ಹುಬ್ಬಳ್ಳಿ: ದೀಪಾವಳಿ ಹಬ್ಬದ ಅಂಗವಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆಯಿಂದ ಹೆಚ್ಚುವರಿ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ವ್ಯವಸ್ಥೆ ಮಾಡಲಾಗಿದೆ.
ಅಕ್ಟೋಬರ್ 30ರಂದು ಎಸ್ಎಸ್ಎಸ್ ಹುಬ್ಬಳ್ಳಿ– ಯಶವಂತಪುರ ಒನ್ ವೇ ವಿಶೇಷ ಎಕ್ಸ್‌ಪ್ರೆಸ್ (07323) ರೈಲು ಹುಬ್ಬಳ್ಳಿಯಿಂದ ಬೆಳಿಗ್ಗೆ 8 ಗಂಟೆಗೆ ಹೊರಟು ಮಧ್ಯಾಹ್ನ 3.45ಕ್ಕೆ ಯಶವಂತಪುರ ರೈಲು ನಿಲ್ದಾಣ ತಲುಪಲಿದೆ. ಹಾವೇರಿ, ರಾಣೆಬೆನ್ನೂರು ಮೊದಲಾದ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ.
ಅಕ್ಟೋಬರ್ 31ರಂದು ಕಲಬುರಗಿ–ಎಸ್‌ಎಸ್‌ಎಸ್ ಹುಬ್ಬಳ್ಳಿ ಒನ್ ವೇ ವಿಶೇಷ ಎಕ್ಸ್‌ಪ್ರೆಸ್ (07325) ರೈಲು ಕಲಬುರಗಿಯಿಂದ ಬೆಳಿಗ್ಗೆ 6.15ಕ್ಕೆ ಹೊರಟು ಸಂಜೆ 4 ಗಂಟೆಗೆ ಹುಬ್ಬಳ್ಳಿ ತಲುಪಲಿದೆ. ಬಳ್ಳಾರಿ, ಹೊಸಪೇಟೆ, ಗದಗ ಮೊದಲಾದ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಹೆಚ್ಚುವರಿ ಬೋಗಿ ಜೋಡಣೆ: ಅಕ್ಟೋಬರ್ 25ರಿಂದ ನವೆಂಬರ್ 24ರವರೆಗೆ ಕೆಎಸ್ಆರ್ ಬೆಂಗಳೂರು–ಸಾಂಗ್ಲಿ ರಾಣಿ ಚನ್ನಮ್ಮ ಡೈಲಿ ಎಕ್ಸ್‌ಪ್ರೆಸ್ (16589), ಕೆಎಸ್ಆರ್ ಬೆಂಗಳೂರು–ಬೆಳಗಾವಿ ಡೈಲಿ ಎಕ್ಸ್‌ಪ್ರೆಸ್ (20653), ಅ.26ರಿಂದ ನ.25ರವರೆಗೆ ಸಾಂಗ್ಲಿ–ಕೆಎಸ್ಆರ್ ಬೆಂಗಳೂರು ರಾಣಿ ಚನ್ನಮ್ಮ ಡೈಲಿ ಎಕ್ಸ್‌ಪ್ರೆಸ್ (16590), ಬೆಳಗಾವಿ-ಕೆಎಸ್ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್ (20654), ಅ.25ರಿಂದ ನ.25ರವರೆಗೆ ಯಶವಂತಪುರ–ಹಜರತ್ ನಿಜಾಮುದ್ದೀನ್ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ (12649), ಅ. 27ರಿಂದ ನ.28ರವರೆಗೆ ಹಜರತ್ ನಿಜಾಮುದ್ದೀನ್–ಯಶವಂತಪುರ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ (12650) ರೈಲಿಗೆ ಹೆಚ್ಚುವರಿ ಒಂದು ಎಸಿ 3-ಟೈರ್ ಎಕಾನಮಿ ಬೋಗಿ ಜೋಡಿಸಲಾಗುತ್ತಿದೆ.
ಅ.24ರಿಂದ ನ.26ರವರೆಗೆ ಯಶವಂತಪುರ–ಹಜರತ್ ನಿಜಾಮುದ್ದೀನ್ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ (12629), ಅ.30ರಿಂದ ನ.29ರವರೆಗೆ ಹಜರತ್ ನಿಜಾಮುದ್ದೀನ್–ಯಶವಂತಪುರ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ (12630), ಅ.25ರಿಂದ ನ. 22ರವರೆಗೆ ಎಸ್ಎಸ್ಎಸ್ ಹುಬ್ಬಳ್ಳಿ–ಬನಾರಸ್ ಸಾಪ್ತಾಹಿಕ ಎಕ್ಸ್‌ಪ್ರೆಸ್ (17323), ಅ. 27ರಿಂದ ನ.24ರವರೆಗೆ ಬನಾರಸ್–ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ಎಕ್ಸ್‌ಪ್ರೆಸ್ (17324) ರೈಲಿಗೆ ಹೆಚ್ಚುವರಿ ಒಂದು ಎಸಿ 3-ಟೈರ್ ಬೋಗಿ ಜೋಡಿಸಲಾಗುತ್ತಿದೆ.
ಅ.26ರಿಂದ ನ.23ರವರೆಗೆ ಯಶವಂತಪುರ–ಚಂಡೀಗಢ ದ್ವಿ–ಸಾಪ್ತಾಹಿಕ ಎಕ್ಸ್‌ಪ್ರೆಸ್ (22685), ಅ.29ರಿಂದ ನ.26ರವರೆಗೆ ಚಂಡೀಗಢ–ಯಶವಂತಪುರ ದ್ವಿ–ಸಾಪ್ತಾಹಿಕ ಎಕ್ಸ್‌ಪ್ರೆಸ್ (22686), ಅ.31ರಿಂದ ನ.28ರವರೆಗೆ ಯಶವಂತಪುರ–ಪಂಢರಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ (16541), ನವೆಂಬರ್ 1ರಿಂದ 29ರವರೆಗೆ ಪಂಢರಪುರ–ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ (16542) ರೈಲಿಗೆ ಹೆಚ್ಚುವರಿ ಒಂದು ಸ್ಲೀಪರ್ ಕ್ಲಾಸ್ ಬೋಗಿ ಜೋಡಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.