ADVERTISEMENT

ಸರ್ಕಾರದ ಜನಪರ ಯೋಜನೆ ಅರಿವಿಗೆ ಬೀದಿ ನಾಟಕ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2019, 13:53 IST
Last Updated 18 ಸೆಪ್ಟೆಂಬರ್ 2019, 13:53 IST
ಹುಬ್ಬಳ್ಳಿ ತಾಲ್ಲೂಕಿನ ದೇವರ ಗುಡಿಹಾಳದಲ್ಲಿ ಮಹಿಳಾ ಕಲಾವಿದರು ಬೀದಿ ನಾಟಕ ಪ್ರದರ್ಶಿಸಿದರು
ಹುಬ್ಬಳ್ಳಿ ತಾಲ್ಲೂಕಿನ ದೇವರ ಗುಡಿಹಾಳದಲ್ಲಿ ಮಹಿಳಾ ಕಲಾವಿದರು ಬೀದಿ ನಾಟಕ ಪ್ರದರ್ಶಿಸಿದರು   

ಹುಬ್ಬಳ್ಳಿ: ಸರ್ಕಾರದ ಜನಪರ ಯೋಜನೆಗಳು ಹಾಗೂ ಪರಿಸರ ಜಾಗೃತಿ ಕುರಿತು, ತಾಲ್ಲೂಕಿನ ದೇವರ ಗುಡಿಹಾಳ ಮತ್ತು ಪರಸಾಪೂರ ಗ್ರಾಮದಲ್ಲಿ ಬಫೋ ವೆಂಚರ್ಸ್ ತಂಡದ ಮಹಿಳಾ ಕಲಾವಿದರು ಬುಧವಾರ ಬೀದಿ ನಾಟಕ ಹಾಗೂ ತಂತ್ರ ಸಂಸ್ಥೆಯ ಕಲಾವಿದರಿಂದ ಜನಪದ ಸಂಗೀತ ಕಾರ್ಯಕ್ರಮ ಜರುಗಿತು.

ಕಲಾವಿದರಾದ ಸುಕನ್ಯಾ ಗಡವೀರ, ಶಶಿಕಲಾ ಪುರೂಟಿ, ಕೌಶಲ್ಯ ಹೊಸಮನಿ, ಅರ್ಚನಾ ಕುಲಕರ್ಣಿ, ಪ್ರೇಮಾ ಕಾಳೆ, ಶೋಭಾ ಬಡಿಗೇರ, ನಾಗರತ್ನ ಮತ್ತಿತರರು ಕಾರ್ಯಕ್ರಮಗಳನ್ನು ನಿರ್ವಹಿಸಿದರು. ವಾರ್ತಾ ಇಲಾಖೆಯ ಮಲ್ಲಿಕಾರ್ಜುನ ಕಂಪಲಿ ಹಾಗೂ ಅಕ್ಷಯ ದೊಡ್ಡಮನಿ ಇದ್ದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಗ್ರಾಮ ಸಂಪರ್ಕ ಮತ್ತು ಗ್ರಾಮ ವಾಹಿನಿ ಕಾರ್ಯಕ್ರಮದ ಅಂಗವಾಗಿ ಸೆ. 18ರಿಂದ 27ರವರೆಗೆ ಈ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ವಿವಿಧ ಗ್ರಾಮಗಳಲ್ಲಿ ಕಾರ್ಯಕ್ರಮಗಳು ನಡೆಯಲಿವೆ.

ADVERTISEMENT

ಸೆ. 19ರಂದು ರಾಯನಾಳ ಮತ್ತು ರೇವಡಿಹಾಳ, 20ಕ್ಕೆ ಗಂಗಿವಾಳ ಮತ್ತು ಬಂಜಾರ ಕಾಲೊನಿ, 21ಕ್ಕೆ ಚನ್ನಾಪುರ, ರಾಮಾಪೂರ, 22ಕ್ಕೆ ಚವರಗುಡ್ಡ ಮತ್ತು ಅಗ್ರಹಾರ ತಿಮ್ಮಸಾಗರ, 23ರಂದು ಗಿರಿಯಾಲ ಮತ್ತು ಬುಡರಸಿಂಗಿ, 24ಕ್ಕೆ ಬೆಳಗಲಿ ಮತ್ತು ಇನಾಂವೀರಾಪೂರ, 25ಕ್ಕೆ ಬಮ್ಮಸಮುದ್ರ ಮತ್ತು ಪಾಳೆ, 26ರಂದು ಕರಡಿಕೊಪ್ಪ, ಕುರ್ಡಿಕೇರಿ ಹಾಗೂ 27ರಂದು ವರೂರ ಮತ್ತು ಕಂಪ್ಲಿಕೊಪ್ಪ ಗ್ರಾಮಗಳಲ್ಲಿ ಕಾರ್ಯಕ್ರಮಗಳು ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.