ನರಗುಂದ: ಬೆಳಕಿನ ಹಬ್ಬ ದೀಪಾವಳಿ ಬರದ ನಡುವೆಯೂ ಭಾನುವಾರದಿಂದ ಮೂರು ದಿನಗಳ ನಡೆಯುತ್ತಿದ್ದು ಮಂಗಳವಾರ ಬಲಿಪಾಡ್ಯ ,ಪಾಂಡವರ ಪ್ರತಿ ಷ್ಠಾಪನೆ ಪೂಜೆಯೊಂದಿಗೆ ತೆರೆ ಬೀಳಲಿದೆ. ಭಾನುವಾರ ನರಕಚತುರ್ದಶಿ ದೀಪಬೆಳಗುವುದರೊಂದಿಗೆ ಆರಂಭಗೊಂಡಿದೆ. ಸೋಮವಾರ ಗ್ರಾಮೀಣ ಪ್ರದೇಶಗಳಲ್ಲಿ ದೀಪಾವಳಿ ಅಮವಾಸ್ಯೆ ಪೂಜೆ ನಡೆದರೆ, ನಗರ ಪ್ರದೇಶಗಳಲ್ಲಿ ಪಾಡ್ಯ ಪೂಜೆ ನಡೆಯುತ್ತದೆ.
ಬೆಳಕು ಬೀರದ ದೀಪಾವಳಿ: ಮುಂಗಾರು, ಹಿಂಗಾರು ಕೈಕೊಟ್ಟ ಪರಿಣಾಮ ಬೆಳಕು ತೋರಿ ಸಂಭ್ರಮಿಸಬೇಕಾದ ದೀಪಾವಳಿ ಬೆಳಕು ಬೀರುತ್ತಿಲ್ಲ. ಸಾಂಪ್ರದಾಯಿಕವಾಗಿ ಪೂಜೆಗೆ ಸೀಮಿತ ಗೊಂಡಂತೆ ದೀಪಾವಳಿ ಆಚರಣೆ ನಡೆಯುತ್ತಿದೆ.
ವ್ಯಾಪಾರ ಅಷ್ಟಕ್ಕಷ್ಟೇ: ಪ್ರತಿ ವರ್ಷ ದೀಪಾವಳಿ. ಬಂತೆಂದರೆ ಮಾರುಕಟ್ಟೆ ತುಂಬಿತುಳುಕುತ್ತಿತ್ತು. ಆದರೆ.ಈ ಸಲ ಆ ವಾತಾವರಣ ಇರಲಿಲ್ಲ. ಬಟ್ಟೆ. ವ್ಯಾಪಾರ ಕಡಿಮೆಯಾಗಿದೆ ಎಂದು ವರ್ತಕರು ವಾಸ್ತವ ಸ್ಥಿತಿ ಬಿಚ್ಚಿಟ್ಟರು.
ತಳಿರು, ತೋರಣ ಮಾರಾಟ ಜೋರು: ದೀಪಾವಳಿ ಗೆ ಲಕ್ಷ್ಮಿ ಪೂಜೆಗೆ ಅಗತ್ಯವಿರುವ ಕಬ್ಬು, ಬಾಳೆ, ಮಾವಿನ ತಳಿರು, ಅಲಂಕಾರಿಕ ಸಾಮಗ್ರಿಗಳು ಹೆಚ್ಚಿನ ರೀತಿಯಲ್ಲಿ ಮಾರಾಟಗೊಂಡವು. ದರವು ತುಸು ಜೋರಾಗಿತ್ತು. ತರಕಾರಿ ದರವು ಕೊಂಚ ಹೆಚ್ಚಾಗಿದ್ದರಿಂದ ಗ್ರಾಹಕರು ಮಳೆ ಶಪಿಸುತ್ತಲೇ ಖರೀದಿ ಮಾಡಿದರು.
