ADVERTISEMENT

ಫಕೀರೇಶ್ವರ ಮಠದ ಅಭಿವೃದ್ಧಿಗೆ ₹1 ಕೋಟಿ ಮಂಜೂರು

​ಪ್ರಜಾವಾಣಿ ವಾರ್ತೆ
Published 26 ಜುಲೈ 2023, 14:43 IST
Last Updated 26 ಜುಲೈ 2023, 14:43 IST
ಶಿರಹಟ್ಟಿಯ ಫಕ್ಕಿರೇಶ್ವರ ಮಠಕ್ಕೆ ಭೇಟಿ ನೀಡಿದ ಸಚಿವ ಎಚ್.ಕೆ. ಪಾಟೀಲ, ಪ್ರವಾಸೋದ್ಯಮ ಇಲಾಖೆಯಿಂದ ಮಂಜೂರಾದ ಅನುದಾನದ ಆದೇಶ ಪ್ರತಿಯನ್ನು ಹಿರಿಯ ಶ್ರೀಗಳಾದ ಫಕೀರ ಸಿದ್ದರಾಮ ಸ್ವಾಮೀಜಿಗೆ ಹಸ್ತಾಂತರಿಸಿದರು
ಶಿರಹಟ್ಟಿಯ ಫಕ್ಕಿರೇಶ್ವರ ಮಠಕ್ಕೆ ಭೇಟಿ ನೀಡಿದ ಸಚಿವ ಎಚ್.ಕೆ. ಪಾಟೀಲ, ಪ್ರವಾಸೋದ್ಯಮ ಇಲಾಖೆಯಿಂದ ಮಂಜೂರಾದ ಅನುದಾನದ ಆದೇಶ ಪ್ರತಿಯನ್ನು ಹಿರಿಯ ಶ್ರೀಗಳಾದ ಫಕೀರ ಸಿದ್ದರಾಮ ಸ್ವಾಮೀಜಿಗೆ ಹಸ್ತಾಂತರಿಸಿದರು    

ಶಿರಹಟ್ಟಿ: ಸಾಮರಸ್ಯದ ಸಂದೇಶ ಸಾರುವ ಜ.ಫಕೀರೇಶ್ವರ ಮಠಕ್ಕೆ ಆಗಮಿಸುವ ಪ್ರವಾಸಿಗರಿಗೆ ಮೂಲ ಸೌಲಭ್ಯ ಕಲ್ಪಿಸುವ ಕಾಮಗಾರಿಗೆ ಮಂಜೂರಾದ ₹1 ಕೋಟಿ ವೆಚ್ಚದ ನಡುವಳಿಗಳ ಪ್ರತಿಯನ್ನು ಸಚಿವ ಎಚ್.ಕೆ. ಪಾಟೀಲ ಹಿರಿಯ ಶ್ರೀಗಳಾದ ಫಕೀರ ಸಿದ್ಧರಾಮ ಸ್ವಾಮೀಜಿಗೆ ಹಸ್ತಾಂತರಿಸಿದರು.

ಸಚಿವ ಎಚ್.ಕೆ.ಪಾಟೀಲ ಮಾತನಾಡಿ, ಜೂನ್ ತಿಂಗಳಲ್ಲಿ ಶ್ರೀ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಉಭಯ ಶ್ರೀಗಳಿಂದ ಹಾಗೂ ಭಕ್ತಾಧಿಗಳಿಂದ ಹಲವು ಬೇಡಿಕೆಗಳ ಮನವಿ ಸಲ್ಲಿಸಲಾಗಿತ್ತು. ಅವುಗಳಲ್ಲಿ ಪ್ರಥಮವಾಗಿ ಶ್ರೀಮಠಕ್ಕೆ ಬರುವ ಭಕ್ತರು ಮತ್ತು ಪ್ರವಾಸಿಗರಿಗೆ ಮೂಲ ಸೌಲಭ್ಯ ಕಲ್ಪಿಸಲು ₹1 ಕೋಟಿ ಅನುದಾನ ನೀಡಲಾಗಿದೆ. ಅಲ್ಲದೆ ಮಠಕ್ಕೆ ಆನೆಮರಿ ಕೊಡುವ ಬೇಡಿಕೆಯನ್ನಿಟ್ಟಿದ್ದು, ಅದು ಕೂಡಾ ಪ್ರಗತಿಯಲ್ಲಿದೆ. ಶ್ರೀಮಠಕ್ಕೆ ಸಂಬಂಧಿಸಿದಂತೆ ಉಳಿದ ಬೇಡಿಕೆಗಳನ್ನು ಕೂಡಾ ಶೀಘ್ರದಲ್ಲಿ ಈಡೇರಿಸುವುದಾಗಿ ಭರವಸೆ ನೀಡಿದರು.

ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಸಚಿವರು ಆಶ್ವಾಸನೆ ಕೊಟ್ಟಂತೆ ಸರ್ಕಾರದ ಅನುದಾನದ ಆದೇಶ ಪ್ರತಿಯನ್ನು ಶ್ರೀ ಮಠಕ್ಕೆ ತಂದು ಪೂಜ್ಯರಿಗೆ ಹಸ್ತಾಂತರಿಸಿದ್ದು, ಅವರ ಕ್ರಿಯಾ ಶೀಲತೆಗೆ ಹಿಡಿದ ಕನ್ನಡಿಯಾಗಿದೆ. ಶ್ರೀಮಠದ ಬಗ್ಗೆ ಅವರಿಗೆ ಹಾಗೂ ಅವರ ಕುಟುಂಬಕ್ಕೆ ಅಪಾರವಾದ ಭಕ್ತಿ, ಗೌರವವಿದೆ. ಶ್ರೀಮಠ ಹಾಗೂ ಶಿರಹಟ್ಟಿ ಅಭಿವೃದ್ಧಿಗೆ ಉತ್ಸುಕರಾಗಿರುವ ಸಚಿವರಿಗೆ ಶ್ರೀಮಠದಿಂದ ಅಭಿನಂದಿಸುತ್ತೇವೆ ಎಂದರು.

ADVERTISEMENT

ಮಾಜಿ ಶಾಸಕ ಡಿ.ಆರ್. ಪಾಟೀಲ, ಸುಜಾತಾ ದೊಡ್ಡಮನಿ, ಹುಮಾಯೂನ ಮಾಗಡಿ, ಡಾ.ಸುನೀಲ ಬುರಬುರೆ, ಅಜ್ಜು ಪಾಟೀಲ, ಅಪ್ಪಣ್ಣ ಪಾಟೀಲ, ಪಿ.ವಿ.ಪರಬ, ಮಂಜುನಾಥ ಘಂಟಿ, ಅಶ್ರಫ್ ಢಾಲಾಯತ, ಗುಳಪ್ಪ ಕರಿಗಾರ, ಮಾಬುಸಾಬ ಲಕ್ಷ್ಮೇಶ್ವರ, ಅಲ್ಲಾಬಕ್ಷಿ ನಗಾರಿ, ಪ್ರಭು ಬುರಬುರೆ, ತಹಶೀಲ್ದಾರ ಅನೀಲಕುಮಾರ ಬಡಿಗೇರ, ಸಿಪಿಐ ವಿಕಾಸ ಲಮಾಣಿ ಪಿಎಸ್‌ಐ ಈರಣ್ಣ ರಿತ್ತಿ, ಸಿದ್ದರಾಯ ಕಟ್ಟಿಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.