ಹುಬ್ಬಳ್ಳಿ: ಪಂಚಮಸಾಲಿ ಜನಾಂಗ ಒಗ್ಗಟ್ಟಾದರೆ ರಾಜ್ಯದ ರಾಜಕೀಯ ಚಿತ್ರಣವೇ ಬದಲಾಗುತ್ತದೆ ಎಂದು ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸೋಮನಗೌಡ ಎಂ.ಮಾಲಿಪಾಟೀಲ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಏರ್ಪಡಿಸಿದ್ದ ಧಾರವಾಡ ಜಿಲ್ಲಾ ಪಂಚಮಸಾಲಿ ಸಮಾಜದ ಸಭೆಯಲ್ಲಿ ಮಾತನಾಡಿದರು.
ರಾಜ್ಯವ್ಯಾಪಿ ಪ್ರವಾಸ ಕೈಗೊಂಡು ಕನಿಷ್ಠ ಐದು ಲಕ್ಷಕಿಂತಲೂ ಹೆಚ್ಚು ಹೊಸ ಸದಸ್ಯರನ್ನು ನೋಂದಣಿ ಮಾಡಿಸಲಾಗುವುದು. ಸಮಾಜದ ಸಂಘವನ್ನು ಮತ್ತಷ್ಟು ಗಟ್ಟಿ ಮಾಡಲಾಗುವುದು. ಪಂಚಮಸಾಲಿ ಸಮಾಜದ ಮೂರು ಪೀಠಗಳಲ್ಲಿಯೂ ನಿತ್ಯ ದಾಸೋಹದ ಜೊತೆಗೆ ಸಮಾಜದ ಬಡಮಕ್ಕಳಿಗೆ ವಿದ್ಯಾಭ್ಯಾಸ ನೀಡುವಂತಹ ಯೋಜನೆಗಳನ್ನು ರೂಪಿಸಿಕೊಳ್ಳುತ್ತೇವೆ ಎಂದರು.
ಸಮಾಜದ ಮುಖಂಡರಾದ ಎಂ.ಎಂ.ನುಚ್ಚಿ, ಎನ್.ಎಸ್.ಬಿರಾದಾರ, ಜಿ.ಜಿ.ದ್ಯಾವನಗೌಡ್ರ, ಎಚ್.ವಿ.ಬೆಳಗಲಿ, ರಾಜಶೇಖರ ಕರಕನ್ನವರ, ಶಿವಶಂಕರ ಬಳಿಗಾರ, ವಿರೂಪಾಕ್ಷಪ್ಪ ಲಟ್ಟೆ, ಎಂ.ಕೆ.ಮನಗೊಂಡ, ರಮೇಶ ಯಾದವಾಡ, ಸುರೇಶ ಲಿಂಬಿಕಾಯಿ, ಡಿ.ಬಿ.ಬಾರಿಕಾಯಿ, ಎಸ್.ಕೆ.ಕೊಟ್ರೇಶ್, ವಿನೋದ್ ಅಲಾದಿ, ಸಿದ್ದೇಶ್ ಕಬಾಡರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.