ಆಕಾಶಬುಟ್ಟಿ ಮಾರಾಟ ಜೋರು: ಸಾಂಪ್ರದಾಯಿಕವಾಗಿ ಮನೆಯಲ್ಲಿ ತಯಾರಿಸುತ್ತಿದ್ದ ಶಿವನಬುಟ್ಟಿ ಮಾಯವಾಗಿದ್ದು, ಮಾರುಕಟ್ಟೆಯಲ್ಲಿ ಸಿದ್ದ ಆಕಾಶಬುಟ್ಟಿಗಳು ಸಿಗುತ್ತಿವೆ. ತರಹೇವಾರಿ ಆಕಾಶಬುಟ್ಟಿಗಳು ಮಾರಾಟಕ್ಕಿದ್ದು ₹ 100 ರಿಂದ ₹ 600 ರವರೆಗೂ ಮಾರಾಟಕ್ಕೆ ಇದ್ದವು. ಯುವ ಸಮುದಾಯ ಇವುಗಳ. ಖರೀದಿಗೆ ಮುಗಿಬಿದ್ದಿದ್ದು ಸಾಮಾನ್ಯವಾಗಿತ್ತು.
ಮಳೆ ಕರುಣೆ ತೋರಿದ್ದರೆ ದೀಪಾವಳಿಗೆ ಮತ್ತಷ್ಟು ಕಳೆ ಬರುತ್ತಿತ್ತು. ಆದರೆ ಅಷ್ಟಾಗಿ ಸಂಭ್ರಮ ಕಾಣದೆ ಸಾಂಪ್ರದಾಯಿಕವಾಗಿ ದೀಪಾವಳಿ ಆಚರಣೆ ಮಾಡಲಾಗುತ್ತಿದೆರವಿ ಅಂಕಲಗಿ ನರಗುಂದ
ಪಾಂಡವರ ಪ್ರತಿಷ್ಠಾಪನೆ ಇಂದು ಪಾಂಡವರ ವಿಜಯೋತ್ಸವ ಆಚರಣೆಯ ದ್ಯೋತಕವಾಗಿ ಪಾಂಡವರನ್ನು ಬರಮಾಡಿಕೊಂಡು ಪಂಚ ಪಾಂಡವರ' ಪ್ರತಿಷ್ಠಾಪನೆ ಮಾಡುವ ಸಂಪ್ರದಾಯ ಈ ಭಾಗದಲ್ಲಿ ಇದೆ. ಇದನ್ನೇ ಪಾಡ್ಯದಂದು ಮನೆಯ ಪ್ರವೇಶ ದ್ವಾರದ ಎಡ ಮತ್ತು ಬಲ ಬದಿಯಲ್ಲಿ ಮಹಿಳೆಯರು ಸೆಗಣಿಯಿಂದ ತಯಾರಿಸಿದ ಸೆಗಣಿ ಗುಂಡುಗಳ ಆಕೃತಿಯ ಮೂರ್ತಿಗಳನ್ನು ಪ್ರತಿಷ್ಠಾಪಿಸುವದು ಕಂಡು ಬರುತ್ತಿದೆ. ಕೆಲವರು ದೇವರ ಮನೆಯಲ್ಲಿ ದನದ ಹಟ್ಟಿಯಲ್ಲಿ ತಿಪ್ಪೆಗಳಲ್ಲಿ ಪಾಂಡವರು ಪ್ರವೇಶ ಮಾಡಿದ್ದಾರೆ ಎಂದು ತೋರಿಸಲು ಸುಣ್ಣದ ಹೆಜ್ಜೆ ಗುರುತು ಹಾಕುತ್ತಾರೆ. ಈ ವಿಶಿಷ್ಟ ಆಚರಣೆ ದ್ವಾಪರಯುಗದ ಕಥೆಗಳನ್ನಾಧರಿಸಿ ಚಾಲನೆಗೆ ಬಂದಿದೆ. ಪಾಡ್ಯ ದಿನದಂದು ಪ್ರತಿಷ್ಠಾಪನೆಗೊಳ್ಳುವ ಪಾಂಡವ ಮೂರ್ತಿಗಳು ಮನೆಯ ಪ್ರವೇಶ ದ್ವಾರದ ಬಾಗಿಲ ಮೇಲಿನ ಮಾಳಿಗೆ ಮೇಲಿನ ಮುಂಭಾಗದ ಕುಂಬಿಯನ್ನು ಅಲಂಕರಿಸುತ್ತವೆ. ಹೀಗೆ ಮೂರು ದಿನದ ಬೆಳಕಿನ ದೀಪಾವಳಿ ಬರದ ನಡುವೆ ಆಚರಿಸಲಾಗುತ್ತಿದೆ ಚಿಣ್ಣರ ಸಂಭ್ರಮ. ಜೋರಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.