ADVERTISEMENT

ಪ್ರಯತ್ನಶೀಲ ಗುಣ ಬೆಳೆಸಿಕೊಳ್ಳಿ: ಜಯರಾಜ್‌

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2024, 15:58 IST
Last Updated 5 ಸೆಪ್ಟೆಂಬರ್ 2024, 15:58 IST
ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಎಸ್‌.ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಗಣ್ಯರು ನಮನ ಸಲ್ಲಿಸಿದರು
ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಎಸ್‌.ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಗಣ್ಯರು ನಮನ ಸಲ್ಲಿಸಿದರು   

ಧಾರವಾಡ: ಶಿಕ್ಷಕರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ, ಧೈರ್ಯ ಹಾಗೂ ಪ್ರಯತ್ನಶೀಲ ಮನೋಭಾವಗಳನ್ನು ಬೆಳೆಸಬೇಕು ಎಂದು ವಿಜಯಪುರ ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವೈ.ಎಂ.ಜಯರಾಜ್ ಹೇಳಿದರು.

ಶಿಕ್ಷಕರ ದಿನಾಚರಣೆ ಅಂಗವಾಗಿ ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಎಸ್.ರಾಧಾಕೃಷ್ಣನ್ ಸ್ಮಾರಕ ಮೂಲತತ್ವ ಉಪನ್ಯಾಸದಲ್ಲಿ ‘21ನೇ ಶತಮಾನದ ಉನ್ನತ ಶಿಕ್ಷಣದಲ್ಲಿ ಅವಕಾಶಗಳು ಮತ್ತು ಸವಾಲುಗಳು’ ಕುರಿತು ಅವರು ಮಾತನಾಡಿದರು.

ಪ್ರಸ್ತುತ ವಿದ್ಯಾರ್ಥಿಗಳಿಗೆ ಕೌಶಲ ಆಧಾರಿತ ಮತ್ತು ವೃತ್ತಿಪರ, ತಾಂತ್ರಿಕ ಸೇವಾ ಆಧಾರಿತ ಶಿಕ್ಷಣವನ್ನು ಹೆಚ್ಚು ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಮೌಲ್ಯಗಳನ್ನು ತಿಳಿಸಬೇಕು ಎಂದರು. 

ADVERTISEMENT

ಕುಲಪತಿ ಪ್ರೊ.ಕೆ.ಬಿ.ಗುಡಸಿ ಮಾತನಾಡಿ, ಶಿಕ್ಷಕರು ಪುಸ್ತಕದ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಬೋಧಿಸುವುದಕ್ಕೆ ಸೀಮಿತವಾಗಬಾರದು. ವಿದ್ಯಾರ್ಥಿಗಳಿಗೆ ಹೊಸ ವಿಚಾರಗಳು, ಸಂಶೋಧನೆಗಳು ಇತ್ಯಾದಿ ಕುರಿತು ಮಾಹಿತಿ ನೀಡಬೇಕು ಎಂದರು. 

ಪರೀಕ್ಷಾಂಗ ಕುಲಸಚಿವ ನಿಜಲಿಂಗಪ್ಪ ವೈ. ಮಟ್ಟಿಹಾಳ, ಕವಿವಿ ಮೂಲತತ್ವ ಉಪನ್ಯಾಸಗಳ ಸಂಯೋಜಕ ಮಲ್ಲಿಕಾರ್ಜುನ ಪಾಟೀಲ, ಪ್ರಸಾರಾಂಗದ ನಿರ್ದೇಶಕ ಅಶೋಕ ಹುಲಿಬಂಡಿ, ಎನ್.ಸಿದ್ದಪ್ಪ, ಸುಭಾಸಚಂದ್ರ ನಾಟೀಕಾರ, ಪ್ರೊ.ಎ.ಬಿ.ವೇದಮೂರ್ತಿ, ರವೀಂದ್ರ ಕಾಂಬಳೆ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.