ಹುಬ್ಬಳ್ಳಿ: ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ಹೋಗಲಾಡಿಸುವ ಉದ್ದೇಶದಿಂದ ಪಠ್ಯಪುಸ್ತಕ ನೋಡಿ ಬರೆಯುವ (ಓಪನ್ ಬುಕ್ ಎಕ್ಸಾಮ್) ವ್ಯವಸ್ಥೆಯನ್ನು ಮಾಸಿಕ ಟೆಸ್ಟ್‌ನಲ್ಲಿ ಮಾತ್ರ ಜಾರಿಗೆ ತರುವ ಬಗ್ಗೆ ಚಿಂತನೆ ನಡೆದಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್. ಮಹೇಶ್ ಹೇಳಿದರು.
‘ವಿದ್ಯಾರ್ಥಿಗಳಲ್ಲಿನ ಪರೀಕ್ಷಾ ಭಯ ಹೋಗಲಾಡಿಸಲು ಹೊಸ ವ್ಯವಸ್ಥೆ ಅಗತ್ಯವಿದೆ. ಈಗ ಪರೀಕ್ಷಾ ಕೊಠಡಿಗಳು ಪೊಲೀಸ್ ಠಾಣೆಗಳಂತಾಗಿವೆ. ಪಠ್ಯಪುಸ್ತಕ ನೋಡಿ ಮಾಸಿಕ ಟೆಸ್ಟ್ ಬರೆಯುವುದರಿಂದ ವಾರ್ಷಿಕ ಪರೀಕ್ಷೆ ಎದುರಿಸುವುದು ಸುಲಭವಾಗುತ್ತದೆ. ಈ ಪದ್ಧತಿ ಮಾಸಿಕ ಟೆಸ್ಟ್‌ಗೆ ಮಾತ್ರ ಜಾರಿಗೆ ತರುವ ಚಿಂತನೆಯಿದೆ’ ಎಂದು ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
‘ಇದರ ಬಗ್ಗೆ ಬಜೆಟ್ ಬಳಿಕ ಶಿಕ್ಷಣ ತಜ್ಞರು, ಅಧಿಕಾರಿಗಳ ಜೊತೆ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಾಗುತ್ತದೆ’ ಎಂದರು.
ಇಂಥವರನ್ನೇ ಶಿಕ್ಷಣ ಸಚಿವರನ್ನಾಗಿ ಮಾಡಬೇಕು ಎಂದು ಸರ್ಕಾರಿ ಶಿಕ್ಷಕರು ರಸ್ತೆಗಿಳಿದು ಪ್ರತಿಭಟನೆ ಮಾಡುತ್ತಾರಲ್ಲ ಎನ್ನುವ ಪ್ರಶ್ನೆಗೆ ‘ಮುಂದೆ ಹೀಗೆ ಮಾಡದಂತೆ ಸುತ್ತೋಲೆ ಹೊರಡಿಸುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.