಕಲು ಸಾಧ್ಯ ಎಂದು ಪಿಡಿಒ ಎ.ಎಚ್.ಮನಿಯಾರ ತಿಳಿಸಿದರು.

ಕಲಘಟಗಿ ತಾಲ್ಲೂಕಿನ ಗಳಗಿ ಹುಲಕೊಪ್ಪ ಗ್ರಾಮದ ಎಂಸಿಎಸ್ ಶಾಲೆ ಆವರಣದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಸಸಿ ನೆಟ್ಟು ಆಚರಿಸಿ ಮಾತನಾಡಿದರು.

ಸಸಿ ನೆಡುವುದರ ಮೂಲಕ ಅದರ ಪಾಲನೆ ಪೋಷಣೆ ಮಾಡಿದರೆ ದೊಡ್ಡ ಮರವಾಗಿ ನಮಗೆ ಉತ್ತಮ ಗಾಳಿ, ನೆರಳು, ಫಸಲು ಕೂಡಾ ನೀಡುತ್ತದೆ. ಎಲ್ಲರೂ ಗಿಡ ನೆಟ್ಟು ಪರಿಸರ ಉಳಿಸುವ ಕಡೆ ಗಮನ ಹರಿಸೋಣ ಎಂದರು.

ADVERTISEMENT

ಶಾಲೆಯ ಮುಖ್ಯಶಿಕ್ಷಕಿ ಕಲಾಲ್, ಶಿಕ್ಷಕ ಚರಂತಿಮಠ, ಶಿವಲಿಂಗಯ್ಯ ಹಿರೇಮಠ, ರಾಜು ಹುಬ್ಬಳ್ಳಿ, ರವಿ ಹಾಗೂ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.