ADVERTISEMENT

ಮಾನವ ಬದುಕಿಗೆ ಅಧ್ಯಾತ್ಮ ಅಗತ್ಯ: ಬಸವಲಿಂಗಸ್ವಾಮಿಜಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 16:14 IST
Last Updated 26 ನವೆಂಬರ್ 2024, 16:14 IST
ನವಲಗುಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಿದ್ದಾರೂಢ ಸ್ವಾಮಿಯ ಸಮಕಾಲಿನ ಮಹಾತ್ಮರ ಸಂಗಮ ಯಾತ್ರೆ ಮೆರವಣಿಗೆ ನಡೆಯಿತು 
ನವಲಗುಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಿದ್ದಾರೂಢ ಸ್ವಾಮಿಯ ಸಮಕಾಲಿನ ಮಹಾತ್ಮರ ಸಂಗಮ ಯಾತ್ರೆ ಮೆರವಣಿಗೆ ನಡೆಯಿತು    

ನವಲಗುಂದ: ‘ಆಧ್ಯಾತ್ಮಿಕ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸುವುದರ ಜತೆಗೆ ಮಾನವ ಬದುಕಿಗೆ ಅಧ್ಯಾತ್ಮ ಅಗತ್ಯ ಎಂಬುದನ್ನು ತಮ್ಮ ಪವಾಡಗಳ ಮೂಲಕ ಮಾನವ ಕುಲಕ್ಕೆ ತಿಳಿಸಿದ ಸಮಕಾಲಿನ ಸಂತ, ಮಹಾತ್ಮರ ಸಂದೇಶಗಳನ್ನು ತಲುಪಿಸುವಲ್ಲಿ ಮಹಾತ್ಮರ ಸಂಗಮಯಾತ್ರೆ ಯಶಸ್ವಿಯಾಗಲಿ‘ ಎಂದು ಗವಿಮಠದ ಬಸವಲಿಂಗಸ್ವಾಮಿಜಿ ನುಡಿದರು.

ಸೋಮವಾರ ಸಂಜೆ ಪಟ್ಟಣಕ್ಕೆ ಆಗಮಿಸಿದ ಹುಬ್ಬಳ್ಳಿಯ ಸಿದ್ಧಾರೂಠ ಸ್ವಾಮಿಯ ಸಮಕಾಲಿನ ಮಹಾತ್ಮರಾದ ಗುರುನಾಥಾರೂಢರು, ನವಲಗುಂದ ಅಜಾತ ನಾಗಲಿಂಗಸ್ವಾಮಿ, ಸಂತ ಶಿಶುನಾಳ ಶರೀಫರು,  ಗರಗದ ಮಡಿವಾಳ ಸ್ವಾಮಿಗಳ ಮೂರ್ತಿಗಳ ಸಂಗಮ ಯಾತ್ರೆ ಹಾಗೂ ಅಂಬಾರಿ ಉತ್ಸವವನ್ನು ಸ್ವಾಗತ ಮಾಡಿಕೊಂಡು ಮಾತನಾಡಿದ ಅವರು, ‘ಸಮಕಾಲಿನ ಮಹಾತ್ಮರೆಲ್ಲ ಧಾರವಾಡ ಜಿಲ್ಲೆಯಲ್ಲಿ ಆಧ್ಯಾತ್ಮಿಕ ಬೀಜ ಬಿತ್ತುವ ಮೂಲಕ ಭಕ್ತಸಾಗರವನ್ನೆ ಕಟ್ಟಿಕೊಂಡ ಮಹಾನ್ ಚೇತನರಾಗಿದ್ದರು‘ ಎಂದರು.

ಶಾಸಕ ಎನ್.ಎಚ್.ಕೋನರಡ್ಡಿ ಅವರು, ‘ಸಮಕಾಲಿನ ಮಹಾತ್ಮರ ಚರಿತ್ರೆಗಳನ್ನು ನೋಡಿದಾಗ ಆಡಂಬರವಿಲ್ಲದ ಜೀವನದೊಂದಿಗೆ ಜಾತಿಮತಗಳ ಅಂತರವಿಲ್ಲದೇ ಆಧ್ಯಾತ್ಮಿಕ ಚಿಂತನೆಗಳನ್ನು ಜನರಲ್ಲಿ ಬೆಳೆಸುವಲ್ಲಿ ಯಶಸ್ವಿ ಸಿದ್ಧಪುರುಷರಾಗಿದ್ದರು. ಇವರ ಹಾಕಿಕೊಟ್ಟ ಸಂಸ್ಕಾರಗಳೊಂದಿಗೆ ಮಠಗಳು ಮುನ್ನಡೆಯುವ ಮೂಲಕ ಸೌಹಾರ್ದತೆಗೆ ಸಾಕ್ಷಿಗಳಾಗಿವೆ’ ಎಂದರು.

ADVERTISEMENT

ನಾಗಲಿಂಗ ಮಠದ ಶ್ರೀ ವೀರಯ್ಯ ಸ್ವಾಮಿಜಿ, ಅಣ್ಣಪ್ಪ ಬಾಗಿ, ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ, ಅಣ್ಣಪ್ಪ ಬಾಗಿ,ಬಾಬಣ್ಣ ಹುರಕಡ್ಲಿ, ಅಶೋಕ ಮದಗುಣಕಿ, ಶಿವಾಜಿ ಕಲಾಲ, ಲಕ್ಷ್ಮಣ ಹಳ್ಳದ, ವಿಜಯಗೌಡ ಪಾಟೀಲ್, ಮನೋಜಕುಮಾರ ಗದಗೀನ, ಪ್ರಲ್ಹಾದ ಮಲ್ಲೂರ ಸೇರಿದಂತೆ ನೀಲಮ್ಮನ ಕೆರೆಯಿಂದ ನಾಗಲಿಂಸ್ವಾಮಿ ಮಠದ ವರೆಗೆ ಜರುಗಿದ ಮೆರವಣೆಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.