ADVERTISEMENT

ಗದಗ | ಡೆಂಗಿ ಜ್ವರ: ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 15:52 IST
Last Updated 7 ಜುಲೈ 2024, 15:52 IST
<div class="paragraphs"><p>ಸಾಂಕೇತಿಕ ಚಿತ್ರ&nbsp;</p></div>

ಸಾಂಕೇತಿಕ ಚಿತ್ರ 

   

ಗದಗ: ಡೆಂಗಿ ಜ್ವರದಿಂದ ಬಳಲುತ್ತಿದ್ದ ತಾಲ್ಲೂಕಿನ ಶಿರುಂಜ ಗ್ರಾಮದ ಬಾಲಕ ಚಿರಾಯು ಹೊಸಮನಿ (5) ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಭಾನುವಾರ ಮೃತಪಟ್ಟಿದ್ದಾನೆ.

‘ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ (ಜಿಮ್ಸ್‌) ವೈದ್ಯರು ಸೂಕ್ತ ಸಮಯದಲ್ಲಿ ಚಿಕಿತ್ಸೆ ಕೊಡದೇ ನಿರ್ಲಕ್ಷ್ಯ ತೋರಿದ್ದರಿಂದಲೇ ಮಗು ಮೃತಪಟ್ಟಿತು’ ಎಂದು ಪೋಷಕರು ಆರೋಪಿಸಿದ್ದಾರೆ.

ADVERTISEMENT

‘ಮಗುವಿಗೆ ಜ್ವರ, ವಾಂತಿ ಆಗಿತ್ತು. ಶಿರಹಟ್ಟಿ ಆಸ್ಪತ್ರೆಯಲ್ಲಿ ತೋರಿಸಿದಾಗ ಡೆಂಗಿ ಆಗಿದೆ, ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹೇಳಿದರು. ಜುಲೈ 4ರಂದು ಸಂಜೆ 6ಕ್ಕೆ ಜಿಮ್ಸ್‌ಗೆ ಹೋದೆವು. ತುರ್ತು ಸಂದರ್ಭದಲ್ಲೂ ವೈದ್ಯರು ಐಸಿಯುಗೆ ಅಡ್ಮಿಟ್‌ ಮಾಡಿಕೊಂಡು, ಚಿಕಿತ್ಸೆ ನೀಡಲಿಲ್ಲ. ಮರುದಿನ ಬೆಳಿಗ್ಗೆ 10 ಗಂಟೆ ನಂತರ ಹುಬ್ಬಳ್ಳಿಯ ಕಿಮ್ಸ್‌ಗೆ ಕರೆದುಕೊಂಡು ಹೋಗುವಂತೆ ಹೇಳಿದರು. ಜಿಮ್ಸ್‌ ವೈದ್ಯರೇ ಸರಿಯಾಗಿ ನೋಡಿದ್ದರೆ ನಮ್ಮ ಮಗ ಉಳಿಯುತ್ತಿದ್ದ’ ಎಂದು ಪೋಷಕರು ದೂರಿದ್ದಾರೆ.

‘ಡೆಂಗಿಯಿಂದ ಬಳಲುತ್ತಿದ್ದ ಶಿರುಂಜ ಗ್ರಾಮದ ಬಾಲಕನನ್ನು ಜಿಮ್ಸ್‌ಗೆ ಕರೆತಂದಿದ್ದಾಗ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ನಮ್ಮ ಆಸ್ಪತ್ರೆಯಲ್ಲಿ ಎಂಟು ಗಂಟೆಗಳ ಕಾಲ ಅಷ್ಟೇ ಇದ್ದ. ಹೆಚ್ಚಿನ ಚಿಕಿತ್ಸೆಗಾಗಿ ಬಾಲಕನನ್ನು ಪೋಷಕರು ಧಾರವಾಡಕ್ಕೆ ಕರೆದುಕೊಂಡು ಹೋಗಿದ್ದರು’ ಎಂದು ಜಿಮ್ಸ್‌ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.