ADVERTISEMENT

ರಾಮಮಂದಿರ ಉದ್ಘಾಟನೆ: ಜ.22ರಂದು ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2024, 14:19 IST
Last Updated 13 ಜನವರಿ 2024, 14:19 IST

ಹುಬ್ಬಳ್ಳಿ: ‘ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆ ಜ.22ರಂದು ನಡೆಯಲಿದ್ದು, ಈ ಪ್ರಯುಕ್ತ ಕರ್ನಾಟಕ ರಾಜ್ಯ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ ವತಿಯಿಂದ ಪಂಚ ಟ್ರಸ್ಟ್ ಕಮಿಟಿಗಳ ವ್ಯಾಪ್ತಿಯ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಅಶೋಕ ಕಾಟವೆ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಶ್ರೀರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಎಲ್ಲ ದೇವಸ್ಥಾನಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಜಿಲ್ಲೆಯಲ್ಲಿ ಸಮಾಜದ 22 ಪಂಚಟ್ರಸ್ಟ್‌ಗಳ ಅಡಿ 100 ದೇವಸ್ಥಾನಗಳಿದ್ದು, ಅಲ್ಲಿ ವಿಶೇಷ ಪೂಜೆ, ದೀಪೋತ್ಸವ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮಗಳು ಜರುಗಲಿವೆ’ ಎಂದರು.

‘ನಗರದ ದುರ್ಗಾದೇವಿ, ತುಳಜಾಭವಾನಿ, ಆಂಜನೇಯ, ವಿಠ್ಠಲ ಮಂದಿರಗಳಲ್ಲಿಯೂ ಪೂಜೆ, ಭಜನಾ ಕಾರ್ಯಕ್ರಮಗಳು ನಡೆಯಲಿವೆ. ವಿಎಕೆ ಫೌಂಡೇಷನ್ ವತಿಯಿಂದ ಜ.19ರಂದು ಗೋಪನಕೊಪ್ಪದ ವೃತ್ತದಲ್ಲಿ ಕರಸೇವಕರನ್ನು ಸನ್ಮಾನಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

ಮುಖಂಡ ಭಾಸ್ಕರ ಜಿತೂರಿ ಮಾತನಾಡಿ, ಜ.22ರಂದು ರಂದು ಬೆಳಿಗ್ಗೆ 7 ಗಂಟೆಗೆ ಕಮರಿಪೇಟೆಯ ರಾಮಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ, ಅಭಿಷೇಕ  ಜರುಗಲಿದೆ ಎಂದು ಹೇಳಿದರು.

ಮುಖಂಡ ವಿಠ್ಠಲಸಾ ಲದವಾ ಮಾತನಾಡಿ, ದಾಜಿಬಾನಪೇಟೆಯ ವೃತ್ತದಲ್ಲಿ ಜ.22ರಂದು ಶ್ರೀರಾಮನ  ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುವುದು ಎಂದರು.

ರಾಜು ಜರತಾರಘರ್ ಮಾತನಾಡಿ, ಶಿವಶಕ್ತಿ ಯುವ ಸಂಘದಿಂದ ದಿವಟೆ ಓಣಿಯಲ್ಲಿ ರಂಗೋಲಿ ಸ್ಪರ್ಧೆ, ರಾಮನ ವೇಷಭೂಷಣ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ನೀಲಕಂಠಸಾ ಜಡಿ, ಡಿ.ಕೆ.ಚವ್ಹಾಣ, ವೆಂಕಟೇಶ ಕಾಟವೆ, ಗೋಪಾಲ ಬದ್ದಿ, ದೀಪಕ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.