ADVERTISEMENT

‘ಸಮಾಜ ಸುಧಾರಿಸುವ ಬರಹ’

ಬರಹಗಾರರ ಸಂಘದ ಪದಾಧಿಕಾರಿಗಳ ಪದಗ್ರಹಣ

​ಪ್ರಜಾವಾಣಿ ವಾರ್ತೆ
Published 11 ಜನವರಿ 2023, 6:26 IST
Last Updated 11 ಜನವರಿ 2023, 6:26 IST
ಅಣ್ಣಿಗೇರಿಯ ಸದ್ಗುರು ಸಮರ್ಥ ಡಾ.ಎ.ಸಿ.ವಾಲಿ ಆಶ್ರಮದಲ್ಲಿ ನಡೆದ ಬರಹಗಾರರ ಸಂಘದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು
ಅಣ್ಣಿಗೇರಿಯ ಸದ್ಗುರು ಸಮರ್ಥ ಡಾ.ಎ.ಸಿ.ವಾಲಿ ಆಶ್ರಮದಲ್ಲಿ ನಡೆದ ಬರಹಗಾರರ ಸಂಘದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು   

ಅಣ್ಣಿಗೇರಿ: ‘ಬರಹದಿಂದ ಬದುಕನ್ನು ಕಟ್ಟಿಕೊಳ್ಳುವ ಮೂಲಕ ಉತ್ತಮ ಪ್ರಜೆಯಾಗಿ ಬೆಳೆಯಬಹುದು. ಬರಹಕ್ಕೆ ತನ್ನದೇ ಆದ ಬೆಲೆ ಇದೆ’ ಎಂದು ಸದ್ಗುರು ಸಮರ್ಥ ಡಾ. ಎ.ಸಿ. ವಾಲಿ ಗೂರೂಜಿ ಹೇಳಿದರು.

ಸ್ಥಳೀಯ ಸದ್ಗುರು ಸಮರ್ಥ ಡಾ. ಎ.ಸಿ. ವಾಲಿ ಆಶ್ರಮದಲ್ಲಿ ಹಮ್ಮಿಕೊಂಡಿದ್ದ ನೂತನ ಬರಹಗಾರರ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಹನಿ ಮಸಿ ದೇಶಕ್ಕೆಲ್ಲ ಬಿಸಿ ಎನ್ನುವ ಮಾತು ನಿಜವಾಗಿದೆ. ಬರಹಗಾರರ ಲೇಖನಿ ಎಷ್ಟು ಹರಿತವಾಗಿರುತ್ತದೆ ಎಂಬುವುದು ಅದನ್ನು ಅನುಭವಿಸಿದವರಿಗೆ ತಿಳಿಯುತ್ತದೆ. ಬರಹದ ಮೂಲಕ ಸಮಾಜ ಸುಧಾರಣೆಗೆ ಮುಂದಾಗಬೇಕು, ಆಗ ಮಾತ್ರ ಸಂಘ ಸಾರ್ಥಕವಾಗುತ್ತದೆ’ ಎಂದು ಹೇಳಿದರು.

ADVERTISEMENT

ಬರಹಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭೀಮರಾಶಿ ಹೂಗಾರ, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿರೇಶ ಕುಬಸದ ಮಾತನಾಡಿದರು. ನೂತನ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಉಮೇಶ ಬಿಲ್ಲಹದ್ದಣ್ಣವರ, ಉಪಾಧ್ಯಕ್ಷರಾಗಿ ಎಂ.ವಿ. ಮುತ್ತಲಗೇರಿ ಹಾಗೂ ಎಸ್.ವಿ. ಕುರಡಗಿ, ಕಾರ್ಯದರ್ಶಿಯಾಗಿ ಎ.ಆರ್.ಅಕ್ಕಿ ನೇಮಕಗೊಂಡರು.

ಸದಸ್ಯರಾಗಿ ಎಂ.ಜೆ.ಮುಳಗುಂದ, ಬಿ.ವಿ. ಅಂಗಡಿ, ಎನ್.ಎಂ. ಸುಂಕದ, ಎನ್.ಎಸ್. ಮೇಲ್ಮುರಿ, ಮಂಜುನಾಥ ಮಂಗೋಣಿ, ಈರಪ್ಪ ಗುರಿಕಾರ, ಜಗದೀಶ ಗಾಣಿಗೇರ, ಮಂಜುನಾಥ ತಿಗಡಿ, ಸವಿತಾ ಡಬರಿ, ದೀಪಾ ಲಕ್ಷ್ಮೇಶ್ವರ, ನಾಗವೇಣಿ ಕೋಳಿವಾಡ, ಸವಿತಾ ಪೂಜಾರ ನೇಮಕಗೊಂಡರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಗಂಗಾ ಹಂದಿಗೋಳ ಬಹುಮಾನ ನೀಡಿದರು. ಶರಣಬಸಪ್ಪನವರು ದೇಶಮುಖ, ಶಿವಯೋಗಿ ಸುರಕೋಡ, ಈಶ್ವರಪ್ಪ ಉಳ್ಳಾಗಡ್ಡಿ, ನಿತೀನ ಗಾಣಿಗೇರ, ಪ್ರಶಾಂತ ಹಂದಿಗೋಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.