ರೋಣ: ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಬೇಸತ್ತ ಜನ ಈ ಬಾರಿ ಬಿಜೆಪಿಯನ್ನು ಬೆಂಬಲಿಸಲಿದ್ದು, ರಾಜ್ಯದಲ್ಲಿ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ’ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು.
ರೋಣ ಪಟ್ಟಣದ ವೀರಭದ್ರೇಶ್ವರ ಸಾಂಸ್ಕೃತಿಕ ಭವನದಲ್ಲಿ ವಿವಿಧ ಪಕ್ಷಗಳನ್ನು ತೊರೆದು ಬಿಜೆಪಿ ಸೇರ್ಪಡೆಗೊಂಡ ನೂರಾರು ಕಾರ್ಯಕರ್ತರನ್ನು ಬುಧವಾರ ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.
ಕೇಂದ್ರದಲ್ಲಿ ಆಡಳಿತದಲ್ಲಿರುವ ಮೋದಿ ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಜನರು ಒಪ್ಪಿದ್ದಾರೆ. 21 ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿದ್ದು ಮುಂಬರುವ ದಿನಗಳಲ್ಲಿ ಕರ್ನಾಟಕ ಬಿಜೆಪಿ ಅಧಿಕಾರಕ್ಕೆ ಒಳಪಡಲಿದೆ’ ಎಂದರು.
ರವಿ ದಂಡಿನ, ರಾಜಣ್ಣ ಹೂಲಿ, ಶಿವಣ್ಣ ನವಲಗುಂದ, ಮುತ್ತಣ್ಣ ಸಂಗಳದ, ಮೈಲಾರಪ್ಪ ದೇಶಣ್ಣವರ, ಅಶೋಕ ದೇಶನ್ನವರ, ಅಬ್ದುಲಸಾಬ್ ಹೊಸಮನಿ, ವಿಜಯ ನವಲಗುಂದ, ವಿರೇಶ ಸಂಗನಗೌಡ್ರ, ರಾಜು ನವಲ
ಗುಂದ, ಜಗದೀಶ ಕೊಳ್ಳಿ, ನಿಂಗಪ್ಪ ಮಾಡಲಗೇರಿ, ಮುದಿಯಪ್ಪ ಕೊಪ್ಪದ, ಕುಮಾರ ಭಂಡಾರಿ, ಶರಣಪ್ಪ ಗದ್ದಿ, ಯಲ್ಲಪ್ಪಗೌಡ ಚನ್ನಪ್ಪಗೌಡ್ರ, ಮಾಚಿದೇವ ಮಡಿವಾಳರ, ಬಸನಗೌಡ ಪಾಟೀಲ, ಪುಂಡಪ್ಪ ಅಮರಗೋಳ, ಲೋಕಪ್ಪ ನವಲಗುಂದ, ಸಂತೋಷ ದರನೆಪ್ಪಗೌಡ್ರ, ಎಚ್.ವೈ.ಹೊಂಬಳ, ವಿರೇಶ ಬಳ್ಳೊಳ್ಳಿ ಬಿಜೆಪಿ ಸೇರಿದರು.
ಮುತ್ತಣ್ಣ ಲಿಂಗನಗೌಡ್ರ, ಸುಭಾಸ್ ಅಳ್ಳೊಳ್ಳಿ, ಶಿವಾನಂದ ಜಿಡ್ಡಿಬಾಗಿಲ, ಬಸವರಾಜ ಕೊಟಗಿ, ಅಶೋಕ ನವಲ
ಗುಂದ, ಸಂತೋಷ ಕಡಿವಾಲ,ರಮೇಶ ತಳವಾರ, ಶಬ್ಬೀರ ಖಾಜಿ, ಬಸವಂತಪ್ಪ ತಳವಾರ, ಅನೀಲ ಪಲ್ಲೇದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.