ಹುಬ್ಬಳ್ಳಿ: ನಗರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಉಣಕಲ್ ಕೆರೆ ಶುಕ್ರವಾರ ಕೋಡಿ ಹರಿಯಿತು. ಕೆರೆ ಬಳಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಡಿಗೆ ಪಥ ನಿರ್ಮಿಸಲಾಗಿದ್ದು, ಕೋಡಿ ಹರಿಯುವುದನ್ನು ವೀಕ್ಷಿಸಲು ಜನರಿಗೆ ಅನುಕೂಲವಾಗಿದೆ.
ಉಣಕಲ್ ಕೆರೆ ಮೈದುಂಬಿದೆ. ಪ್ರತಿವರ್ಷ ಕೋಡಿ ಹರಿದಾಗಲೂ ಜನರು ತಂಡಗಳಲ್ಲಿ ಬಂದು, ವೀಕ್ಷಿಸುತ್ತಾರೆ. ಆದರೆ, ಕೆರೆಯಲ್ಲಿ ಸಂಗ್ರಹವಾದ ತ್ಯಾಜ್ಯ ಕೋಡಿ ಹರಿವ ನೀರಿನ ಮೂಲಕ ರಾಜಕಾಲುವೆ ಸೇರುತ್ತಿದೆ. ರಾಜಕಾಲುವೆ ತುಂಬಿದರೆ, ಮನೆಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.