ADVERTISEMENT

ಇ– ಸ್ಕೂಟರ್ ಶೋರೂಂಗೆ ಬೆಂಕಿ: 150ಕ್ಕೂ ಅಧಿಕ ಸ್ಕೂಟರ್‌ಗೆ ಹಾನಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2022, 19:00 IST
Last Updated 24 ಜೂನ್ 2022, 19:00 IST
ಮಂಗಳೂರಿನ ನಾಗುರಿಯಲ್ಲಿ ಶುಕ್ರವಾರ ಎಲೆಕ್ಟ್ರಿಕ್‌ ಸ್ಕೂಟರ್‌ ಮಳಿಗೆ ಇರುವ ಕಟ್ಟಡಕ್ಕೆ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿಕೊಂಡಿದ್ದನ್ನು ಅಗ್ನಿಶಾಮಕ ಇಲಾಖೆ ಸಿಬ್ಬಂದಿ ನಂದಿಸಿದರು
ಮಂಗಳೂರಿನ ನಾಗುರಿಯಲ್ಲಿ ಶುಕ್ರವಾರ ಎಲೆಕ್ಟ್ರಿಕ್‌ ಸ್ಕೂಟರ್‌ ಮಳಿಗೆ ಇರುವ ಕಟ್ಟಡಕ್ಕೆ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿಕೊಂಡಿದ್ದನ್ನು ಅಗ್ನಿಶಾಮಕ ಇಲಾಖೆ ಸಿಬ್ಬಂದಿ ನಂದಿಸಿದರು   

ಮಂಗಳೂರು: ನಗರದ ನಾಗುರಿಯಲ್ಲಿ ಶುಕ್ರವಾರ ಒಕಿನವಾ ಎಲೆಕ್ಟ್ರಿಕ್ ಸ್ಕೂಟರ್ ಶೋರೂಂಗಳಿಗೆ ಬೆಂಕಿ ಬಿದ್ದ ಪರಿಣಾಮ 150ಕ್ಕೂ ಅಧಿಕ ಸ್ಕೂಟರ್‌ಗಳು ಸುಟ್ಟಿವೆ.

ಶಾರ್ಟ್‌ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಬೆಳಿಗ್ಗೆ ಮಳಿಗೆ ಸಿಬ್ಬಂದಿ, ಕೆಲಸಕ್ಕೆ ಬಂದಾಗ ಹೊಗೆ ಬರುತ್ತಿರುವುದು ಕಾಣಿಸಿದೆ. ನಂತರ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದರೂ, ಅಷ್ಟೊತ್ತಿಗಾಗಲೇ ಬೆಂಕಿಯ ಕೆನ್ನಾಲಿಗೆ ಮಳಿಗೆಯನ್ನು ಆವರಿಸಿತ್ತು. ಶೋರೂಂ ಮಾಲೀಕ ಪ್ರಶಾಂತ್ ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದಾರೆ.

‘ಮಂಗಳೂರಿನ ಶೋರೂಂನಲ್ಲಿ ಅಗ್ನಿ ಅನಾಹುತ ಸಂಭವಿಸಿರುವುದು ದುರದೃಷ್ಟಕರ. ವಿದ್ಯುತ್ ಶಾರ್ಟ್‌ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿದೆ ಎಂದು ಡೀಲರ್ ತಿಳಿಸಿದ್ದಾರೆ. ಈ ಬಗ್ಗೆ ಡೀಲರ್‌ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ. ಸುರಕ್ಷತೆ ಒಕಿನವದ ಆದ್ಯತೆಯಾಗಿದೆ. ನಮ್ಮ ಎಲ್ಲ ಡೀಲರ್‌ಶಿಪ್‌ಗಳಲ್ಲಿ ಅಧಿಕ ಗುಣಮಟ್ಟದ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ’ ಎಂದು ಒಕಿನವಾ ಆಟೊಟೆಕ್ ವಕ್ತಾರರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.