ADVERTISEMENT

ಶಿರಡಿಗೆ ಹೊರಟ ಮೊದಲ ‘ಭಾರತ್‌ ಗೌರವ್‌’ ರೈಲು

ಪಿಟಿಐ
Published 14 ಜೂನ್ 2022, 15:02 IST
Last Updated 14 ಜೂನ್ 2022, 15:02 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕೊಯಮತ್ತೂರು: ಭಾರತೀಯ ರೈಲ್ವೆಯ ‘ಭಾರತ್‌ ಗೌರವ್‌’ ಯೋಜನೆಯ ಅಡಿ, ಕೊಯಮತ್ತೂರು ಮತ್ತು ಶಿರಡಿ ನಡುವೆ ಕಾರ್ಯಾಚರಿಸಲಿರುವ ಮೊದಲ ಖಾಸಗಿ ನಿರ್ವಹಣೆಯ ರೈಲಿಗೆ ಇಲ್ಲಿ ಚಾಲನೆ ನೀಡಲಾಯಿತು.

ತಿರುಪುರ, ಈರೋಡ್, ಸೇಲಂ, ಜೋಳರಪೇಟೆ, ಬೆಂಗಳೂರಿನ ಯಲಹಂಕ, ಧರ್ಮಾವರ, ಮಂತ್ರಾಲಯ ರಸ್ತೆ (ಇಲ್ಲಿ ಐದು ಗಂಟೆ ನಿಲುಗಡೆಗೊಳ್ಳಲಿದೆ) ಮತ್ತು ವಾಡಿಯಲ್ಲಿ ಈ ರೈಲಿಗೆ ನಿಲುಗಡೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಯಮತ್ತೂರಿನ ನಾರ್ಥ್‌ ರೈಲು ನಿಲ್ದಾಣದಿಂದ ಮಂಗಳವಾರ ಸಂಜೆ 6ಕ್ಕೆ ಹೊರಟಿರುವ ರೈಲು ಗುರುವಾರ ಬೆಳಿಗ್ಗೆ 7.25ಕ್ಕೆ ಶಿರಡಿಯ ಸಾಯಿನಗರಕ್ಕೆ ತಲುಪಲಿದೆ ಎಂದಿದ್ದಾರೆ.

ADVERTISEMENT

ಒಂದು ದಿನದ ನಿಲುಗಡೆಯ ಬಳಿಕ ಶುಕ್ರವಾರ ಸಾಯಿ ನಗರದಿಂದ ಹೊರಡಲಿರುವ ಈ ರೈಲು ಶನಿವಾರ ಮಧ್ಯಾಹ್ನ 12 ಗಂಟೆಗೆ ಕೊಯಮತ್ತೂರು ನಾರ್ಥ್‌ಗೆ ತಲುಪಲಿದೆ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.