ADVERTISEMENT

ದತ್ತಪೀಠ ಹಿಂದೂಗಳಿಗೆ ಉಳಿಯಬೇಕಿದೆ: ರಾಜು ಖಾನಪ್ಪನವರ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 16:10 IST
Last Updated 29 ಅಕ್ಟೋಬರ್ 2024, 16:10 IST

ಗದಗ: ‘ಶ್ರೀರಾಮ ಸೇನೆ ಹೋರಾಟದ ಫಲವಾಗಿ ಚಿಕ್ಕಮಗಳೂರಿನ ದತ್ತಪೀಠದಲ್ಲಿ ತ್ರಿಕಾಲ ಪೂಜೆ, ಹೋಮ-ಹವನ ಮಾಡಲು ಹಿಂದೂಗಳಿಗೆ ಅವಕಾಶ ದೊರೆತಿದೆ’ ಎಂದು ಶ್ರೀರಾಮ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜು ಖಾನಪ್ಪನವರ ಹೇಳಿದರು.

ದತ್ತಪೀಠದ ಸಮೀಪದ ನಾಗೇನಹಳ್ಳಿಯಲ್ಲಿ ಬಾಬಾ ಬುಡನ್‌ಗಿರಿ ಇದ್ದು, ಅದು ದತ್ತಾತ್ರೇಯ ಮಹಾರಾಜರು ತಪಸ್ಸು ಮಾಡಿದ ಸ್ಥಳವಾಗಿದೆ. ಅಲ್ಲಿನ ಮಣ್ಣು ಗಂಧದ ಸುವಾಸನೆ ಬೀರುತ್ತದೆ. ಈ ಸ್ಥಳ ಹಿಂದೂಗಳಿಗೆ ಉಳಿಯಬೇಕಿದೆ’ ಎಂದು ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನಮ್ಮ ಸಂಘನೆಯಿಂದ ದತ್ತ ಜಯಂತಿಯನ್ನು ಬಾಬಾ ಬುಡನ್‌ಗಿರಿಯ ನಾಗೇನಹಳ್ಳಿಯಲ್ಲಿ ಆಚರಣೆ ಮಾಡಲಾಗುವುದು. ನಗರದ ಮಸಾರಿಯಲ್ಲಿರುವ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ನ. 4ರಿಂದ 10ರವರೆಗೆ ದತ್ತ ಮಾಲಾಧಾರಿಗಳಾಗಿ ದತ್ತ ಹೋರಾಟದ ಬಗ್ಗೆ ಪ್ರತಿ ಮನೆಗೆ ತೆರಳಿ ಅವರಿಂದ ಅಕ್ಕಿ, ಬೆಲ್ಲ ಪಡೆದು ಅದನ್ನು ಚಿಕ್ಕಮಗಳೂರು ದತ್ತಪೀಠಕ್ಕೆ ತೆಗೆದುಕೊಂಡು ಹೋಗಲಾಗುವುದು’ ಎಂದು ತಿಳಿಸಿದರು.

ADVERTISEMENT

ಚಿಕ್ಕಮಗಳೂರು ಬಾಬಾಬುಡನ್‌ಗಿರಿ ದತ್ತಮಾಲಾ ಸಂದರ್ಭದಲ್ಲಿ ಹಿಂದೂವಾದಿಗಳಾದ ಮಾಧವಿ ಲತಾ, ಸಿ.ಟಿ.ರವಿ, ಪ್ರತಾಪ್‌ಸಿಂಹ ಸೇರಿದಂತೆ ನಾಡಿನ ಅನೇಕ ಹಿಂದೂಪರ ಹೋರಾಟಗಾರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ರಾಜ್ಯದ ಅನೇಕ ಹಿಂದೂಗಳ ಜಮೀನುಗಳು ವಕ್ಫ್‌ ಆಸ್ತಿಯಾಗಿ ಪರಿಣಮಿಸುತ್ತಿವೆ. ಇದರ ವಿರುದ್ಧ ಮುಂದಿನ ದಿನಗಳಲ್ಲಿ ಶ್ರೀರಾಮ ಸೇನೆ ಸಂಘಟನೆಯಿಂದ ಹೋರಾಟ ಮಾಡಲಾಗುವುದು ಎಂದರು.

ಮಹೇಶ್‌ ರೋಖಡೆ, ಮುತ್ತಣ್ಣ ಪವಾಡಶೆಟ್ಟರ, ಶ್ರೀರಾಮ ಸೇನೆ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಸೋಮು ಗುಡಿ, ಬಸವರಾಜ ಕುರ್ತಕೋಟಿ, ಈರಣ್ಣ ಪೂಜಾರ, ಶಿವಯೋಗಿ ಹಿರೇಮಠ, ಸತೀಶ ಕುಂಬಾರ, ಶ್ರೀನಿವಾಸ ಲಿಂಬಲಗುತ್ತಿ, ಈರಪ್ಪ ಹೆಬಸೂರ, ಸಿದ್ದು ಯಳವತ್ತಿ, ಬಸವರಾಜ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.