ADVERTISEMENT

ನರೇಗಲ್ | ವಿದ್ಯುತ್ ಸ್ಪರ್ಶ: ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 21 ಜುಲೈ 2024, 16:14 IST
Last Updated 21 ಜುಲೈ 2024, 16:14 IST
   

ನರೇಗಲ್:‌ ಮೋಟಾರ್‌ ಮೂಲಕ ನೀರು ಏರಿಸುವಾಗ ವಿದ್ಯುತ್ ಪ್ರವಹಿಸಿ ಬಾಲಕ ಮೃತಪಟ್ಟ ಘಟನೆ ಸಮೀಪದ ಕುರುಡಗಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

ವೀರಾತಯ್ಯ ಸುರೇಶಯ್ಯ ಹಿರೇಮಠ (16) ಮೃತ. ಬೆಳಿಗ್ಗೆ 7.15ರ ಸುಮಾರಿಗೆ ಮೋಟಾರ್ ಮೂಲಕ ಸಿಂಟ್ಯಾಕ್ಸ್‌ಗೆ ನೀರು ತುಂಬಿಸುವಾಗ ಆಕಸ್ಮಿಕವಾಗಿ ಮೋಟಾರ್‌ ಹಿಡಿದಾಗ ವಿದ್ಯುತ್ ಪ್ರವಹಿಸಿ ಕೆಳಗೆ ಬಿದ್ದಿದ್ದಾನೆ. ಕೂಡಲೇ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿತಾದರೂ ಮೃತಪಟ್ಟಿರುವುದಾಗಿ ವೈದ್ಯರು ಧೃಡಪಡಿಸಿದರು.

ನರೇಗಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.