ADVERTISEMENT

ಹರ್ಲಾಪೂರದಲ್ಲಿ ರಕ್ತದಾನ ಶಿಬಿರ

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 15:49 IST
Last Updated 30 ಜೂನ್ 2024, 15:49 IST
ಲಕ್ಕುಂಡಿ ಸಮೀಪದ ಹರ್ಲಾಪೂರ ಗ್ರಾಮದ ಕೊಟ್ಟೂರೇಶ್ವರ ಜಾತ್ರೆ ಅಂಗವಾಗಿ ಹಮ್ಮಿಕೊಂಡ ರಕ್ತದಾನ ಶಿಬಿರದಲ್ಲಿ ಯುವಕರು ಹೆಸರು ನೋಂದಾಯಿಸಿದರು
ಲಕ್ಕುಂಡಿ ಸಮೀಪದ ಹರ್ಲಾಪೂರ ಗ್ರಾಮದ ಕೊಟ್ಟೂರೇಶ್ವರ ಜಾತ್ರೆ ಅಂಗವಾಗಿ ಹಮ್ಮಿಕೊಂಡ ರಕ್ತದಾನ ಶಿಬಿರದಲ್ಲಿ ಯುವಕರು ಹೆಸರು ನೋಂದಾಯಿಸಿದರು    

ಲಕ್ಕುಂಡಿ: ಇಲ್ಲಿಗೆ ಸಮೀಪದ ಹರ್ಲಾಪೂರ ಗ್ರಾಮದ ಕೊಟ್ಟೂರೇಶ್ವರ ಮಠದ ಜಾತ್ರೆ ಅಂಗವಾಗಿ ರಕ್ತದಾನ ಶಿಬಿರ ನಡೆಯಿತು.

ಹುಬ್ಬಳ್ಳಿಯ ರಾಷ್ಟ್ರೋತ್ತಾನ ರಕ್ತ ಕೇಂದ್ರದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಕೊಟ್ಟೂರೇಶ್ವರ ಶ್ರೀಗಳು ಉದ್ಘಾಟಿಸಿದರು.

‘ರಕ್ತ ನೀಡುವುದರಿಂದ ನಮ್ಮೊಳಗೆ ಮತ್ತೆ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ವೈದ್ಯರು ಹೇಳುವಂತೆ ಬಿಪಿ, ಮಧುಮೇಹದಿಂದ ದೂರವಿರಬಹದು. ಒಬ್ಬರು ರಕ್ತದಾನ ಮಾಡುವುದರಿಂದ ಹಲವರ ಜೀವ ಉಳಿಸಬಹುದು. ಆದ್ದರಿಂದ ವೈದ್ಯರ ಸಲಹೆ ಮೇರೆಗೆ  ಯುವಜನರು ನಿಯಮಿತವಾಗಿ ರಕ್ತದಾನ ಮಾಡಬೇಕು’ ಎಂದರು.

ADVERTISEMENT

ಗವಿಸಿದ್ದಲಿಂಗ ಸ್ವಾಮೀಜಿ, ಕೊಣ್ಣೂರಿನ ಶಿವಾನಂದ ಸ್ವಾಮೀಜಿ ಉಪಸ್ಥಿತರಿದ್ದರು.

45 ಮಂದಿ ಯುವಕರು ರಕ್ತದಾನ ಮಾಡಿದರು. ಹುಬ್ಬಳ್ಳಿಯ ಡಾ. ಎಸ್.ಕೆ.ಹಳಿಯಾಳ ಅವರ ನೇತೃತ್ವದಲ್ಲಿ ಶಿಬಿರ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.