ADVERTISEMENT

ಪರಿಶಿಷ್ಟ ಸಮುದಾಯದವರನ್ನು ಮುಖ್ಯವಾಹಿನಿಗೆ ತಂದ ಬಿಜೆಪಿ: ವೀಣಕುಮಾರ ವಡ್ಡಟ್ಟಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2023, 5:46 IST
Last Updated 23 ಏಪ್ರಿಲ್ 2023, 5:46 IST
ಡಂಬಳ ಹೋಬಳಿ ಜಂತಲಿ ಶಿರೂರ, ಪೇಠಾಲೂರ, ಚುರ್ಚಿಹಾಳ, ಡೋಣಿ ಗ್ರಾಮದಲ್ಲಿ ಶನಿವಾರ ಡಂಬಳ ಮಂಡಳ ಎಸ್.ಸಿ ಮೋರ್ಚಾದ ವತಿಯಿಂದ ವಿಧಾನಸಭಾ ಚುನಾವಣೆ ಅಂಗವಾಗಿ ಪಕ್ಷದ ಸಂಘಟನೆ ಹಾಗೂ ಅಭ್ಯರ್ಥಿ ಪರ ಪ್ರಚಾರ ಮಾಡಲಾಯಿತು
ಡಂಬಳ ಹೋಬಳಿ ಜಂತಲಿ ಶಿರೂರ, ಪೇಠಾಲೂರ, ಚುರ್ಚಿಹಾಳ, ಡೋಣಿ ಗ್ರಾಮದಲ್ಲಿ ಶನಿವಾರ ಡಂಬಳ ಮಂಡಳ ಎಸ್.ಸಿ ಮೋರ್ಚಾದ ವತಿಯಿಂದ ವಿಧಾನಸಭಾ ಚುನಾವಣೆ ಅಂಗವಾಗಿ ಪಕ್ಷದ ಸಂಘಟನೆ ಹಾಗೂ ಅಭ್ಯರ್ಥಿ ಪರ ಪ್ರಚಾರ ಮಾಡಲಾಯಿತು   

ಡಂಬಳ: ‘ಕಾಂಗ್ರೆಸ್ ಪಕ್ಷ ಪರಿಶಿಷ್ಟ ಸಮುದಾಯವನ್ನು ಕೇವಲ ಮತಬ್ಯಾಂಕ್ ಆಗಿ ಮಾಡಿಕೊಂಡಿದೆ. ಆದರೆ ಬಿಜೆಪಿ ಪರಿಶಿಷ್ಟ ಸಮುದಾಯದ ಅಭಿವೃದ್ಧಿಗಾಗಿ ಹಲವು ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಮುದಾಯವನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಪ್ರಯತ್ನ ಮಾಡುತ್ತಿದೆ' ಎಂದು ಡಂಬಳ ಮಂಡಳ ಎಸ್.ಸಿ ಮೋರ್ಚಾ ಅಧ್ಯಕ್ಷ ಪ್ರವೀಣಕುಮಾರ ವಡ್ಡಟ್ಟಿ ಅಭಿಪ್ರಾಯಪಟ್ಟರು.

ಡಂಬಳ ಹೋಬಳಿ ಜಂತಲಿ ಶಿರೂರ, ಪೇಠಾಲೂರ, ಚುರ್ಚಿಹಾಳ, ಡೋಣಿ ಗ್ರಾಮದಲ್ಲಿ ಶನಿವಾರ ಡಂಬಳ ಮಂಡಳ ಎಸ್.ಸಿ ಮೋರ್ಚಾದ ವತಿಯಿಂದ ವಿಧಾನಸಭಾ ಚುನಾವಣೆ ಅಂಗವಾಗಿ ಪಕ್ಷದ ಸಂಘಟನೆ ಹಾಗೂ ಅಭ್ಯರ್ಥಿ ಕಳಕಪ್ಪ ಬಂಡಿ ಪರ ಪ್ರಚಾರದಲ್ಲಿ ಅವರು ಮಾತನಾಡಿದರು.'ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಹೆಚ್ಚಳ ಹಾಗೂ ಒಳಮೀಸಲಾತಿ ಜಾರಿಗೆ ತರುವ ಮೂಲಕ ತನ್ನ ಬದ್ಧತೆಯನ್ನು ತೋರಿಸಿದೆ’ ಎಂದರು.

ಪಕ್ಷದ ಮುಖಂಡರಾದ ನಿಂಗಪ್ಪ ಮಾದರ, ಹನಮಂತ ದೊಡ್ಡಮನಿ, ನಿಂಗಪ್ಪ ದೊಡ್ಡಮನಿ, ಶ್ರೀಕಾಂತ ಪೂಜಾರ, ಲಕ್ಷ್ಮಣ ದೊಡ್ಡಮನಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.