ADVERTISEMENT

ನರೇಗಲ್ | ಉಕ್ಕಿ ಹರಿದ ಜಕ್ಕಲಿ ಹಳ್ಳ; ಸಂಚಾರಕ್ಕೆ ಅಡ್ಡಿ

ಅಗಸರ ಹಳ್ಳಕ್ಕೆ ಸೇತುವೆ ನಿರ್ಮಿಸಲು ಗ್ರಾಮಸ್ಥರ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 16:11 IST
Last Updated 23 ಅಕ್ಟೋಬರ್ 2024, 16:11 IST
ನರೇಗಲ್‌ ಸಮೀಪದ ಜಕ್ಕಲಿ ಗ್ರಾಮದ ಅಗಸರಹಳ್ಳ ಬುಧವಾರ ಸುರಿದ ಮಳೆಯಲ್ಲಿ ಉಕ್ಕಿ ಹರಿಯುತ್ತಿರುವುದು
ನರೇಗಲ್‌ ಸಮೀಪದ ಜಕ್ಕಲಿ ಗ್ರಾಮದ ಅಗಸರಹಳ್ಳ ಬುಧವಾರ ಸುರಿದ ಮಳೆಯಲ್ಲಿ ಉಕ್ಕಿ ಹರಿಯುತ್ತಿರುವುದು   

ನರೇಗಲ್:‌ ಪಟ್ಟಣ ಹಾಗೂ ಹೋಬಳಿಯ ವಿವಿಧೆಡೆ ಬುಧವಾರ ಭಾರಿ ಮಳೆಯಾಗಿದ್ದು ಹಳ್ಳಗಳು ಉಕ್ಕಿ ಹರಿದಿವೆ. ನರೇಗಲ್‌ ಸಮೀಪದ ಜಕ್ಕಲಿ ಗ್ರಾಮದ ಅಗಸರ ಹಳ್ಳವು ಉಕ್ಕಿ ಹರಿದಿದ್ದರಿಂದ ಗಂಟೆಗಟ್ಟಲೆ ರೋಣ- ಜಕ್ಕಲಿ -ನರೇಗಲ್ ಮಾರ್ಗದ ಸಂಚಾರಕ್ಕೆ ತೊಂದರೆಯಾಗಿ ಜನರು ಪರದಾಡಿದರು.

ಜಕ್ಕಲಿ ಗ್ರಾಮದಿಂದ ರೋಣ ಕಡೆಗೆ ಹೋಗುವಾಗ ಗ್ರಾಮದ ಸಮೀಪದಲ್ಲಿರುವ ಅಗಸರ ಹಳ್ಳಕ್ಕೆ ಅಬ್ಬಿಗೇರಿ ಮಾರ್ಗದ ಹೊಲಗಳಿಂದ, ಶೆರೆಹಳ್ಳದ ದಾರಿಯ ಹೊಲಗಳಿಂದ, ತೋಟಗಂಟಿ ಗ್ರಾಮದ ವ್ಯಾಪ್ತಿಗೆ ಒಳಪಡುವ ಮಸಾರಿ ಭೂಮಿಯ ಹೊಲಗಳಿಂದ ಹಾಗೂ ಜಕ್ಕಲಿ ಗ್ರಾಮದ ಚರಂಡಿ ರಸ್ತೆಯ ಮೂಲಕ ಅಪಾರ ಪ್ರಮಾಣದ ನೀರು ಹರಿದು ಬರುತ್ತದೆ. ಮಳೆ ಬಂದಾಗ ಇಲ್ಲಿನ ಜನರಿಗೆ ಸಮಸ್ಯೆ ಉದ್ಭವಿಸುವುದು ಸರ್ವೇಸಾಮಾನ್ಯವಾಗಿದೆ.

ಜಕ್ಕಲಿ ಗ್ರಾಮದ ವಿವಿಧೆಡೆ ಹೊಲಗಳಲ್ಲಿ ಕಾಮಗಾರಿ ನಡೆಸಿರುವ ಬಹುರಾಷ್ಟ್ರೀಯ ಪವನ ವಿದ್ಯುತ್‌ ಖಾಸಗಿ ಕಂಪನಿಯವರು ತಮ್ಮ ಅತಿ ಭಾರದ ವಾಹನಗಳ ಓಡಾಟಕ್ಕಾಗಿ ಹಾಗೂ ರಸ್ತೆಗಾಗಿ ಇಲ್ಲಿನ ಹಳ್ಳಕ್ಕೆ ಅಪಾರ ಪ್ರಮಾಣದಲ್ಲಿ ಗರಸು ಹಾಕಿದ್ದಾರೆ. ಹಳ್ಳದ ನೀರು ಹರಿದು ಹೋಗಲು ಕಿರಿದಾದ ಬಾಯಿ ಇರುವ ಪೈಪ್‌ಗಳನ್ನು ಅಳವಡಿಸಿದ್ದಾರೆ.

ADVERTISEMENT

ಸದ್ಯ ಪೈಪ್‌ಗಳಲ್ಲಿ ಗರಸು ಹಾಗೂ ಇತರೆ ತ್ಯಾಜ್ಯ ಸಂಗ್ರಹವಾಗಿ ನೀರು ಸರಾಗವಾಗಿ ಹರಿದು ಹೋಗದೆ ಡಾಂಬಾರು ರಸ್ತೆಯಲ್ಲಿ ಅಪಾರ ಪ್ರಮಾಣದ ನೀರು ನಿಲ್ಲುತ್ತಿದೆ. ಗರಸು ಹಾಕಿ ಮರೆತಿರುವ ಖಾಸಗಿ ಕಂಪನಿಯವರಿಂದ ಸೇತುವೆ ನಿರ್ಮಾಣ ಮಾಡಿಸಬೇಕು ಹಾಗೂ ಅವರ ವಿರುದ್ದ ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ನರೇಗಲ್‌ ಸಮೀಪದ ಜಕ್ಕಲಿ ಗ್ರಾಮದ ಅಗಸರಹಳ್ಳ ಬುಧವಾರ ಸಂಜೆ ಸುರಿದ ಮಳೆಯಲ್ಲಿ ಉಕ್ಕಿ ಹರಿಯುತ್ತಿರುವುದು ಹಾಗೂ ಸಂಚಾರಕ್ಕಾಗಿ ಬಸ್‌ ನಲ್ಲಿನ ಜನರು ಕಾಯುತ್ತಿರುವುದು
ನರೇಗಲ್‌ ಸಮೀಪದ ಜಕ್ಕಲಿ ಗ್ರಾಮದ ಅಗಸರಹಳ್ಳ ಮಳೆ ನೀರಿಗೆ ತುಂಬಿ ಹರಿಯುವಾಗ ಟ್ರಾಕ್ಟರ್‌ ಓಡಿಸಿ ಹುಚ್ಚು ಸಾಹಸ ಮೆರೆಯುತ್ತಿರುವ ಯುವಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.