ADVERTISEMENT

ಉಪ್ಪಿನಬೆಟಗೇರಿ: ಮರೇವಾಡ ಬಸವಣ್ಣ ರಥೋತ್ಸವ ನಾಳೆ

​ಪ್ರಜಾವಾಣಿ ವಾರ್ತೆ
Published 22 ಮೇ 2024, 6:04 IST
Last Updated 22 ಮೇ 2024, 6:04 IST
ಧಾರವಾಡ ತಾಲ್ಲೂಕಿನ ಮರೇವಾಡ ಗ್ರಾಮದ ಬಸವಣ್ಣ ಮೂರ್ತಿಗೆ ಅಲಂಕಾರ ಮಾಡಿರುವುದು
ಧಾರವಾಡ ತಾಲ್ಲೂಕಿನ ಮರೇವಾಡ ಗ್ರಾಮದ ಬಸವಣ್ಣ ಮೂರ್ತಿಗೆ ಅಲಂಕಾರ ಮಾಡಿರುವುದು   

ಉಪ್ಪಿನಬೆಟಗೇರಿ: ಧಾರವಾಡ ತಾಲ್ಲೂಕಿನ ಸುಕ್ಷೇತ್ರ ಮರೇವಾಡ ಗ್ರಾಮದ ಬಸವಣ್ಣ (ನಂದೀಶ್ವರ) ದೇವರ ಜಾತ್ರಾ ಮಹೋತ್ಸವದ ಪ್ರಯುಕ್ತ ಮೇ 23ರಂದು ರಥೋತ್ಸವ ನಡೆಯಲಿದೆ.

ಮೇ 22ರಂದು ರಾತ್ರಿ ಗ್ರಾಮದ ಬೀದಿಗಳಲ್ಲಿ ವಿವಿಧ ವಾದ್ಯಮೇಳದೊಂದಿಗೆ ನಂದಿಕೋಲು, ಉಚ್ಚಯ್ಯಬಂಡಿ, ಬಸವಣ್ಣ ಮೂರ್ತಿಯ ಪಲ್ಲಕ್ಕಿ ಉತ್ಸವ ಜರುಗಲಿದೆ.

ಮೇ 23ರಂದು ಬೆಳಿಗ್ಗೆ ದೇವಸ್ಥಾನದ ಅರ್ಚಕರಾದ ಶೇಕರಯ್ಯ ಹಿರೇಮಠ ಹಾಗೂ ಅಂಕಲಯ್ಯ ಯರಗಂಬಳಿಮಠ ಅವರು ಬಸವಣ್ಣ (ನಂದೀಶ) ಮೂರ್ತಿಗೆ ನೂರೊಂದು ಬಿಲ್ವಾರ್ಚನೆ, ಮಹಾರುದ್ರಾಭಿಷೇಕ ಹಾಗೂ ವಿವಿಧ ಪೂಜಾ ಕಾರ್ಯಕ್ರಮ ನೆರವೇರಿಸುವರು. ಅಮ್ಮಿನಬಾವಿ ಪಂಚಗೃಹ ಹಿರೇಮಠದ ಅಭಿನವ ಶಾಂತಲಿಂಗ ಸ್ವಾಮೀಜಿ ಮಹಾಪ್ರಸಾದಕ್ಕೆ ಚಾಲನೆ ನಿಡುವರು.

ADVERTISEMENT

ಅಂದು ಸಂಜೆ 4.30ಕ್ಕೆ ಅಮ್ಮಿನಭಾವಿಯ ಬಸವರಾಜ ಪೂಜಾರ ಹಾಗೂ ಮರೇವಾಡ, ಸುತ್ತಮುತ್ತಲಿನ ಗ್ರಾಮಸ್ಥರ ಸಮ್ಮುಖದಲ್ಲಿ ಮಹಾರಥೋತ್ಸವ ಜರುಗಲಿದೆ. ರಾತ್ರಿ ಭಜನಾ ಸ್ಪರ್ಧೆ ನಡೆಯಲಿವೆ ಎಂದು ಮರೇವಾಡ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮಹಾಂತೇಶ ಮುಂಡಾಸ ತಿಳಿಸಿದ್ಧಾರೆ. 

‘ಮರೇವಾಡದ ಬಸವಣ್ಣ (ನಂದೀಶ್ವರ) ದೇವರ ಜಾತ್ರಾ ಮಹೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ವಿವಿಧ ಸ್ವಾಮೀಜಿಗಳು ಪಾಲ್ಗೊಳ್ಳುತ್ತಾರೆ. ವಿವಿಧೆಡೆಯ ಭಕ್ತರು ಇಲ್ಲಿಗೆ ಬಂದು ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತು, ತೀರಿಸಿ ಹೋಗುತ್ತಾರೆ’ ಎನ್ನುತ್ತಾರೆ ಮರೇವಾಡ ಬಸವಣ್ಣ ದೇವಸ್ಥಾನದ ಸಮಿತಿ ಅಧ್ಯಕ್ಷ ರುದ್ರಪ್ಪ ಕುಂದಗೋಳ.

ಧಾರವಾಡ ತಾಲ್ಲೂಕಿನ ಮರೇವಾಡ ಗ್ರಾಮದ ಬಸವಣ್ಣ ( ನಂದೀಶ) ದೇವರ ದೇವಸ್ಥಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.