ಲಕ್ಷ್ಮೇಶ್ವರ: ಇಲ್ಲಿನ ವಕೀಲರ ಸಂಘದಲ್ಲಿ ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ವಕೀಲರ ಸಂಘದ ಸದಸ್ಯರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಅಧ್ಯಕ್ಷ ಬಿ.ಎಸ್. ಬಾಳೇಶ್ವರಮಠ ಮಾತನಾಡಿ, ‘ಅಂಬೇಡ್ಕರ್ ನೀಡಿದ ಸಂವಿಧಾನದಲ್ಲಿ ಭಾರತೀಯನ ಹಕ್ಕು ಕರ್ತವ್ಯವಗಳನ್ನು ವಿವರಿಸಲಾಗಿದೆ. ಎಲ್ಲರೂ ಸಂವಿಧಾನದ ಬಗ್ಗೆ ಅರಿತುಕೊಂಡಿರಬೇಕು. ಹಕ್ಕುಗಳನ್ನು ಕೇಳುವುದಷ್ಟೇ ಅಲ್ಲದೇ, ಕರ್ತವ್ಯಗಳನ್ನೂ ನಿಭಾಯಿಸಲು ಮುಂದಾಗಬೇಕು. ಅಂದಾಗ ಮಾತ್ರ ಭಾರತ ಪ್ರತಿಗಪಥದಲ್ಲಿ ಸಾಗಲು ಸಾಧ್ಯ’ ಎಂದರು.
ವಕೀಲರ ಸಂಘದ ಕಾರ್ಯದರ್ಶಿ ವಿಠ್ಠಲ ನಾಯಕ, ಬಿ.ಎಸ್. ಪಾಟೀಲ್, ಎನ್.ಎಂ. ಗದಗ, ಬಿ.ಎಸ್. ಘೋಂಗಡಿ, ವಿ.ಎಸ್. ಪಶುಪತಿಹಾಳ, ಎಸ್.ಎಸ್. ಶೆಟ್ಟರ, ಐ.ಜಿ. ಹುಲಬಜಾರ, ಎಸ್.ಆರ್. ಅತ್ತಿಗೇರಿ, ಆರ್.ಎಸ್. ಮುದಗಲ್ಲ, ವಿ.ಎಂ. ಹುಡೇದಮನಿ, ಬಿ.ಎನ್. ಸಂಶಿ, ಎನ್.ಐ. ಸೊರಟೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.