ADVERTISEMENT

ಹುಬ್ಬಳ್ಳಿ: 5 ಸ್ಟಾರ್‌ ಪಡೆಯಲು ಪಾಲಿಕೆ ಕಸರತ್ತು

ಸ್ವಚ್ಛ ಸರ್ವೇಕ್ಷಣ –2022: ಹಲವು ಸುಧಾರಣೆಗೆ ಕ್ರಮ

ಹಿತೇಶ ವೈ.
Published 18 ಮೇ 2022, 3:53 IST
Last Updated 18 ಮೇ 2022, 3:53 IST
ಸಂತೋಷ್ ಯರಂಗಳಿ
ಸಂತೋಷ್ ಯರಂಗಳಿ   

ಹುಬ್ಬಳ್ಳಿ: ನಗರದಲ್ಲಿ ಕಸ ಸಂಗ್ರಹ ಹಾಗೂ ವಿಲೇವಾರಿ ನಿರ್ವಹಣೆಯಲ್ಲಿರುವ ಹಲವು ಸಮಸ್ಯೆಗಳ ನಡುವೆಯೇ ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ 2022ನೇ ಸಾಲಿನ ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿ ಗಾರ್ಬೇಜ್‌ ಫ್ರಿ ಸಿಟಿ ಐದು ಸ್ಟಾರ್‌ಗೆ ಅರ್ಜಿ ಸಲ್ಲಿಸಿದೆ.

ಪಾಲಿಕೆಯು ಈಗಾಗಲೇ ಮೂರು ಸ್ಟಾರ್‌ ಗಳಿಸಿದ್ದು, ಈ ಬಾರಿ ಐದು ಸ್ಟಾರ್‌ ಗಳಿಸುವ ಪ್ರಯತ್ನಕ್ಕೆ ಮುಂದಾಗಿದೆ. ಈ ನಡುವೆ ಒಡಿಎಫ್‌ ಪ್ಲಸ್‌ ಪ್ಲಸ್‌ (ನಗರದ ಸಾರ್ವಜನಿಕ ಮತ್ತು ಸಮುದಾಯ ಶೌಚಾಲಯಗಳು ಸ್ವಚ್ಛವಾಗಿರುಬೇಕು. ಶೌಚಾಲಯದಲ್ಲಿ ಸಾಬೂನು, ಟವೆಲ್‌ ಮತ್ತು ಮಕ್ಕಳಿಗೆ ಅನುಕೂಲಕರ ಶೌಚಾಲಯ ಸೇರಿದಂತೆ ಹಲವು ಮಾನದಂಡದ ಮೇಲೆ ನೀಡುವ) ಪ್ರಮಾಣ ಪತ್ರಕ್ಕೂ ಪಾಲಿಕೆ ಅರ್ಜಿ ಸಲ್ಲಿಸಿದೆ. ಈ ಪ್ರಮಾಣ ಪತ್ರ ಸಿಕ್ಕರೆ ಮಾತ್ರ ಪಾಲಿಕೆ 5ಸ್ಟಾರ್‌ಗೆ ಅರ್ಹತೆ ಲಭಿಸಲಿದೆ.

ನಿರ್ವಹಣೆ ಕೊರತೆ: ಉತ್ತಮ ರ್‍ಯಾಂಕಿಂಗ್‌, ಸ್ಟಾರ್‌ ಗಳಿಸುವುದರ ಹೊರತಾಗಿಯೂ ಪಾಲಿಕೆ ಹಲವು ಸುಧಾರಣೆ ಅಳವಡಿಸಿಕೊಳ್ಳಬೇಕಿದೆ. ಪ್ರಾಥಮಿಕ ಹಂತದಲ್ಲಿ ಹಸಿ ಮತ್ತು ಒಣಕಸ ವಿಂಗಡಣೆ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. ಬ್ಲಾಕ್‌ಸ್ಪಾಟ್‌ (ಎಲ್ಲೆಂದರಲ್ಲಿ ಕಸ ಎಸೆಯುವುದು) ತಪ್ಪಿಸುವುದು ಮತ್ತಷ್ಟು ಪರಿಣಾಮಕಾರಿಯಾಗಿ ಆಗಬೇಕಿದೆ.

ADVERTISEMENT

ಕಳೆದ ಬಾರಿ ಉತ್ತಮ ರ್‍ಯಾಂಕಿಂಗ್‌: ಸ್ವಚ್ಛ ಸರ್ವೇಕ್ಷಣ –2021ನೇ ಸಾಲಿನ ಅಭಿಯಾನದಲ್ಲಿ ಪಾಲಿಕೆಗೆ ಗಾರ್ಬೇಜ್‌ ಫ್ರಿ ಸಿಟಿ (ಕಸಮುಕ್ತ ನಗರ) 3 ಸ್ಟಾರ್‌ ಹಾಗೂ ಕಸ ನಿರ್ವಹಣೆ ಹಾಗೂ ಕಸ ವಿಲೇವಾರಿಯಲ್ಲಿ ಪ್ರಗತಿ ಸಾಧಿಸಿರುವುದಕ್ಕೆ ‘ವೇಗವಾಗಿ ಅಭಿವೃದ್ಧಿ ಆಗುತ್ತಿರುವ ಮಧ್ಯಮ ನಗರ’ ಎಂಬ ಪ್ರಶಸ್ತಿಗಳು ಲಭಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.